»   » ಬಿಕಿನಿ ತೊಟ್ಟರೆ ನಿಜಕ್ಕೂ ಭೂಕಂಪವಾಗುತ್ತದೆ!

ಬಿಕಿನಿ ತೊಟ್ಟರೆ ನಿಜಕ್ಕೂ ಭೂಕಂಪವಾಗುತ್ತದೆ!

Posted By:
Subscribe to Filmibeat Kannada

ಬಿಕಿನಿ ತೊಟ್ಟರೆ ಭೂಕಂಪವಾಗುತ್ತದೆಯೇ? ಹೌದು ಎಂಬ ವಿಚಾರ ಬಹುತೇಕವಾಗಿ ಸಾಬೀತಾಗಿ ಹೋಗಿದೆ! ಬಿಕಿನಿ ತೊಟ್ಟರೆ ಭೂಕಂಪವಾಗುತ್ತದೆ ಎಂಬ ಮಾತಿಗೆ ವಿಶ್ವದಾದ್ಯಂತ ಮಹಿಳೆಯರು ಬಿಕಿನಿ ಬಿಚ್ಚಿ ಪ್ರತಿಭಟಿಸಿದ್ದರು. ಕಾಕತಾಳೀಯವೆಂಬಂತೆ ಮತ್ತೆ ಭೂಮಿ ಕಂಪಿಸಿ ಜನರಲ್ಲಿ ನಡುಕ ಹುಟ್ಟಿಸಿದೆ!

ಕ್ಲಾರಿಕ್ ಕಜೆಂ ಸೆಡಿಗಿ ಎಂಬಾತ ಏಪ್ರಿಲ್ 12ರಂದು ಇಡೀ ವಿಶ್ವವೇ ಹುಬ್ಬೇರಿಸುವಂತಹ ಹೇಳಿಕೆ ಕೊಟ್ಟಿದ್ದ. "ಬಹಳಷ್ಟು ಮಹಿಳೆಯರು ಅಸಭ್ಯವಾಗಿ ಬಟ್ಟೆ ತೊಡುವುದರಿಂದ...ಯುವಕರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದರಿಂದ ಪಾತಿವ್ರತ್ಯ ಹಾಳಾಗುತ್ತಿದೆ, ವ್ಯಭಿಚಾರ ಮಿತಿಮೀರುತ್ತಿದೆ. ಇದು ಹೀಗೇ ಹದ್ದುಮೀರುತ್ತಿರುವ ಪರಿಣಾಮ ಭೂಕಂಪಕ್ಕೆ ಕಾರಣವಾಗುತ್ತಿದೆ. " ಎಂದಿದ್ದರು.

ಕ್ಲಾರಿಕ್ ಹೇಳಿಕೆಯಿಂದ ರೊಚ್ಚಿಗೆದ್ದ 200,000ಕ್ಕೂ ಅಧಿಕ ಮಹಿಳೆಯರು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಕ್ಕೆ ಜಿಗಿದು ಪ್ರತಿಭಟಿಸಿದ್ದರು. ಪ್ರತಿಭಟನೆಗೆ 'Boobquake' ಎಂದು ಹೆಸರಿಟ್ಟು ಬಿಕಿನಿ ಬಿಚ್ಚಿದ ಛಾಯಾಚಿತ್ರಗಳನ್ನು ಹಾಕಿಕೊಂಡು ಪ್ರತಿಭಟಿಸಿದ್ದರು. ಫೇಸ್ ಬುಕ್ ಗೆ ಲಗ್ಗೆ ಹಾಕಿದ ಪುರುಷರಿಗೂ ಎದೆ ನಡುಕ ಶುರುವಾಗಿತ್ತು.

ಮಹಿಳೆಯರು ಬಿಕಿನಿ ಬಿಚ್ಚಿ ಪ್ರತಿಭಟಿಸಿದ್ದೇ ತಡಆಶ್ಚರ್ಯವೆಂಬಂತೆ, ತೈವಾನ್ ನಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಚರ್ ಸ್ಕೇಲ್ ನಲ್ಲಿ 6.5 ಎಂದು ದಾಖಲಾಗಿದೆ. ಭೂಕಂಪದಿಂದ ಅಂತಹ ಗಂಭೀರ ಪರಿಣಾಮಗಳೇನು ಸಂಭವಿಸದಿದ್ದರೂ ಸಣ್ಣ ಮಟ್ಟದ ತೊಂದರೆಯಂತೂ ಆಗಿದೆ. ಬೃಹತ್ ಕಟ್ಟಡಗಳಲ್ಲಿ ಬಿರುಕು ಉಂಟಾಗಿದ್ದು ಬಿಟ್ಟರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇಂಡಿಯಾನಾದ ಪುರ್ಡು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಗೂ "Boobquake" ನ ಸಂಚಾಲಕಿ ಜೆನ್ನಿಫರ್ ಮ್ಯಾಕ್ ಕ್ರಿಟ್ ಮಾತನಾಡುತ್ತಾ, ತೈವಾನ್ ಭೂಕಂಪ ನಮ್ಮ ಕಾಲ ಪರಿಧಿಯಲ್ಲಿ ಸಂಭವಿಸಿಲ್ಲ. ಹಾಗಾಗಿ ಇದೆಲ್ಲಾ ಅಪ್ಪಟ ಸುಳ್ಳು, ಕಟ್ಟುಕತೆ ಎಂದು ವಾದಿಸಿದ್ದಾಳೆ.

ವಾರ್ಷಿಕವಾಗಿ ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.9ರಷ್ಟು ದಾಖಲಾಗುತ್ತಲೆ ಇರುತ್ತದೆ. ಇದೇ ರೀತಿಯ ಭೂಕಂಪ ಮುಂದಿನ 24 ಗಂಟೆಗಳಲ್ಲೂ ಎಡಬಿಡದೆ ಸಂಭವಿಸುತ್ತಿದ್ದರೆ ಆಗ ಇದಕ್ಕೆಲ್ಲಾ ಅಸಭ್ಯತೆಯೇ ಕಾರಣ ಎಂದು ನಂಬಬಹುದು ಎಂದು ಆಕೆ ಎದೆತಟ್ಟಿ ಪ್ರತಿಕ್ರಿಯಿಸಿದ್ದಾರೆ.

"ನಾಚಿಕೆಗೆಟ್ಟ ದೇಹಗಳು ಒಂದಾಗುವುದರಿಂದ ಖಂಡಿತವಾಗಿಯೂ ಭೂಮಿ ಕಂಪಿಸುತ್ತದೆ. ನಿಮಗೆ ನಂಬಿಕೆ ಬರಲಿಲ್ಲ ಎಂದರೆ ಕ್ಲಾರಿಕ್ ಅವರ ಬಳಿಗೆ ಬನ್ನಿ. ಭೂಮಿ ಗುಡುಗುವುದನ್ನು ಅವರು ಪ್ರಾಯೋಗಿಕವಾಗಿ ತೋರಿಸುತ್ತಾರೆ" ಎಂದು BlagHag.com ನಲ್ಲಿ ಸವಾಲೊಡ್ಡಲಾಗಿದೆ. ಒಟ್ಟಿನಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿದೆ. ಮಹಿಳೆಯರ ಬಿಕಿನಿ ಹೊಸ ವೈಜ್ಞಾನಿಕ ಸಂಶೋಧನೆಗೆ ತಳಹದಿಯಾಗುತ್ತದೆ ಎಂದರೆ ಹೇಗೆ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada