»   »  ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್

ಯೋಗೀಶನಿಗೆ ವಿಜಯ್ ಗೂಸಾ ಫ್ಯಾಶ್ ಬ್ಲಾಕ್

Posted By: *ಜಯಂತಿ
Subscribe to Filmibeat Kannada

loose mada alias yogish'ನಂದಾ ನಂದಿತಾ' ಚಿತ್ರದ ಎಳೆಹುಡುಗ ಯೋಗೇಶ್‌ಗೆ ದುನಿಯಾ ವಿಜಯ್ ಥೇಟ್ ಸಿನಿಮಾ ಸ್ಟೈಲ್‌ನಲ್ಲಿ ನಾಲ್ಕು ಇಕ್ಕಿದ ಕಥೆ ಗೊತ್ತಲ್ಲ! ಯಾಕೀ ಹೊಡೆದಾಟ ಎಂದರೆ ವಿಜಯ್‌ಗೆ ಆ ಬಗ್ಗೆ ಮಾತನಾಡಲು ಟೈಮಿಲ್ಲ. ಮತ್ತೂ ಒತ್ತಾಯಿಸಿದರೆ, 'ಸುಮ್‌ಸುಮ್ನೆ ಕಾಂಟ್ರಾವರ್ಸಿ ಗುರು' ಅಂತಾರೆ ವಿಜಯ್.

ಉಳಿದದ್ದು ಯೋಗೇಶ್. ಏನಿದು ಫೈಟ್? ಎಂದು ಅವರನ್ನೇ ವಿಚಾರಿಸಿದೆವು. 'ಅದೆಲ್ಲ ಮುಗಿದ ಕಥೆ ಸಾರ್' ಎಂದು ಮೊದಲಿಗೆ ಹಿಂಜರಿದ ಯೋಗಿ, ಆಮೇಲೆ ಫ್ಲಾಷ್‌ಬ್ಯಾಕ್ ನೆನಪಿಸಿಕೊಂಡರು.

'ಜಂಗ್ಲಿ' ಚಿತ್ರದ ಸೆಟ್. ಶೂಟಿಂಗ್ ನಡೀತಿತ್ತು. ವಿಷ್ ಮಾಡಲಿಕ್ಕೆಂದು ಯೋಗೇಶ್ ಸೆಟ್‌ಗೆ ಹೋದರು. ಜೊತೆಯಲ್ಲಿ ಗೆಳೆಯರೂ ಇದ್ದರು. ಯೋಗಿಯನ್ನ ನೋಡಿದ ವಿಜಯ್‌ಗೆ ಅದೇನಾಯ್ತೋ ಗೊತ್ತಿಲ್ಲ. ಒಮ್ಮೆಗೇ ರಾಂಗಾದರು. ಮೊದಲಿಗೆ ಯೋಗಿಯ ಡ್ರೈವರ್‌ಗೆ ಗೂಸಾ. 'ಇದೆಲ್ಲ ಏನು?' ಎಂದು ಯೋಗಿ ಕಣ್ಣರಳಿಸುವ ಹೊತ್ತಿಗೆ ಅವರಿಗೂ ಒದೆ ಬಿದ್ದವು.

ಒದೆ ತಿಂದು ಕಮಕ್ ಕಿಮಕ್ ಎನ್ನದೆ ಸೆಟ್‌ನಿಂದ ಹೊರಬಂದ ಯೋಗಿ ಕೆಲವು ದಿನ ಅದೇ ಗುಂಗಿನಲ್ಲಿ ಮುಖ ಬಾಡಿಸಿಕೊಂಡಿದ್ದರು. ಆದರೆ ವಿಷಯ ಯಾರಿಗೂ ಹೇಳಿರಲಿಲ್ಲ. ಮೂರ್‍ನಾಲ್ಕು ದಿನದ ನಂತರ ಯೋಗಿ ಫಾದರ್ ಸಿದ್ಧರಾಜು ಅವರಿಗೆ ವಿಷಯ ತಿಳಿದು, 'ಏನ್ ಮಗ ಇದೆಲ್ಲ' ಎಂದರು. ಯೋಗಿಯದ್ದು ಅದೇ ಪ್ಯಾಲಿ ನಗೆ. 'ಹೋಗಲಿ ಬಿಡು. ತಲೆ ಕೆಡಿಸ್ಕಬೇಡ. ನಾವು ದುಡುಕೋದು ಬ್ಯಾಡ' ಅಂದ್ರು ಫಾದರ್ರು.

'ನಮ್ಮ ಮೇಲೆ ವಿಜ್ಜಿಗೆ ಅದೇನು ಸಿಟ್ಟೋ ಗೊತ್ತಿಲ್ಲ ಸಾರ್. ನಮಗಂತೂ ಅವನ ಬಗ್ಗೆ ಯಾವುದೇ ದ್ವೇಷವಿಲ್ಲ' ಎಂದರು ಯೋಗಿ.

ಅದುಸರಿ, ವಿಜಯ್‌ಗೆ ಆದದ್ದಾದರೂ ಏನು? ತನ್ನ ಕಣ್ಣಮುಂದಿನ ಹುಡುಗ ಬೆಳೆಯೋದು ಕಂಡು ಕಣ್ಣು ಕೆಂಪಗಾದವಾ?

ಪೂರಕ ಓದಿಗೆ:

ಅಕ್ಕನ ಮಗ ಯೋಗೀಶನಿಗೆ ವಿಜಯ್ ಗೂಸಾ
ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ
ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada