»   » ಬೆಂಗಳೂರಿನಲ್ಲಿ ನಟಿ ರಂಜಿತಾ ತೀವ್ರ ವಿಚಾರಣೆ

ಬೆಂಗಳೂರಿನಲ್ಲಿ ನಟಿ ರಂಜಿತಾ ತೀವ್ರ ವಿಚಾರಣೆ

Posted By:
Subscribe to Filmibeat Kannada

ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣದ ವಿಚಾರಣೆಗಾಗಿ ಚಿತ್ರನಟಿ ರಂಜಿತಾ ಬುಧವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಸಲೀಲೆ ಪ್ರಕರಣಕ್ಕೆ ನಿತ್ಯಾನಂದ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ವಿಚಾರಣೆಗಾಗಿ ಬೆಂಗಳೂರಿಗೆ ಬರುವಂತೆ ನಟಿ ರಂಜಿತಾಗೆ ಸೂಚಿಸಿದ್ದರು.

ಸಿಐಡಿ ಪೊಲೀಸರು ದೂರವಾಣಿ ಮೂಲಕ ರಂಜಿತಾರನ್ನು ಸಂಪರ್ಕಿಸಿದ್ದರು. ಪೊಲೀಸರ ಮನವಿಗೆ ಸ್ಪಂದಿಸಿದ ರಂಜಿತಾ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿ ತನಿಖಾ ತಂಡದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ರಂಜಿತಾರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಪೊಲೀರು ತಡರಾತ್ರಿವರೆಗೂ ವಿಚಾರಣೆ ಮಾಡಿದ್ದಾಗಿ ತಿಳಿದುಬಂದಿದೆ.

ನಿತ್ಯಾನಂದ ಪ್ರಕರಣದಲ್ಲಿ ನಟಿ ರಂಜಿತಾರನ್ನು ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ನಿತ್ಯಾನಂದ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ರಂಜಿತಾ ಅವರನ್ನು ವಿಚಾರಣೆ ನಡೆಸಲು ನಿರ್ಧರಿಸಲಾಯಿತು. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಬಿಡದಿಯ ಧ್ಯಾನಪೀಠದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ರಂಜಿತಾರಿಂದ ಮಾಹಿತಿ ಪಡೆಯಲಾಗುತ್ತದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಸಲೀಲೆ ಹಾಗೂ ಧ್ಯಾನಪೀಠದಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ಚಟುವಟಿಕೆಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ರಂಜಿತಾ ಭರವಸೆ ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ ನಿತ್ಯಾನಂದನಿಗೆ ಪುರಷತ್ವ ಪರೀಕ್ಷೆ ಮಾಡಲು ಜಯದೇವ ಆಸ್ಪತ್ರೆ ವೈದ್ಯರಿಗೆ ಮನವಿ ಮಾಡಲಾಗಿದೆ.

ಆದರೆ ಹೃದ್ರೋಗ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನಿತ್ಯಾನಂದನನ್ನ್ನು ಪರೀಕ್ಷೆಗೆ ಒಳಪಡಿಸಿ ಆತನಿಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿಲ್ಲ ಎಂದು ದೃಢಪಟ್ಟರೆ, ಆರಂಭ ಹಂತದಲ್ಲೆ ಆತನ ವಿರುದ್ಧ ಬಹಳಷ್ಟು ಕೇಸ್ ಗಳು ಮುಗ್ಗರಿಸಲಿವೆ.ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಪ್ರಕರಣಗಳಿಂದ ನಿತ್ಯಾನಂದ ಮುಕ್ತನಾಗಲಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada