For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ವಿವಾದ ಸುಳಿಯಲ್ಲಿ ಸಿಕ್ಕ ನಾಗಾಭರಣ

  By Mahesh
  |

  ಡಬ್ಬಿಂಗ್ ಚಿತ್ರಗಳ ಮೇಲೆ ನಿಷೇಧ ಹೇರುವುದು ಸರಿಯಿಲ್ಲ. ಕೂಡಲೇ ಹಿಂಪಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮೀಕ್ಷಾ ವರದಿಯನ್ನು ನಾಗಾಭರಣ ನೇತೃತ್ವದ ಕನ್ನಡ ಚಲನಚಿತ್ರ ಅಕಾಡೆಮಿ ಹಿಂದಕ್ಕೆ ಪಡೆದಿದೆ.

  ಚಲನಚಿತ್ರ ಅಕಾಡೆಮಿಯ ಸಮೀಕ್ಷಾ ವರದಿಯಲ್ಲಿ ಡಬ್ಬಿಂಗ್ ಕುರಿತು ನೀಡಲಾಗಿದ್ದ ಅಂಶಗಳಿಗೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ಸೇರಿದಂತೆ ಹಲವಾರು ಸಂಘಟನೆಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದವು.

  ಕನ್ನಡ ಚಿತ್ರೋದ್ಯಮದ ಬೆಳವಣಿಗೆ ದೃಷ್ಟಿಯಿಂದ ಬನವಾಸಿ ಬಳಗದವರು ಖಾಸಗಿಯಾಗಿ ಸಮೀಕ್ಷೆ ನಡೆಸಿದ್ದರು. ಅದರ ವರದಿಯನ್ನು ಅಕಾಡೆಮಿ ಸದಸ್ಯರ ಗಮನಕ್ಕೆ ತಾರದೆ ಯಥವತ್ತಾಗಿ ಮುದ್ರಿಸಲಾಗಿತ್ತು. ಈ ಕೃತ್ಯ ನನ್ನದೇ ನಿರ್ದೇಶನದಡಿಯಲ್ಲಿ ಹೊರ ಬಂದಿರುವುದರಿಂದ ನೈತಿಕ ಹೊಣೆ ಹೊತ್ತು ವರದಿಯನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ಅಕಾಡೆಮಿ ಅಧ್ಯಕ್ಷ ಟಿಎಸ್ ನಾಗಾಭರಣ ಹೇಳಿದ್ದಾರೆ.

  ಈ ಸಮೀಕ್ಷಾ ವರದಿಯ ಪುಟ ಸಂಖ್ಯೆ 17 ರ ಪ್ರಕಟಣೆಯಲ್ಲಿ ಯಾವುದೇ ದುರುದ್ದೇಶವಿಲ್ಲ. ಇದರಿಂದ ಉದ್ಯಮದವರಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ನಾಗಾಭರಣ ಕೇಳಿಕೊಂಡಿದ್ದಾರೆ.

  ಕರ್ನಾಟಕ ಚಲನಚಿತ್ರ ಅಕಾಡೆಮಿ ಜುಲೈ.26 ರಂದು ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವ ಹಾಗೂ ಬಿ.ಆರ್.ಪಂತುಲು ಜನ್ಮಶತಮಾನೋತ್ಸವದ ಅಂಗವಾಗಿ ಮೂರು ಪುಸ್ತಕಗಳನ್ನು ಹೊರತಂದಿದೆ. ಅದರಲ್ಲಿ ಕನ್ನಡ ಚಿತ್ರರಂಗ ಸಮೀಕ್ಷಾ ವರದಿಯಲ್ಲಿ ಪ್ರಸ್ತಾಪವಾಗಿರುವ ಡಬ್ಬಿಂಗ್ ನಿಷೇಧ ಹಿಂಪಡೆಯುವ ಬಗ್ಗೆ ಇರುವ ವರದಿ ಉದ್ಯಮದವರ ಕೆಂಗಣ್ಣಿಗೆ ಗುರಿಯಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X