»   » ಮತ್ತೆ ಶುರುವಾಯ್ತು ವಿಷ್ಣು ದ್ವಾರ್ಕಿ ಜಟಾಪಟಿ

ಮತ್ತೆ ಶುರುವಾಯ್ತು ವಿಷ್ಣು ದ್ವಾರ್ಕಿ ಜಟಾಪಟಿ

Posted By:
Subscribe to Filmibeat Kannada
Dwarkesh Vishnuvardhana movie controversy
'ರಾಘವೇಂದ್ರ ಸ್ವಾಮಿ ಆಣೆಗೂ 'ವಿಷ್ಣುವರ್ಧನ'ಹೆಸರು ಬದಲಿಸುವುದಿಲ್ಲ. ವಿಷ್ಣು ಜೀವನ ಚರಿತ್ರೆ ನಾನ್ಯಾಕೆ ತೆಗೆಯಲಿ. ವಿಷ್ಣು ಹೆಸರಿನಲ್ಲಿ ನಾನು ದುಡ್ಡು ಮಾಡುವ ಉದ್ದೇಶವಿಲ್ಲ. ಇದು ಮನರಂಜನೆಯುಕ್ತ ಚಿತ್ರ ಅಷ್ಟೇ'.

ಭಾರತಿ ಇದನ್ನು ಅರ್ಥಮಾಡಿಕೊಂಡು ನಮಗೆ ಸಹಕಾರ ನೀಡುವ ಬದಲು ತಿರುಗಿ ಬಿದ್ದಿರುವುದು ದುರಂತ ಎಂದು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ದ್ವಾರಕೀಶ್ ತಮ್ಮ ಮನದಾಳ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡರು.

ನಾಳೆ ವಿಷ್ಣುವರ್ಧನ ಹೆಸರಿನ ಚಿತ್ರದ ಮಹೂರ್ತ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ವಿವಾದದ ಕಿಡಿ ಬೆಂಕಿಯಾಗಿ ಹೊತ್ತಿ ಉರಿಯ ತೊಡಗಿದೆ. ಇನ್ನೂ ಚಿತ್ರದ ಹೆಸರನ್ನು ರಿಜಿಸ್ಟ್ರರ್ ಮಾಡಿಸಿಲ್ಲ ಚೆಂಬರ್ ಗೆ ಮನವಿ ಸಲ್ಲಿಸಿದ್ದೇನೆ. ಕಮಿಟಿ ಒಪ್ಪಿಗೆ ಕೊಡಬೇಕು ಅಷ್ಟೆ.

'ಪ್ರೊಡಕ್ಷನ್ ನಂ.47' ಎಂಬ ಹೆಸರಿನಲ್ಲೇ ಚಿತ್ರದ ಮಹೂರ್ತ ನಡೆಯಲಿದೆ.ಚಿತ್ರದ ನಾಯಕ ಸುದೀಪ್ ನಾಳೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ. ನಾಯಕಿಯರಾಗಿ ಪ್ರಿಯಾಮಣಿ ಹಾಗೂ ಭಾವನಾ ಮೆನನ್ ಆರಿಸಿದ್ದೇವೆ. ಚೇಂಬರ್ ನನಗೆ ಮೋಸ ಮಾಡುವುದಿಲ್ಲ ಎಂಬ ಭರವಸೆ ಇದೆ ಎಂದು ದ್ವಾರಕೀಶ್ ನುಡಿದರು. ಆದರೆ, ಕೆಎಫ್ ಸಿಸಿ ವಿಷ್ಣುವರ್ಧನ ಶೀರ್ಷಿಕೆಗೆ ರೆಡ್ ಸಿಗ್ನಲ್ ನೀಡಲಿದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ.

ಎಸ್ಪಿ ಸಾಂಗ್ಲಿಯಾನ ಗಣ್ಯ ವ್ಯಕ್ತಿ ಅಲ್ವ. ಕಿರಣ್ ಬೇಡಿ ಗಣ್ಯ ವ್ಯಕ್ತಿ ಅಲ್ವ ಅವರ ಹೆಸರಿನಲ್ಲಿ ಚಿತ್ರಗಳು ಬಂದಿಲ್ವ. ವಿಷ್ಣು ಗಣ್ಯವ್ಯಕ್ತಿಯಲ್ಲ ಎಂದು ಭಾರತಿ ಅಥವಾ ಕೆಎಫ್ ಸಿಸಿ ಬರೆದುಕೊಡಲಿ ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ದ್ವಾರಕೀಶ್ ಹೇಳಿದರು.

ನಾನೇನು ವಿಷ್ಣು ವರ್ಧನ್ ಹೆಸರು ಕೆಡಸಲು ಹೊರಟಿರುವಂತೆ ಆಡುತ್ತಿದ್ದರಲ್ಲ ಇವರಿಗೆಲ್ಲಾ ಏನು ಹೇಳೋದು. ಒಂದು ವೇಳೆ ಚೇಂಬರ್ ವಿಷ್ಣು ವರ್ಧನ ಹೆಸರು ಬಳಸಲು ಅನುಮತಿ ಕೊಡದಿದ್ದರೆ, ನಾನು ಕೋರ್ಟ್ ಗೆ ಹೋಗಬೇಕಾಗುತ್ತದೆ ಎಂದು ಕರ್ನಾಟಕದ ಕುಳ್ಳ ಎಚ್ಚರಿಸಿದರು.

ಮೊದಲು ನಿರ್ಮಾಪಕ ನಂತರ ವಷ್ಟೆ ಎಲ್ಲಾ ಅವನ ಋಣ ತೀರಿಸಲೇ ಬೇಕು. ನಾನು ಈ ಚಿತ್ರ ಮಾಡೇ ಮಾಡುತ್ತೇನೆ. ವಿಷ್ಣುವರ್ಧನ ಎಂಬುದು ರಾಜನ ಹೆಸರು. ಐದು ಕೋಟಿ ಕನ್ನಡಿಗರ ಆಸ್ತಿ ಎಂದು ದ್ವಾರಕೀಶ್ ಮಾಧ್ಯಮಗಳ ಮುಂದೆ ಹೇಳಿದರೂ, ಡಾ. ವಿಷ್ಣುವರ್ಧನ್ ಅವರ ನೂರಾರು ಅಭಿಮಾನಿಗಳು ಜಯನಗರದ ಅವರ ಮನೆಯ ಮುಂದೆ ಜಮಾಯಿಸಿದ್ದು, ಭಾರಿ ಪ್ರತಿಭಟನೆ ನಡೆಸಿದ್ದಾರೆ. ಭಾರತಿ ವಿಷ್ಣುವರ್ಧನ್ ಅಭಿಮಾನಿಗಳನ್ನು ಸಂತೈಸಲು ಹೆಣಗಾಡುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada