»   » 'ಚಿತ್ತಾರ'ದಲ್ಲಿ ಅಮೂಲ್ಯ : ನಾರಾಯಣ್ ಗೀಗ ಫಜೀತಿ!

'ಚಿತ್ತಾರ'ದಲ್ಲಿ ಅಮೂಲ್ಯ : ನಾರಾಯಣ್ ಗೀಗ ಫಜೀತಿ!

Posted By: Staff
Subscribe to Filmibeat Kannada

'ಚೆಲುವಿನ ಚಿತ್ತಾರ' ಚಲನಚಿತ್ರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು (ಅಮೂಲ್ಯ) ನಾಯಕಿಯಾಗಿ ಬಳಸಿಕೊಂಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆ ಚಿತ್ರದ ನಿರ್ದೇಶಕ, ಸೆನ್ಸಾರ್ ಮಂಡಲಿ ಹಾಗೂ ವಾಣಿಜ್ಯ ಮಂಡಳಿಗೆ ಮಹಿಳಾ ಆಯೋಗ ನೋಟೀಸ್ ಜಾರಿ ಮಾಡಿದೆ.
ಮತ ಚಲಾಯಿಸಲು, ಮದುವೆಯಾಗಲು, ಆಸ್ತಿ ನೋಂದಣಿ ಮಾಡಿಸಲು, ಕೆಲಸಕ್ಕೆ ಸೇರಲು ಕಡ್ಡಾಯವಾಗಿ 18ವರ್ಷ ತುಂಬಿರಬೇಕು ಎನ್ನುತ್ತದೆ ಕಾನೂನು. ಆದರೆ ಈ ಚಿತ್ರದಲ್ಲಿ 14ವರ್ಷದ ಬಾಲಕಿಯನ್ನು ಮದುವೆ ದೃಶ್ಯದಲ್ಲಿ ಚಿತ್ರಿಸಿಕೊಂಡಿರುವುದು ಖಂಡನೀಯ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. 

ಸಾಮಾಜಿಕ ಹಿತದೃಷ್ಟಿಯಿಂದ ಇಂತಹ ಚಿತ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನರಂಜನೆಯ ಹೆಸರಲ್ಲಿ ಸಿನಿಮಾ ಕ್ಷೇತ್ರ ಕಾನೂನು ಕಟ್ಟಲೆಗಳನ್ನು ಮೀರುತ್ತಿದೆ. ಈ ರೀತಿಯ ಚಿತ್ರಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ಗೆ ಹಾಗೂ ಇತರರಿಗೆ ನೀಡಲಾದ ನೋಟೀಸ್‌ಗೆ ಉತ್ತರ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಚಿತ್ರದ ನಾಯಕಿ ಅಮೂಲ್ಯ ಅಪ್ರಾಪ್ತ ವಯಸ್ಕಳಾದ ಕಾರಣ ಅವಳಿಗೆ ನೋಟೀಸ್ ನೀಡಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೂಲ್ಯ ಬಗ್ಗೆ ಇನ್ನೊಂದು ಸುದ್ದಿ :
ಈ ಚಿತ್ರವನ್ನು ಹೈಸ್ಕೂಲು ಹುಡುಗಿಯರು ನೋಡಿದರೆ ಗತಿ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada