For Quick Alerts
ALLOW NOTIFICATIONS  
For Daily Alerts

ರಮ್ಯಾ ವಿರುದ್ಧ ಧರಣಿ ಕೂರಲಿರುವ ಗಣೇಶ್

By Mahesh
|

ಚಿತ್ರ ನಟಿ ರಮ್ಯಾ ಹಾಗೂ ದಂಡಂ ಡಿಶ್ಯೂಂ ಡಿಶ್ಯೂಂ ಅಲ್ಲಲ್ಲ ದಶಗುಣಂ ಚಿತ್ರದ ನಿರ್ಮಾಪಕ ಎ ಗಣೇಶ್ ಅವರ ನಡುವಿನ ವಿವಾದ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಆರಂಭವಾಗಿದೆ. ರಮ್ಯಾರ ಕಂಬನಿ, ಗಣೇಶರ ಪ್ರಚಾರಪ್ರಿಯತೆಗೆ ಸಿಗಬೇಕಿದ್ದ ಸಂಭಾವನೆ ಸಿಕ್ಕಿತ್ತು ಎಂದು ಎಲ್ಲರಿಗೂ ಅನ್ನಿಸಿತ್ತು. ನಿರ್ಮಾಪಕ ಮುನಿರತ್ನ ಹಾಗೂ ಸಾರಾ ಗೋವಿಂದು ಅವರ ಮಧ್ಯಸ್ಥಿಕೆಯಲ್ಲಿ ನಡೆದ ನಿರ್ಮಾಪಕರ ಸಂಘದ ಸಭ್ಹೆ ತೆಗೆದುಕೊಂಡ ನಿರ್ಣಯಗಳಿಗೆ ಗಣೇಶ್ ಕೂಡಾ ತಲೆಯಾಡಿಸಿ ಒಪ್ಪಿಕೊಂಡಿದ್ದರು. ಆದರೆ, ಕಲಾವಿದರ ಸಂಘದ ನಿರ್ಣಯವನ್ನು ಗಣೇಶ್ ಖಂಡಿಸಿದ್ದಾರೆ.

ಗಣೇಶ್ ಗುಟುರು: ರಮೇಶ್ ಅರವಿಂದ್ ಹಾಗೂ ಡೈಸಿ ಬೋಪಣ್ಣ ಮುಖ್ಯಭೂಮಿಕೆಯಲ್ಲಿರುವ ಚಿತ್ರವೊಂದಕ್ಕೆ ಗಣೇಶ್ ನಿರ್ಮಾಪಕರಾಗಿದ್ದಾರೆ. ಆ ಚಿತ್ರದ ಭವಿಷ್ಯ ಸದ್ಯಕ್ಕೆ ಏನು ಹೇಳುವಂತಿಲ್ಲ. ಈ ನಡುವೆ, ಕಲಾವಿದರ ಸಂಘದ ನಿರ್ಣಯ ಏಕಪಕ್ಷೀಯವಾಗಿದೆ. ಹಣದ ವಿಚಾರ ಬಗೆಹರಿಸಿಕೊಳ್ಳುತ್ತೇನೆ ಆದರೆ, ಕಲಾವಿದರ ಸಂಘದ ನಿರ್ಣಯಕ್ಕೆ ತಲೆಬಾಗಲು ಸಾಧ್ಯವಿಲ್ಲ. ಕರ್ನಾಟಕ ವಾಣಿಜ್ಯ ಮಂಡಳಿ(ಕೆಎಫ್ ಸಿಸಿ) ನಿರ್ಧಾರ ಅಂತಿಮ. ಆದರೆ, ಕೆಎಫ್ ಸಿಸಿ ಮಾತು ಕೇಳುವವರಿಲ್ಲ ಎಂದಿದ್ದಾರೆ. ಕೆಎಫ್ ಸಿಸಿ ಕಾರದರ್ಶಿ ಸ್ಥಾನ ಹಾಗೂ ನಿರ್ಮಾಪಕರ ಸಂಘದ ಸದಸ್ಯತ್ವಕ್ಕೆ ಗಣೇಶ್ ರಾಜೀನಾಮೆ ನೀಡಿದ್ದಾರೆ. ಸೋಮವಾರದ ದಿನ ಸಕುಟುಂಬ ಸಪರಿವಾರ ಸಮೇತ ರಮ್ಯಾ ವಿರುದ್ಧ ಧರಣಿ ಕೂರಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿದರು.

ನಿರ್ಮಾಪಕರ ಸಂಘದ ಸಭೆ ನಿರ್ಣಯದಂತೆ ರಮ್ಯಾ ಅವರಿಗೆ 3.70ಲಕ್ಷರು ಬಾಕಿ ಹಣವನ್ನು ಎರಡು ದಿನದೊಳಗೆ ಪಾವತಿಸಬೇಕು ಹಾಗೂ ಬಹಿರಂಗವಾಗಿ ಕ್ಷಮೆಯಾಚಿಸಿ ಚಿತ್ರದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಗಣೇಶ್ ಕೋರಬೇಕು ಎಂಬ ನಿರ್ಣಯವನ್ನು ಗಣೇಶ್ ಒಪ್ಪಿದ್ದರು.

ಇನ್ನೊಂದೆಡೆ ನಿರ್ಮಾಪಕರ ಸಂಘದ ಈ ನಿರ್ಣಯಗಳ ಕಾಪಿ ಹಿಡಿದುಕೊಂಡು ರಾಜ್ಯ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರು ಸಭೆ ನಡೆಸಿದರು. 37 ಕ್ರೆಸೆಂಟ್ ಹೋಟೆಲ್ ನಲ್ಲಿ ನಟಿ ರಮ್ಯಾ(ದಿವ್ಯ ಸ್ಪಂದನ) ಸೇರಿದಂತೆ ಬಿ ಸರೋಜಾದೇವಿ, ಸುಧಾರಾಣಿ, ಅನುರಾಧಾ(ತಾರಾ), ವಿಜಯ ರಾಘವೇಂದ್ರ,ಸುದೀಪ್ ಸೇರಿದಂತೆ ಸುಮಾರು ಜನ ಕಲಾವಿದರು ಪಾಲ್ಗೊಂಡಿದ್ದರು.

ಈ ಸಭೆ ನಂತರ ತೆಗೆದುಕೊಂಡ ನಿರ್ಣಯಗಳಲ್ಲಿ ಚಿತ್ರ ಬಿಡುಗಡೆಗೆ ಮುನ್ನ ಕಲಾವಿದರ ಸಂಘದಿಂದ ನಿರ್ಮಾಪಕರು ಎನ್ ಒಸಿ(No Objection Certificate) ಪಡೆಯಬೇಕು. ರಮ್ಯಾ ಅವರಿಗೆ ಗಣೇಶ್ ಕ್ಷಮೆ ಕೋರಬೇಕು. ಅಲ್ಲಿ ತನಕ ಗಣೇಶ್ ದುಡ್ಡು ಹಾಕುವ ಯಾವುದೇ ಸಿನಿಮಾದಲ್ಲಿ ಕಲಾವಿದರು ಭಾಗವಹಿಸಬಾರದು. ಎಂದು ನಿರ್ಣಯ ಕೈಗೊಳ್ಳಲಾಗಿತ್ತು.

ಕನ್ನಡ ಚಿತ್ರದಿಂದ ಸ್ವಯಂನಿವೃತ್ತಿ ಪಡೆಯುತ್ತೇನೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಚಿತ್ರರಂಗದ ಸಹವಾಸ ಸಾಕು ಎಂದು ನೊಂದು ಕಣ್ಣೀರಿಟ್ಟಿದ್ದ ರಮ್ಯಾ ಮತ್ತೆ ಬಣ್ಣ ಹಚ್ಚುತ್ತಾರಾ? ಇಲ್ಲವಾ? ಗೊತ್ತಿಲ್ಲ. ಯಾವುದಕ್ಕೂ ಕಾದು ನೋಡೋಣ.

English summary
Kannada Cinema Artists Association President Ambarish late on Saturday night ruled in favor of actress Ramya in the raging controversy with producer A Ganesh of ‘Dandam Dashagunam’. Disturbed with such decision producer A Ganesh has decided to sit on a Dharna protest in front of KFCC tomorrow with his family members.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more