»   »  ಸಚ್ ಕಾ ಸಾಮ್ನಾ ಸಮರ್ಥಿಸಿಕೊಂಡ ಸ್ಟಾರ್ ಪ್ಲಸ್

ಸಚ್ ಕಾ ಸಾಮ್ನಾ ಸಮರ್ಥಿಸಿಕೊಂಡ ಸ್ಟಾರ್ ಪ್ಲಸ್

Posted By:
Subscribe to Filmibeat Kannada

ಕಳೆದವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ್ದ ನೋಟೀಸ್ ಗೆ ಸ್ಟಾರ್ ಪ್ಲಸ್ ಉತ್ತರ ನೀಡಿದೆ. ವಿವಾದಿತ 'ಸಚ್ ಕಾ ಸಾಮ್ನಾ' ರಿಯಾಲಿಟಿಶೋ, ಕೇಬಲ್ ಟಿವಿ ಕಾಯ್ದೆ 1995ರ ಮಾರ್ಗದರ್ಶನವನ್ನು ಯಾವ ರೀತಿಯಿಂದಲೂ ಉಲ್ಲಂಘಿಸಲಿಲ್ಲ ಎಂದು ನೋಟೀಸ್ ಗೆ ನೀಡಿದ ವಿವರಣೆಯಲ್ಲಿ ತಿಳಿಸಿದೆ.

ಇದೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿರುವ ರಿಯಾಲಿಟಿಶೋ ಆಗಿದ್ದು ಇದರಲ್ಲಿ ಅಸಭ್ಯ ಮತ್ತು ಅನೈತಿಕತೆಯನ್ನು ಬಿಂಬಿಸುವ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿಲ್ಲ ಎಂದು ವಾದಿಸಿದೆ. ಈ ಶೋ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿರುವುದರಿಂದ ಕೇಬಲ್ ಟಿವಿ ಕಾಯ್ದೆಯನ್ನು ಉಲ್ಲಂಘಿಸಿದಂತಾಗುವುದಿಲ್ಲ ಎಂದು ನೋಟೀಸ್ ನಲ್ಲಿ ತಿಳಿಸಿದೆ.

ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುತ್ತಿರುವ ಈ ರಿಯಾಲಿಟಿ ಶೋ ಸಂಸದರ ಮತ್ತು ಕೇಂದ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸ್ಟಾರ್ ಪ್ಲಸ್ ವಾಹಿನಿಗೆ ನೋಟಿಸ್ ಜಾರಿಮಾಡಿ ಜುಲೈ 27ರ ಒಳಗೆ ವಿವರಣೆ ನೀಡುವಂತೆ ಆದೇಶ ನೀಡಿತ್ತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada