»   » ವೀಣಾ ಮಲಿಕ್ ಜೊತೆ ಬಾಬ್ಬಿ ಡಾರ್ಲಿಂಗ್ ಹಲ್ಲಾಗುಲ್ಲಾ

ವೀಣಾ ಮಲಿಕ್ ಜೊತೆ ಬಾಬ್ಬಿ ಡಾರ್ಲಿಂಗ್ ಹಲ್ಲಾಗುಲ್ಲಾ

Posted By:
Subscribe to Filmibeat Kannada

ಲಿಂಗ ಪರಿವರ್ತನೆ ಮೂಲಕ ಹೆಣ್ಣಾಗಿ ಮರುಜನ್ಮ ಪಡೆದಿರುವ ಬಾಬ್ಬಿ ಡಾರ್ಲಿಂಗ್ ಹಾಗೂ ವೀಣಾ ಮಲಿಕ್ ನಡುವೆ ಒಂದು ಮಿಂಚಿನ ಸಂಚಾರ ಉಂಟಾಗಿದೆ. ವೀಣಾ ಮಲಿಕ್ ಬರ್ತ್‌ಡೇಯಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಲಿಪ್ ಲಾಕ್ ಚುಂಬನ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ವೀಣಾ ತುಟಿಗೆ ತುಟಿ ಬೆರೆಸಿ ಬಾಬ್ಬಿ ಬರ್ತ್‌ಡೇ ಶುಭಾಶಯಗಳನ್ನು ಹೇಳಿದ್ದಾರೆ. ಇವರಿಬ್ಬರೂ 'ದಾಲ್ ಮೇ ಕುಚ್ ಕಾಲಾ ಹೈ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇಬ್ಬರೂ ತೀರಾ ಹತ್ತಿರವಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

ಬಾಬ್ಬಿ ಮಾತನಾಡುತ್ತಾ "ವೀಣಾ ಜೊತೆ ನನಗೆ ಉತ್ತಮ ಸಂಬಂಧವಿದೆ. ಅವಳನ್ನು ಪ್ರೀತಿಸುತ್ತೇನೆ. ಪ್ರತಿ ಬಾರಿಯೂ ನಾವು ಒಬ್ಬರಿಗೊಬ್ಬರು ಅಭಿನಂದಿಸಿಕೊಳ್ಳುವುದು ಹೀಗೇನೆ. ನಮ್ಮನ್ನು ನೋಡಿದರೆ ಬೇರೆಯವರಿಗೆ ಯಾಕೋ ಹೊಟ್ಟೆಯುರಿ" ಎಂದಿದ್ದಾರೆ.

ಬಾಬ್ಬಿ ಕಿಸ್ಸಿಗೆ ವೀಣಾ ಪ್ರತಿಕ್ರಿಯಿಸಿದ್ದು ಹೀಗೆ, "ಬಾಬ್ಬಿ ಕಿಸ್ ಕೊಟ್ಟಿದ್ದು ಕ್ಯೂಟ್ ಆಗಿತ್ತು. ಆಕೆ ಜಸ್ಟ್ ನನ್ನ ತುಟಿಗೆ ತುಟಿ ಒತ್ತಿದಳಷ್ಟೇ. ಫ್ರೆಂಚ್ ಕಿಸ್ ಏನೂ ಕೊಡಲಿಲ್ಲ. ಬಾಬ್ಬಿ ಮಾಡಿದಂತೆ ನನ್ನ ಗರ್ಲ್‌ಫ್ರೆಂಡ್ಸ್ ಕೂಡ ಮಾಡುತ್ತಾರೆ. ಇದರಲ್ಲೇನು ತಪ್ಪು" ಎಂದಿದ್ದಾರೆ ವೀಣಾ. (ಏಜೆನ್ಸೀಸ್)

English summary
Sizzling Veena Malik and Bobby Darling lock-lips on the occasion of Veena Malik’s birthday. Bobby planted a kiss on Veena’s lips to wish her happy birthday. Bobby and Veena Malik stars in ‘Daal Mein Kucch Kaala Hai’ co-star and hence they develop a great comfort level.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X