For Quick Alerts
  ALLOW NOTIFICATIONS  
  For Daily Alerts

  ವ್ಯಭಿಚಾರ ಸಾಬೀತುಪಡಿಸಿದರೆ ಕೋಟಿ ರು. ಕೊಡುತ್ತೇನೆ

  By Rajendra
  |

  ವೇಶ್ಯಾವಾಟಿಕೆ ಜಾಲದಲ್ಲಿ ಹೈದರಾಬಾದ್ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿನಿಮಾ ತಾರೆಗಳಾದ ಸಾಯಿರಾ ಬಾನು[ಗ್ಯಾಲರಿ], ಜ್ಯೋತಿ[ಗ್ಯಾಲರಿ] ಹೊಸ ಸವಾಲು ಎಸೆದಿದ್ದಾರೆ. ತಾವು ವ್ಯಭಿಚಾರ ಮಾಡಿದ್ದನ್ನು ಸಾಬೀತುಪಡಿಸಿದರೆ ಅವರು ಯಾರೇ ಆಗಲಿ ಅವರಿಗೆ ಒಂದು ಕೋಟಿ ರುಪಾಯಿ ಬಹುಮಾನವಾಗಿ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

  ಈ ಜಾಲಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಯಾರೋ ಮಾಡಿದ ತಪ್ಪನ್ನು ತಮ್ಮ ತಲೆಗೆ ಕಟ್ಟಿದ್ದಾರೆ ಎಂದು ಸಾಯಿರಾ ಬಾನು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಾಗಾಗಿ ನ್ಯಾಯಾಲಯ ಆಕೆಯನ್ನು ಷರತ್ತುಬದ್ಧ ಜಾಮೀನ ಮೇಲೆ ಬಿಡುಗಡೆ ಮಾಡಿತ್ತು.

  ವೇಶ್ಯಾವಾಟಿಕೆ ಜಾಲದಲ್ಲಿ ತಮ್ಮನ್ನು ಸಿಲುಕಿಸಿದ್ದಾರೆ ಎಂದು ಆರೋಪಿಸಿರುವ ಸಾಯಿರಾಬಾನು ತಮ್ಮದೇನು ತಪ್ಪಿಲ್ಲ ಎಂದಿದ್ದಾರೆ. ಆದರೆ ಹೈದರಾಬಾದ್ ಪೊಲೀಸರು ಹೇಳುವ ಕತೆ ಕೊಂಚ ಭಿನ್ನವಾಗಿದೆ. ಸಿನಿ ತಾರೆಯರಾದ ಜ್ಯೋತಿ, ಸಾಯಿರಾ ಬಾನು ಅವರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದಾಗ ಸ್ಥಳದಲ್ಲೆ ಅವರನ್ನು ಬಂಧಿಸಿದ್ದೇವೆ ಎಂದಿದ್ದಾರೆ.

  ಹೈದರಾಬಾದ್ ನಗರ ಪೊಲೀಸ್ ಕಮೀಷನರ್ ಎ ಕೆ ಖಾನ್ ಮಾತನಾಡುತ್ತಾ, ಚಿತ್ರರಂಗವನ್ನು ಪೊಲೀಸರು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕೆಲವರು ಮಾದಕ ದ್ರವ್ಯ ಮತ್ತು ಸೆಕ್ಸ್ ಜಾಲದಲ್ಲಿ ಸಿಕ್ಕಿಬಿದ್ದ ಮಾತ್ರಕ್ಕೆ ಇಡೀ ಚಿತ್ರೋದ್ಯಮಕ್ಕೆ ಕೆಟ್ಟ ಹೆಸರು ಬರುವುದಿಲ್ಲ.

  ಮಾದಕದ್ರವ್ಯ ಜಾಲ ಭೇದಿಸಿದಾಗ ವೇಶ್ಯಾವಾಟಿಕೆ ಜಾಲವೂ ಬಯಲಾಯಿತು. ಈ ಎರಡು ಜಾಲಗಳಲ್ಲಿ ಸಾಯಿರಾ ಬಾನುಗೆ ಸಂಬಂಧವಿದೆ ಎಂದು ಎ ಕೆ ಖಾನ್ ಸ್ಪಷ್ಟಪಡಿಸಿದ್ದಾರೆ. ಕಳ್ಳರ ಜೊತೆ ವಾಸಿಸುವವರನ್ನು ಕಳ್ಳ ಅಲ್ಲ ಎಂದರೆ ಯಾರು ತಾನೇ ನಂಬುತ್ತಾರೆ ಹೇಳಿ? ಎಂಬುದು ಹೈದರಾಬಾದ್ ಪೊಲೀಸರ ವಾದ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X