For Quick Alerts
  ALLOW NOTIFICATIONS  
  For Daily Alerts

  ಸೆಕ್ಸಿ ತಾರೆ ನಮಿತಾ ಅಪಹರಣಕ್ಕೆ ಪ್ರಯತ್ನ

  By Rajendra
  |

  ಸೆಕ್ಸಿ ತಾರೆ ನಮಿತಾ ಅವರನ್ನು ಆಕೆಯ ಅಭಿಮಾನಿಯೊಬ್ಬ ಅಪಹರಿಸಲು ಪ್ರಯತ್ನಿಸಿದ ಘಟನೆ ಸೋಮವಾರ(ಅ.25) ನಡೆದಿದೆ. ಆತನ ಪ್ರಯತ್ನ ವಿಫಲವಾಗಿ ಕಡೆಗೆ ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಈ ರೋಚಕ ಘಟನೆ ತಿರುಚ್ಚಿಯಲ್ಲಿ ನಡೆದಿದೆ.

  ಕರೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಮಿತಾ ತಮ್ಮ ಮ್ಯಾನೇಜರ್ ಜಾನ್ ಅವರೊಂದಿಗೆ ವಿಮಾನದಲ್ಲಿ ತಿರುಚ್ಚಿ ಗೆ ಬಂದಿಳಿದಿದ್ದರು. ಇಲ್ಲಿಂದ ಕರೂರು ಸುಮಾರು 330 ಕಿ.ಮೀ ದೂರದಲ್ಲಿದೆ. ಕರೂರಿಗೆ ಆಕೆ ಕಾರಿನಲ್ಲಿ ಹೊರಡಬೇಕಾಗಿತ್ತು. ಸನ್ಮಾನ ಸಮಾರಂಭವೊಂದರಲ್ಲಿ ಭಾಗವಹಿಸುವ ಸಲುವಾಗಿ ನಮಿತಾ ಕರೂರಿಗೆ ಪ್ರಯಾಣ ಬೆಳಸಿದ್ದರು.

  ತಿರುಚ್ಚಿಯ ವಿಮಾನ ನಿಲ್ದಾಣದಲ್ಲಿ ಎದುರಾದ ವ್ಯಕ್ತಿಯೊಬ್ಬ ತನ್ನ ಹೆಸರು ಪೆರಿಯಾಸ್ವಾಮಿ ಕಾರು ಚಾಲಕ ಎಂದು ಪರಿಚಯಿಸಿಕೊಂಡಿದ್ದಾನೆ. ಕಾರ್ಯಕ್ರಮ ಪ್ರಾಯೋಜಕರು ತಮ್ಮನ್ನು ಕಾರಿನಲ್ಲಿ ಕರೆತರುವಂತೆ ಹೇಳಿದ್ದಾರೆ ಎಂದು ನಮಿತಾ ಕಿವಿಗೆ ಕಮಲದ ಹೂವನ್ನೇ ಮುಡಿಸಿದ್ದಾನೆ.

  ಚಾಲಕನ ಮಾತನ್ನು ನಂಬಿದನಮಿತಾ ಸೀದಾ ಹೋಗಿ ಕಾರಿನಲ್ಲಿ ಕುಳಿದಿದ್ದಾರೆ. ಈ ವಿಷಯ ಅಲ್ಲೇ ಇದ್ದ ನಿಜವಾದ ಚಾಲಕನ ಕಿವಿಗೂ ಬಿದ್ದಿದೆ. ಬಳಿಕ ಆತ ತನ್ನ ಕಾರಿನಲ್ಲಿ ನಕಲಿ ಚಾಲಕನ ಕಾರನ್ನು ಹಿಂಬಾಲಿಸಿದ್ದಾನೆ. ನಮಿತಾ ಪ್ರಯಾಣಿಸುತ್ತಿದ್ದ ಕಾರನ್ನು ಚೇಸ್ ಮಾಡಿ ಕಾರನ್ನು ನಿಲ್ಲಿಸಲಾಗಿದೆ. ಆಗ ನಮಿತಾರಿಗೂ ಸಂಪೂರ್ಣ ಚಿತ್ರಣ ಅರ್ಥವಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

  ಪೆರಿಸ್ವಾಮಿಯನ್ನು ಬಂಧಿಸಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಮಿತಾ ತನ್ನ ಆರಾಧ್ಯ ದೈವ ಎಂದು ಆತ ಹೇಳಿಕೊಂಡಿದ್ದಾನೆ. ಇನ್ನೂ ವಿಚಾರಣೆ ಮಾಡಲಾಗಿ ನಮಿತಾ ವಿರುದ್ಧವಾಗಿ ಏನೇನೋ ಬಡಬಡಿಸಿದ್ದಾನಂತೆ. ಪೊಲೀಸ್ ಬಂಧನದಲ್ಲಿರುವ ಆತನ ವಿಚಾರಣೆ ನಡೆಯುತ್ತಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X