ಮಾದಕದ್ರವ್ಯ ಜಾಲದಲ್ಲಿ ಮಾದಕ ತಾರೆ ತ್ರಿಷಾ?
ತೆಲುಗು ಚಿತ್ರರಂಗದೊಂದಿಗಿನ ಮಾದಕದ್ರವ್ಯದ ನಂಟು ಇತ್ತೀಚೆಗೆ ಬಟ್ಟಬಯಲಾಗಿತ್ತು. ಮಾದಕ ದ್ರವ್ಯ ಜಾಲದಲ್ಲಿ ಹಲವು ತಾರೆಗಳ ಹೆಸರುಗಳು ಕೇಳಿಬರುತ್ತಿವೆ. ಅವುಗಳಲ್ಲಿ ಮುಖ್ಯವಾಗಿ ತೆಲುಗು, ತಮಿಳು ತಾರೆ ತ್ರಿಷಾ ಹೆಸರು ಕೇಳಿಬಂದಿದ್ದು ಈ ವಿವಾದ ಹೊಸತಿರುವು ಪಡೆದುಕೊಂಡಿದೆ.
ಮಾದಕದ್ರವ್ಯವನ್ನು ಸರಬರಾಜು ಮಾಡುತ್ತಿದ್ದವರ ಮೊಬೈಲ್ ಫೋನ್ ಗಳಲ್ಲಿ ತ್ರಿಷಾ ಮೊಬೈಲ್ ಸಂಖ್ಯೆ ದಾಖಲಾಗಿದೆ ಎನ್ನಲಾಗಿದೆ. ಆದರೆ ತ್ರಿಷಾ ಮಾತ್ರ ಈ ಎಲ್ಲಾ ವರದಿಯನ್ನು ಅಲ್ಲಗಳೆದಿದ್ದಾರೆ. ಅನಾವಶ್ಯಕವಾಗಿ ನನ್ನ ಹೆಸರನ್ನು ಎಳೆದುತರುತ್ತಿದ್ದಾರೆ. ತಾವು ಕೋರ್ಟ್ ಮೆಟ್ಟಿಲೇರುವುದಾಗಿ ತ್ರಿಷಾ ಎಚ್ಚರಿಸಿದ್ದಾರೆ.
ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಇದು. ಈ ಸಂಬಂಧ ತಾವು ಶೀಘ್ರದಲ್ಲೆ ತಮ್ಮ ವಕೀಲರ ಬಳಿ ಚರ್ಚಿಸಿ ಸೂಕ್ತ ಉತ್ತರ ನೀಡುತ್ತೇನೆ ಎಂದಿದ್ದಾರೆ. ವಕೀಲರ ಬಳಿ ಚರ್ಚಿಸಿ ಈ ರೀತಿ ಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಅಪರಾಧ ತ್ರಿಷಾ ಮಾದಕದ್ರವ್ಯ ಟಾಲಿವುಡ್ ಸಾಯಿರಾಬಾನು ಹೈದರಾಬಾದ್ trisha drugs mafia saira banu prostitution racket hyderabad


Click it and Unblock the Notifications