For Quick Alerts
ALLOW NOTIFICATIONS  
For Daily Alerts

ಬೆಳಗ್ಗೆಯಿಂದ ಸಂಜೆತನಕ ನಡೆದ ರಮ್ಯಾ ರಾಮಾಯಣ

By Rajendra
|

ಕನ್ನಡ ಚಿತ್ರೋದ್ಯಮದಲ್ಲಿ ಬೆಳಗ್ಗೆ ಆರಂಭವಾದ ನಾಟಕೀಯ ಬೆಳವಣಿಗೆಗಳು ಸಂಜೆಯಾದರೂ ಮುಗಿಯುವ ಸೂಚನೆಗಳು ಕಂಡುಬಂದಿಲ್ಲ. ರಮ್ಯಾ ರಾಮಾಯಣ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗಿದ್ದು ರೋಚಕ ಅಂತ್ಯ ಕಾಣುವ ಲಕ್ಷಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಇಂದು ಬೆಳಗ್ಗಿನಿಂದ ಸಂಜೆಯ ಕ್ಷಣಕ್ಷಣಕ್ಕೆ ಬದಲಾದರಮ್ಯಾಯಣದ ಸುದ್ದಿ ತುಣುಕುಗಳು ಹೀಗಿವೆ.

ಇಂದು ಬೆಳಗ್ಗೆ ವರನಟ ಡಾ.ರಾಜ್ ಕುಮಾರ್ ಸಮಾಧಿ ಬಳಿಗೆ ದೌಡಾಯಿಸಿದ ನಿರ್ಮಾಪಕರು ಮೌನ ಪ್ರತಿಭಟನೆ ನಡೆಸಲು ಮುಂದಾದರು. ಕಲಾವಿದರ ವಿರುದ್ಧ ಧರಣಿ ಸತ್ಯಾಗ್ರಹ ನಡೆಸುವುದಾಗಿ 'ದಂಡಂ ದಶಗುಣಂ' ನಿರ್ಮಾಪಕ ಗಣೇಶ್ ಸೇರಿದಂತೆ ಹಲವರು ಘೋಷಿಸಿದರು. ಬಳಿಕ ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಮೌನ ಪ್ರತಿಭಟನೆಯಿಂದ ಹಿಂದೆ ಸರಿದರು.

ಏತನ್ಮಧ್ಯೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಅವರ ಮುಂದಾಳತ್ವದಲ್ಲಿ ರಮ್ಯಾ ರಾಮಾಯಣಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು. ಶಿವಣ್ಣನನ್ನು ಎಳೆದು ತರುವ ತೆರೆಮರೆಯ ಕಸರತ್ತುಗಳು ವಿಫಲವಾಗಿವೆ. 'ಜೋಗಯ್ಯ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಶಿವಣ್ಣ ಸಂಜೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿಯಲ್ಲಿ ತಿಳಿಸಿದ್ದಾರೆ.

ಕಡೆಗೂ ನಿರಾಶರಾಗದ ನಿರ್ಮಾಪಕರು ಫಿಲಂ ಚೇಂಬರ್ ಬಳಿಗೆ ತೆರಳಿ ಅಲ್ಲಿನ ಡಾ.ರಾಜ್ ಪುತ್ಥಳಿಗೆ ಹಾರ ಹಾಕಿ ಜೈಕಾರಗಳನ್ನು ಕೂಗಿದರು. "ನಿರ್ಮಾಪಕರೇ ಅನ್ನದಾತ ಎಂದ ಅಣ್ಣಾವ್ರಿಗೆ ಜೈ" ಎಂದು ಕೂಗಿ ತಮ್ಮ ಸಿಟ್ಟನ್ನು ಕೊಂಚ ಕಡಿಮೆ ಮಾಡಿಕೊಂಡರು. ಮಂಗಳವಾರ ಸಂಜೆ 4.30ಕ್ಕೆ ಸಭೆ ಸೇರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಏತನ್ಮಧ್ಯೆ ಫಿಲಂ ಚೇಂಬರ್ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಸುಳಿವಿಲ್ಲ.

ಇದಕ್ಕೂ ಮುನ್ನ ನಿರ್ಮಾಪಕರ ಒಂದು ಗುಂಪು ಜೆ ಪಿ ನಗರದಲ್ಲಿರುವ ಅಂಬರೀಷ್ ಅವರ ಮನೆಗೆ ಬಂದದ್ದಾಗಿ ಸುದ್ದಿ. ಆದರೆ ಅಂಬರೀಷ್ ಮಾತ್ರ ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮ ಬಿಗಿ ಪಟ್ಟನ್ನು ಸಡಿಲಿಸಿಲ್ಲ. ಅವರು ಇಂದು (ಮಾ.22) ಸಂಜೆ 7.30ಕ್ಕೆ ಸಭೆ ಸೇರಲಿದ್ದಾರೆ. ಫಿಲಂ ಚೇಂಬರ್ ಏನು ನಿರ್ಧಾರ ತೆಗೆದುಕೊಳ್ಳಲಿದೆ ಅದಕ್ಕೆ ಕಲಾವಿದರ ನಿಲುವೇನು ಎಂಬುದು ಅಂಬರೀಷ್ ಮನೆಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.

'ದಂಡಂ ದಶಗುಣಂ' ವಿವಾದ ಮೆಗಾ ಧಾರಾವಾಹಿಯಂತೆ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದರೆ ದಿಢೀರೆಂದು ಎಂಟ್ರಿ ಕೊಟ್ಟ ರಮ್ಯಾ ಮತ್ತೊಂದು ತಿರುವು ನೀಡಿದರು. ತನಗೆ ಸಂದಾಯವಾಗಿದ್ದ ರು.4 ಲಕ್ಷಗಳನ್ನು ನಿರ್ಮಾಪಕ ಮುನಿರತ್ನ ಕೈಯಲ್ಲಿ ಗಣೇಶ್ ಅವರಿಗೆ ಹಿಂತಿರುಗಿಸಿದ್ದಾರೆ. ರಮ್ಯಾ ಬಾಕಿ ಸಂಭಾವನೆಯನ್ನು ಮುನಿರತ್ನ ಮೂಲಕ ಗಣೇಶ್ ಹಿಂತಿರುಗಿಸಿದ್ದರು. ಸ್ವತಃ ಗಣೇಶ್ ಅವರೇ ತನಗೆ ರು.4 ಲಕ್ಷ ಕೊಡಲಿ. ಅದುಬಿಟ್ಟು ಮುನಿರತ್ನ ಕೈಲಿ ಕೊಟ್ಟು ಕಳುಹಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಕುಪಿತರಾದ ನಿರ್ಮಾಪಕ ಎ ಗಣೇಶ್ ಇಂದು ಸಂಜೆ ಅಂಬಿ ಮನೆಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ನಿರ್ಮಾಪಕರು ಮತ್ತು ಕಲಾವಿದರ ಜಗಳದಲ್ಲಿ ಫಿಲಂ ಚೇಂಬರ್ ಅನಾಥವಾಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಫಿಲಂ ಚೇಂಬರ್ ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

English summary
Actress Ramya and Dhandam Dhashagunam controversy, today's(Mar 22)highlights is here. Golden girl Ramya has returned Rs.4 lakh to producer Munirathna. She has asked him to return the money to producer A Ganesh. She also demanded that Ganesh has taken money from her he should come in person and give her.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more