For Quick Alerts
  ALLOW NOTIFICATIONS  
  For Daily Alerts

  ಸಬ್ಸಿಡಿ ಚಿತ್ರಗಳ ಪಟ್ಟಿ ಬಿಡುಗಡೆಗೆ ತಾರಾ ಸಡನ್ ಬ್ರೇಕ್

  By Rajendra
  |
  <ul id="pagination-digg"><li class="next"><a href="/gossips/19-subsidy-scandal-kodlu-ramakrishna-allegations-aid0052.html">Next »</a></li></ul>

  ಈ ಬಾರಿ (2009-10) ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ಭಾರಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷೆ ತಾರಾ ಅವರು ಸಬ್ಸಿಡಿ ಚಿತ್ರಗಳ ಪಟ್ಟಿ ಬಿಡುಗಡೆಯನ್ನು ತಡೆಹಿಡಿಯುವಂತೆ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

  ಹಿರಿಯ ನಟ ಹಾಗೂ ನಿರ್ಮಾಪಕ ಎಸ್. ಶಿವರಾಂ ಅವರು ಸಬ್ಸಿಡಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆಯ್ಕೆ ಸಮಿತಿಯಲ್ಲಿ ಅಭಿರುಚಿ ಚಂದ್ರು, ಮಹಾದೇವ, ರಾಮಕೃಷ್ಣ, ಬಿ ಆರ್ ಲಕ್ಷ್ಮಣರಾವ್, ಮಹಾಬಲಮೂರ್ತಿ ಕೊಡ್ಲೆಕೆರೆ, ಸುರೇಶ್ ಮಂಗಳೂರು, ಎಸ್ ಎನ್ ರವಿಶಂಕರ್ ಸದಸ್ಯರಾಗಿದ್ದಾರೆ.

  ಸಬ್ಸಿಡಿ ನೀಡುವ ವಿಚಾರದಲ್ಲಿ ಇವರೆಲ್ಲರೂ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು 'ಬೆಟ್ಟದಪುರದ ದಿಟ್ಟ ಮಕ್ಕಳು' ಚಿತ್ರದ ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾಡಿದ್ದಾರೆ. ತಮ್ಮ ಚಿತ್ರಕ್ಕೆ ರು.25 ಲಕ್ಷ ಕೊಡಿಸುವುದಾಗಿ ಆಯ್ಕೆ ಸಮಿತಿ ಸದಸ್ಯ, ಕಿರುತೆರೆ ಕಲಾವಿದ ಸುರೇಶ್ ಮಂಗಳೂರು ರು.2.5 ಲಕ್ಷ ಲಂಚ ಪಡೆದಿದ್ದಾರೆ ಎಂದು ಕೂಡ್ಲು ಆರೋಪಿಸಿದ್ದಾರೆ.

  <ul id="pagination-digg"><li class="next"><a href="/gossips/19-subsidy-scandal-kodlu-ramakrishna-allegations-aid0052.html">Next »</a></li></ul>
  English summary
  Karnataka Chalanachitra academy new chief Tara wrote a letter to the Chief Minister to stay the release of the list of eligible films for subsidy as recommended by the committee headed by veteran actor and producer Shivaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X