»   »  ನಾಯಕ ನಟರಿಗೆ ದ್ವಾರಕೀಶ್ ಛೀಮಾರಿ

ನಾಯಕ ನಟರಿಗೆ ದ್ವಾರಕೀಶ್ ಛೀಮಾರಿ

Subscribe to Filmibeat Kannada

*ಜಯಂತಿ
ಒಂದಲ್ಲ ಎರಡಲ್ಲ ಮೂರಲ್ಲ, ಸರೀಗೆ ಐದು ವರ್ಷ ಆಯಿತು. ನೆನಪಿಟ್ಟುಕೊಳ್ಳುವಂಥ ಇನ್ನೊಂದು ಚಿತ್ರನವನ್ನು ವಿಷ್ಣುವರ್ಧನ್ ಕೊಟ್ರಾ? ಆಪ್ತಮಿತ್ರನಂಥ ಯಶಸ್ವಿ ಚಿತ್ರದ ನಂತರವೂ ಅವರು ಸುಮ್ಮನಾದರಲ್ಲ, ಯಾಕೆ? ಯಾಕೆ ? ಈ ಕನ್ನಡದ ನಟರೇ ಹೀಗೆ. ಹಿರಿಯ ನಟರೇ ಹೀಗೆ ವರ್ತಿಸಿದರೆ ಇನ್ನು ಕಿರಿಯರ ಗತಿಯೇನು ? ಸೂಪರ್ ಹಿಟ್ ಚಿತ್ರ ಕೊಟ್ಟರೂ ಕೂಡ 'ಇನ್ನೊಂದು ಸಿನಿಮಾ ಮಾಡೋಣ ದ್ವಾರಕೀಶಣ್ಣ' ಅಂತ ವಿಷ್ಣು ಯಾವತ್ತೂ ಕೇಳಿದವರೇ ಅಲ್ಲ. ಛೆ, ನಮ್ಮ ಇಂಡಸ್ಟ್ರಿಯ ಹಣೆಬರಹವೇ ಇಷ್ಟು.

Stars killing Kannada film Industry-Dwarakeesh
ದ್ವಾರಕೀಶ್ ಹೀಗೆ ಮಾತಿನ ಬಾಣಗಳನ್ನು ಪುಂಖಾನುಪುಂಖವಾಗಿ ಬಿಡುತ್ತಾ ಹೋದದ್ದು 'ಅಂಜದಿರು' ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ. ಅನೌಪಚಾರಿಕ ಮಾತುಕತೆಯಲ್ಲಿ ಯಾವಾಗಲೂ ಮುಕ್ತವಾಗಿ ಲಹರಿ ಹರಿಬಿಡುವ ದ್ವಾರಕೀಶ್ ಈ ಸಲ ಅಮೃತ ಮಹೋತ್ಸವದ ನೆಪದಲ್ಲಿ ಇಮ್ಮಡಿ ಉತ್ಸಾಹದಲ್ಲಿ ಮಾತಾಡಿದರು. ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುವ ಸ್ಟಾರ್ ಗಳನ್ನು ತರಾಟೆಗೆ ತೆಗೆದುಕೊಂಡರು. ಲಕ್ಷ ಲಕ್ಷ ಎಣಿಸುವುದಷ್ಟನ್ನೇ ಮುಖ್ಯವಾಗಿಸಿಕೊಂಡ ಅವರ ಧೋರಣೆಗೆ ಧಿಕ್ಕಾರ ಹಾಕಿದರು. ಸಿನಿಮಾ ಗುಣಮಟ್ಟ ಹಾಳಾಗಲು ಇವರೇ ಕಾರಣ ಅಂತಲೂ ದೂರಿದರು.

ದುಡ್ಡು ಮುಖ್ಯವಲ್ಲ. ಹೋಗುವಾಗ ಯಾರೂ ಹೇರಿಕೊಂಡು ಹೋಗುವುದಿಲ್ಲ ಎನ್ನುವ ಕಿವಿಮಾತು ಅನುಭವಿ ಕುಳ್ಳನದ್ದು.ಮಯೂರ, ಭಕ್ತ ಕುಂಬಾರ, ಶ್ರೀಕೃಷ್ಣದೇವರಾಯ ತರಹದ ಚಿತ್ರಗಳನ್ನು ನಮ್ಮವರು ಯೋಚಿಸುತ್ತಲೇ ಇಲ್ಲ. ಸ್ಟಾರ್‌ಗಳು ಒಳ್ಳೆಯ ಸಿನಿಮಾ ಮಾಡುವ ಕುರಿತು ಗಂಭೀರವಾಗಿ ಯೋಚಿಸುತ್ತಲೇ ಇಲ್ಲ. ಎಲ್ಲರೂ ಹಣ ಕಳೆದುಕೊಂಡರೆ ನಾಯಕ ನಟರು ಮಾತ್ರ ಸುಭಿಕ್ಷವಾಗಿದ್ದಾರೆ. ಇದು ಸಲ್ಲದು. ಹೀಗೆ ದ್ವಾರಕೀಶ್ ಇಲ್ಲ ಸಲ್ಲಗಳನ್ನು ಎಳೆದೆಳೆದು ಗುಪ್ಪೆ ಹಾಕಿದರು.

ಆನಂದ ಭೈರವಿ ಸಿನಿಮಾ ತೆಗೆದಾಗ ತಾವು ಅತ್ತಿದ್ದನ್ನು ಹೇಳುವಾಗಲಂತೂ ಅವರ ಕಣ್ಣುಗಳಲ್ಲಿ ತೇವ ಜಮೆಯಾಗಿತ್ತು. ಆಗ ನನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ಇನ್ನಷ್ಟು ಗದ್ಗದಿತರಾದರು. ಪಾಪ, ದ್ವಾರಕೀಶ್!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada