For Quick Alerts
  ALLOW NOTIFICATIONS  
  For Daily Alerts

  ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ಎಚ್ಡಿಕೆ, ರಾಧಿಕಾ!

  By *ಉದಯರವಿ
  |

  ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ನಟಿ ರಾಧಿಕಾ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ (ಫೆ.14)ಪ್ರೇಮಿಗಳ ದಿನಾಚರಣೆಯನ್ನು ಇಬ್ಬರೂ ಆಚರಿಸಿಕೊಳ್ಳುವ ಮೂಲಕ ಮಾಧ್ಯಮಗಳ ಗಮನವನ್ನು ಸೆಳೆದಿದ್ದಾರೆ. ಈ ಬಗ್ಗೆ ಆಂಗ್ಲ ದೈನಿಕ 'ಮಿಡ್ ಡೇ' ಸಂಪೂರ್ಣ ವರದಿಯೊಂದನ್ನು ಪ್ರಕಟಿಸಿ ಇತ್ತ ಕನ್ನಡ ಚಿತ್ರರಂಗವನ್ನು ಅತ್ತ ಕುಮಾರಸ್ವಾಮಿ ಬೆಂಬಲಿಗರನ್ನು ಪುಳಕಗೊಳಿಸಿದೆ.

  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ಜಂಜಾಟಗಳಿಂದ ಒಂಚೂರು ರಿಲ್ಯಾಕ್ಸ್ ಆಗಲು ಧೂಮಪಾನ ಮತ್ತು ಮದ್ಯಪಾನಕ್ಕೆ ಶರಣಾಗಿ ತಮ್ಮ ಆರೋಗ್ಯವನ್ನು ಸಂಪೂರ್ಣ ಹಾಳುಮಾಡಿಕೊಂಡಿದ್ದರು. ಈ ದುಶ್ಚಟಗಳ ಕಾರಣ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿ ಅವರಿಗೆ ವಿಶ್ರಾಂತಿ ಅವಶ್ಯ ಎಂದು ವೈದ್ಯರು ಸೂಚಿಸಿದ್ದರಂತೆ.

  ಇದನ್ನು ಅರಿತ ರಾಧಿಕಾ, ವಿಶ್ರಾಂತಿ ಮೂಲಕ ಕುಮಾರಸ್ವಾಮಿ ಅವರಲ್ಲಿ ಒಂಚೂರು ಬದಲಾವಣೆ ತರಬಹುದು ಎಂದು ಲೆಕ್ಕಾಚಾರ ಹಾಕಿ ಅವರನ್ನು ಚಿಕ್ಕಮಗಳೂರಿಗೆ ಆಹ್ವಾನಿದ್ದರು. ಹಾಗಾಗಿ ಕುಮಾರಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರ ನೈಸ್ ವಿರುದ್ಧದ ಪ್ರತಿಭಟನೆಯನ್ನು ಅರ್ಧಕ್ಕೆ ಕೈಬಿಟ್ಟು ಚಿಕ್ಕಮಗಳೂರಿನ ರೆಸಾರ್ಟ್ ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ರಾಧಿಕಾ ಜತೆ ಕುಮಾರಸ್ವಾಮಿ ಭಿನ್ನವಾಗಿ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾಗಿ ಸುದ್ದಿ.

  ಮೂರು ದಿನಗಳ ಕಾಲ ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ರಾಧಿಕಾ ಮತ್ತು ತನ್ನ ಮೂರು ತಿಂಗಳ ಹೆಣ್ಣುಮಗುವಿನೊಂದಿಗೆ ಕುಮಾರಸ್ವಾಮಿ ಕಳೆದಿದ್ದಾರೆ ಎನ್ನುತ್ತವೆ ಮೂಲಗಳು. ನೈಸ್ ವಿರುದ್ಧದ ಪ್ರತಿಭಟನೆಗೆ ಕುಮಾರಸ್ವಾಮಿ ಅವರನ್ನು ದೇವೇಗೌಡರು ಹೇಗೋ ಮಾಡಿ ಸಂಪೂರ್ಣ ಒಪ್ಪಿಸಿದ್ದರು. ಆದರೆ ಎಚ್ಡಿಕೆ ಆರೋಗ್ಯ ಸರಿಯಿಲ್ಲ ಎಂದು ವೈದ್ಯರು ಅಡ್ಡಗಾಲು ಹಾಕಿದ್ದರು, ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಅದನ್ನೇ ಎಂಬಂತೆ...

  ಕುಮಾರಸ್ವಾಮಿ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ಹೃದಯ ಸಮಸ್ಯೆ ಉಲ್ಭಣಿಸಿದೆ. ಅವರಿಗೆ ಈಗ ಸದ್ಯಕ್ಕೆ ಬೇಕಾಗಿರುವುದು ಪ್ರತಿಭಟನೆಯಲ್ಲ;ವಿಶ್ರಾಂತಿ ಎಂದು ವೈದ್ಯರು ದೇವೇಗೌಡರಿಗೆ ಸೂಚಿಸಿದ್ದರು. ಹಾಗಾಗಿ ವಿಧಿಯಿಲ್ಲದೆ ದೇವೇಗೌಡರು ಸುಮ್ಮನಾಗಿದ್ದರು. ದೇವೇಗೌಡರು ಅತ್ತ ನೈಸ್ ರಣರಂಗಕ್ಕೆ ಧುಮಿಕ್ಕಿದ್ದರೆ ಇತ್ತ ಕುಮಾರಸ್ವಾಮಿ ವಿಶ್ರಾಂತಿಗಾಗಿ ಚಿಕ್ಕಮಗಳೂರು ಘಟ್ಟ ಹತ್ತಿಯಾಗಿತ್ತು.

  ಉಡುಪಿ ಬಳಿಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾಧಿಕಾ ಮತ್ತು ಕುಮಾರಸ್ವಾಮಿ ಇಬ್ಬರೂ ಪೂಜೆ ಮಾಡಿಸಿದ ಬಳಿಕ ಬೆಂಗಳೂರಿಗೆ ಹಿಂತಿರುಗಿದರು ಎಂದು 'ಮಿಡ್ ಡೇ' ವರದಿ ಮಾಡಿದೆ. ಇದು ನಿಜವೇ ಎಂದು ದೇವೇಗೌಡರನ್ನು ಕೇಳಿದರೆ, ಕುಮಾರಸ್ವಾಮಿ ವಿಶ್ರಾಂತಿ ತೆಗೆದುಕೊಳ್ಳಲಿ ಬಿಡಿ. ಫೆಬ್ರವರಿ 21ರಂದು ಅವರು ಪ್ರತಿಭಟನೆಗೆ ಧುಮುಕಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

  ಎರಡು ವರ್ಷಗಳ ಹಿಂದಷ್ಟೆ ಕುಮಾರಸ್ವಾಮಿ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿತ್ತು. ಧೂಮಪಾನ ಮತ್ತು ಮದ್ಯಪಾನದ ಸಹವಾಸದಿಂದ ಅವರ ಆರೋಗ್ಯ ಸಮಸ್ಯೆ ಜಟಿಲಗೊಂಡು ಇದೀಗ ಯಕೃತ್ತಿನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಧೂಮಪಾನ ಮತ್ತು ಮದ್ಯವನ್ನು ತ್ಯಜಿಸುವಂತೆ ವೈದ್ಯರು ಕುಮಾರಸ್ವಾಮಿಗೆ ತಾಕೀತು ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X