»   » ಚಲನಚಿತ್ರ ಇತಿಹಾಸ ಪುಸ್ತಕದ ತಪ್ಪು ಹೆಕ್ಕಲು ಹಂಪಿ ವಿವಿ ಸಮಿತಿ

ಚಲನಚಿತ್ರ ಇತಿಹಾಸ ಪುಸ್ತಕದ ತಪ್ಪು ಹೆಕ್ಕಲು ಹಂಪಿ ವಿವಿ ಸಮಿತಿ

Posted By: Staff
Subscribe to Filmibeat Kannada

ಬೆಂಗಳೂರು : ಕರ್ನಾಟಕ ಚಲನಚಿತ್ರ ಇತಿಹಾಸ ಪುಸ್ತಕದ ತಪ್ಪುಗಳನ್ನು ಪರಿಶೀಲಿಸಲು ಹಂಪಿ ವಿಶ್ವವಿದ್ಯಾಲಯ ಸಮಿತಿಯಾಂದನ್ನು ರಚಿಸಿದೆ.

ಎರಡು ಸಂಪುಟಗಳ ಈ ಕೃತಿಯಲ್ಲಿ ಅಡಕವಾಗಿರುವ ವಿಷಯಗಳ ಬಗ್ಗೆ ಸಾಕಷ್ಟು ಟೀಕೆಗಳು ಹರಿದು ಬಂದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ವಿ.ಎನ್‌.ಸುಬ್ಬರಾವ್‌, ಡಾ.ವಿಜಯಾ ಮತ್ತು ಎಂ.ಬಿ.ಸಿಂಗ್‌ ಅವರ ಸಂಪಾದಕತ್ವದಲ್ಲಿ ಈ ಕೃತಿ ಸಿದ್ಧವಾಗಿತ್ತು. ಕರ್ನಾಟಕ ಚಲನಚಿತ್ರ ಮಂಡಳಿ ಕೃತಿ ಸಂಪಾದನೆಯ ಹೊಣೆ ಹೊತ್ತಿತ್ತು. ಇದರಲ್ಲಿನ ತಪ್ಪುಗಳಿಗೆ ತಾವು ಎಳ್ಳಷ್ಟೂ ಜವಾಬ್ದಾರನಲ್ಲ ಎಂದು ಸುಮ್ಮನಿದ್ದ ಹಂಪಿ ವಿವಿಯವರು ಈಗ ಮೈಕೊಡವಿಕೊಂಡು ತಡವಾಗಿಯಾದರೂ ಎದ್ದಿದ್ದಾರೆ.

ಅಂದಹಾಗೆ, ಪುಸ್ತಕವನ್ನು ಈಗಾಗಲೇ ತಾವು ಓದಿದ್ದು, ಅದರಲ್ಲಿನ ತಪ್ಪುಗಳನ್ನು ಗ್ರಹಿಸಿದ್ದಲ್ಲಿ ನಿಮ್ಮ ಟೀಕೆಗೂ ಸ್ವಾಗತವಿದೆ. ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ - 583276 - ಇಲ್ಲಿಗೆ ನಿಮ್ಮ ಅಹವಾಲುಗಳನ್ನು ಜುಲೈ 15ರೊಳಗೆ ತಲುಪಿಸಿ.

ತಪ್ಪುಗಳನ್ನು ಸರಿ ಪಡಿಸಿದ ಪುಸ್ತಕ ಮತ್ತೆ ಮಾರುಕಟ್ಟೆಗೆ ಕಾಲಿಡುತ್ತದೋ, ಇಲ್ಲವೇ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೋ ಎಂದು ಕಾದು ನೋಡಬೇಕು.

(ಇನ್ಫೋ ವಾರ್ತೆ)

Read more about: kannada, karnataka, bangalore, parvathamma
English summary
Hampi VV forms a committee to review the Book Karnataka Chalanachitra Ithihasa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada