For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ತಾರೆ ರಮ್ಯಕೃಷ್ಣ ವಿರುದ್ಧ ಅರೆಸ್ಟ್ ವಾರಂಟ್

  By Rajendra
  |

  ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣ ಹಾಗೂ ಆಕೆಯ ತಂಗಿ ವಿನಯಾ ಕೃಷ್ಣ ವಿರುದ್ಧ ಚೆನ್ನೈನ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ತಮ್ಮೊಂದಿಗೆ ಮಾಡಿಕೊಂಡಿದ್ದಒಪ್ಪಂದ ಉಲ್ಲಂಘಿಸಿದ ಸಂಬಂಧ ನಟಿ ಕುಟ್ಟಿ ಪದ್ಮಿನಿ ಕೋರ್ಟ್ ಮೆಟ್ಟಿಲೇರಿದ್ದರು.

  ಸನ್ ಟಿವಿಯ ಧಾರಾವಾಹಿ 'ಕಲಾಸಂ'ಗೆ ಸಂಬಂಧಿಸಿದಂತೆ ಕುಟ್ಟಿ ಪದ್ಮಿನಿ ಹಾಗೂ ರಮ್ಯಾ ಕೃಷ್ಣ ಸಹೋದರರಿಯ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವನ್ನು ಉಲ್ಲಂಘಿಸಿ ತಾವೇ ಧಾರಾವಾಹಿಯ ಕ್ರೀಯೇಟಿವ್ ಮುಖ್ಯಸ್ಥರು ಎಂದು ಪ್ರಕಟಿಸಿಕೊಂಡಿದ್ದರು ರಮ್ಯಾ ಕೃಷ್ಣ. ಬಳಿಕ ಸೊಸೈಟಿ ಆಫ್ ಟೆಲಿವಿಷನ್ ಪ್ರೊಡಕ್ಷನ್ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ತಣ್ಣಗಾಗಿತ್ತು.

  ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಈ ಧಾರಾವಾಹಿ ಮತ್ತೆ ಪ್ರಸಾರ ಕಂಡಿದೆ. ಆಗ ಕುಟ್ಟಿ ಪದ್ಮಿನಿ ಹೆಸರನ್ನು ಕೈಬಿಡಲಾಗಿತ್ತು. ಈ ಸಂಬಂಧ ಮತ್ತೆ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಈಗ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಸದ್ಯಕ್ಕೆ ರಮ್ಯ ಕೃಷ್ಣ ಸಹೋದರಿಯರ ಪರ ವಕೀಲರು ಜಾಮೀನಿನ ಪ್ರಯತ್ನದಲ್ಲಿದ್ದಾರೆ. (ಏಜೆನ್ಸೀಸ್)

  English summary
  South Indian actress Ramya Krishna is in a world of trouble as a bailable arrest warrant has been issued against her and Vinaya Krishna, her sister. This took place following a complaint filed by Kutti Padmini, who has claimed that the two of them violated a contractual agreement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X