For Quick Alerts
ALLOW NOTIFICATIONS
For Daily Alerts

ಕನ್ನಡ ಚಿತ್ರಗಳ ಸಬ್ಸಿಡಿಯಲ್ಲಿ ಭಾರಿ ಗೋಲ್‌ಮಾಲ್

By Rajendra

Next »

« Previous

ನಾ.ಡಿಸೋಜಾ ಅವರ ಕಾದಂಬರಿ ಆಧರಿಸಿ 'ಬೆಟ್ಟದಪುರದ ದಿಟ್ಟ ಮಕ್ಕಳು' ಎಂಬ ಚಿತ್ರವನ್ನು ಅನಿವಾಸಿ ಭಾರತೀಯ ಹರ್ಷರಾಂ, ಕೂಡ್ಲು ರಾಮಕೃಷ್ಣ ಹಾಗೂ ಗುರುರಾಜ್ ಎಂಬುವವರು ನಿರ್ಮಿಸಿದ್ದರು. ಆದರೆ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಮಕ್ಕಳ ಚಿತ್ರ ಎಂಬ ಸರ್ಟಿಫಿಕೇಟ್ ನೀಡಿರಲಿಲ್ಲ. ಕಾದಂಬರಿ ಆಧಾರಿತ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರ ಮೂರೇ ದಿನಕ್ಕೆ ಎತ್ತಂಗಡಿಯಾಯಿತು.

ಇದರಿಂದ ಕಂಗಾಲಾದ ನಿರ್ದೇಶಕರು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಸಬ್ಸಿಡಿ ನೀತಿ ಪ್ರಕಾರ ಮಕ್ಕಳ ಚಿತ್ರಕ್ಕೆ ರು.25 ಲಕ್ಷ ಹಾಗೂ ಗುಣಾತ್ಮಕ ಚಿತ್ರಕ್ಕೆ ರು.10 ಲಕ್ಷ ಸಹಾಯಧನ ನೀಡಲಾಗುತ್ತದೆ. ತಮ್ಮ ಚಿತ್ರವನ್ನು ಮಕ್ಕಳ ಚಿತ್ರ ಎಂದು ಪರಿಗಣಿಸುವಂತೆ ಕೂಡ್ಲು ಮನವಿ ಮಾಡಿದ್ದರು.

ಆಯ್ಕೆ ಸಮಿತಿ ಸದಸ್ಯರಾಗಿರುವ ಸುರೇಶ್ ಮಂಗಳೂರು ಅವರು ಕೂಡ್ಲು ಅವರನ್ನು ಭೇಟಿ ಮಾಡಿ ನಿಮ್ಮ ಚಿತ್ರವನ್ನು ಮಕ್ಕಳ ಚಿತ್ರ ಪಟ್ಟಿಗೆ ಸೇರಿಸುತ್ತೇನೆ. ಅದಕ್ಕಾಗಿ ರು.6 ಲಕ್ಷ ನೀಡಿ ಕೈ ಬೆಚ್ಚಗೆ ಮಾಡಿ. ಉಳಿದ ಸದಸ್ಯರನ್ನು ತಾನು ಮ್ಯಾನೇಜ್ ಮಾಡುತ್ತೇನೆ. ತಮ್ಮ ಕೆಲಸ ಆಗುತ್ತದೆ ಎಂಬ ಮಾತುಗಳನ್ನು ಆಡಿರುವಾಗಿ ಕೂಡ್ಲು ತಿಳಿಸಿದ್ದಾರೆ.

ಆದರೆ ತಮ್ಮ ಚಿತ್ರಕ್ಕೆ ಮಕ್ಕಳ ಚಿತ್ರದ ಪಟ್ಟಿ ಇಲ್ಲವಲ್ಲ ಎಂದು ಕೂಡ್ಲು ರಾಗ ಎಳೆದಾಗ, ಸಮಗ್ರ ಚಲನಚಿತ್ರ ನೀತಿ ಪ್ರಕಾರ ಪ್ರಮಾಣ ಪತ್ರ ಅಪೇಕ್ಷಣೀಯವಾದರೂ ಕಡ್ಡಾಯವಲ್ಲ. ಆಯ್ಕೆ ಸಮಿಯ ತೀರ್ಮಾನವೇ ಅಂತಿಮ ಎಂದಿದ್ದಾರೆ. ಇದಕ್ಕೆ ಒಪ್ಪಿದ ಕೂಡ್ಲು ಅವರು ರು.2.5 ಲಕ್ಷಗಳನ್ನು ಸುರೇಶ್ ಅವರ ಖಾತೆ ಜಮೆ ಮಾಡಿದ್ದಾರೆ. ಇಲ್ಲಿಂದ ಸಬ್ಸಿಡಿ ಚಿತ್ರಗಳ ಸಮಸ್ಯೆ ಬಿಗಡಾಯಿಸಿದೆ.

Next »

« Previous

English summary
There were rumours about rampant corruption among members of selection committee constituted to select quality films that deserve subsidy from the state government. Suresh Mangalore, one of the committee members, called director Kodlu Ramakrishna, appreciating the quality of his film Bettadapurada Ditta Makkalu.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X