»   »  ರಮ್ಯಾ ರಂಪಾಟ; ಜೊತೆಗಾರನಿಗೆ ಗಣೇಶ್ ಬಹಿಷ್ಕಾರ

ರಮ್ಯಾ ರಂಪಾಟ; ಜೊತೆಗಾರನಿಗೆ ಗಣೇಶ್ ಬಹಿಷ್ಕಾರ

Subscribe to Filmibeat Kannada
Prem and Ramya
ಹಿರಿಯ ಪತ್ರಕರ್ತರ ಜೊತೆ ನಟಿ ರಮ್ಯಾ ಉದ್ಧಟತನದಿಂದ ವರ್ತಿಸಿದ್ದು, ಪತ್ರಕರ್ತರು ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದ ಘಟನೆ 'ಜೊತೆಗಾರ' ಚಲನಚಿತ್ರದ ಸುದ್ದಿಗೋಷ್ಠಿ ಸಮಾರಂಭದಲ್ಲಿ ಇಂದು ನಡೆದಿದೆ.

"ನಿಮಗೆ ಇಷ್ಟ ಇಲ್ಲಾಂದ್ರೆ ಹೋಗಿ ,ನಿಮ್ಗೆ ಯಾರು ಬರೋಕೆ ಹೇಳಿಲ್ಲ?" ಎಂದು ರಮ್ಯಾ ಹೇಳಿದ್ದು ಹಿರಿಯ ಪತ್ರಕರ್ತರ ಪಿತ್ತ ನೆತ್ತಿಗೇರುವಂತೆ ಮಾಡಿತು. ಗಣೇಶ್ ಕಾಸರಗೋಡು ಸೇರಿದಂತೆ ಹಿರಿಯ ಪತ್ರಕರ್ತರು ರಮ್ಯಾ ಇರುವ ತನಕ ಸುದ್ದಿ ಸಂಗ್ರಹ ಮಾಡುವುದಿಲ್ಲ ಎಂದು ಹೊರನಡೆದರು ಎನ್ನಲಾಗಿದೆ. ತಡವಾಗಿ ಬಂದದ್ದಕ್ಕೆ ಕ್ಷಮೆ ಯಾಚನೆ ಮಾಡುವುದಿಲ್ಲ ಎಂದ ರಮ್ಯಾ , ನಾನು ನಿರ್ಮಾಪಕ ರಾಂಪ್ರಸಾದ್ ಅವರಿಗೆ ಮೊದಲೇ ಹೇಳಿದ್ದೆ. ನಾನು ಬರೋದು ಲೇಟ್ ಆಗುತ್ತೆ ನೀವು ಕಾರ್ಯಕ್ರಮ ಆರಂಭಿಸಿ ಅಂದಿದ್ದೆ. ತಡ ಆಗಿ ಬಂದಿಲ್ಲ. ನಾನು ಸರಿ ಸಮಯಕ್ಕೆ ಬಂದಿದ್ದೀನಿ ಎಂದಿದ್ದರು.

ರಮ್ಯಾ: ಪ್ರೆಸ್ ಮೀಟ್ ಇರೋದು ನಂಗೆ ಗೊತ್ತಿರಲಿಲ್ಲ. ನಾನು ಬರೀ ಲಂಚ್ ಇರೋದು ಅಂದುಕೊಂಡಿದ್ದೆ. ಆದ್ರೆ ಪ್ರೆಸ್ ಮೀಟ್ ಇಟ್ಟಿದ್ದು ರಾಂ ಪ್ರಸಾದ್ ಸಾರ್, ನಂಗೆ ಹುಚ್ಚು ಹಿಡಿದಿಲ್ಲ ಸುಮ್ನೆ ರೇಗಾಡೋದು. ನಾನು ತಪ್ಪು ಮಾಡಿಲ್ಲ ಸಾರಿ ಕೇಳೋಲ್ಲ. ನನ್ನ ನಕ್ಷತ್ರನೇ ಹೀಗೆ ತಪ್ಪು ಮಾಡದೇ ನಾನು ಯಾರಿಗೂ ಸ್ಸಾರಿ ಕೇಳಲ್ಲ . ನಿಮ್ಗೆ ನಾನು ಕರೆದಿಲ್ಲ. ನಿಮ್ಗೆ ಲೇಟ್ ಆಗಿದ್ರೆ ಹೊರಡಿ. ಅಂದ್ರಿ ಮತ್ತೆ. ಹೂಂ... ರಾಂ ಪ್ರಸಾದ್ ಅವರು ಕರೆದಿದ್ದು, ಅವರು ಸ್ಸಾರಿ ಕೇಳ್ಬೇಕು. ಯಾರಾದ್ರೂ provoke ಮಾಡಿದ್ರೆ ಸುಮ್ನೆ ಇರೋಕೆ ಆಗುತ್ತಾ. ಏನು ತಪ್ಪು ಮಾಡದೇ ಸುಮ್ನೆ blame ಮಾಡಿದ್ರೆ ಕೋಪ ಬರೋಲ್ವ. ನಾನು ಕ್ಷಮೆ ಕೇಳೋಲ್ಲ

ಮಾತುಕತೆ ಸಾರಾಂಶ:
ಹೂಂ ನಾವು ಕಾದಿಲ್ವ ಒಂದು ಗಂಟೆಯಿಂದ ..

ಯೂ ಪ್ಲೀಸ್ ಟೆಲ್ ಹಿಮ್ ( u please tell him)

ರೀ ನಿಮ್ಗೆ ಕೋಪ ಬರಬಾರದು
ಹೂಂ ನಾವು ಕಾದಿಲ್ವ ಒಂದು ಗಂಟೆಯಿಂದ ..ಸಂಕಟ ಆಗೋಲ್ವ

ಫಸ್ಟ್ ಕೋಪದಲ್ಲಿ ಮಾತಾಡಿದ್ದು ನೀವು..

"ನಿಮಗೆ ಇಷ್ಟ ಇಲ್ಲಾಂದ್ರೆ ಹೋಗಿ ,ನಿಮ್ಗೆ ಯಾರು ಬರೋಕೆ ಹೇಳಿಲ್ಲ?"

ನಿಮ್ಮನ್ನು ಯಾರು ಕರೆದಿದ್ದು. ಬೇಕಾದ್ರೆ ಹೋಗಿ .. ಅಂದಾಗ ಏ.. ಏನು ಮಾತಾಡ್ತಾಳೆ ಅವಳು ಅಂದು ಸಿಟ್ಟಾದ ಗಣೇಶ್ ಕಾಸರಗೋಡು ಅವರು ಹೊರನಡೆದರು ಎನ್ನಲಾಗಿದೆ.

ಅಶ್ವಿನಿ ರಾಂಪ್ರಸಾದ್: ರಮ್ಯಾ ಅವರ ಮಾತನ್ನು ಸಮರ್ಥಿಸಿಕೊಂಡ ರಾಂ ಪ್ರಸಾದ್ ಅವರು, ರಮ್ಯಾಗೆ ಇವತ್ತು ಬರೀ ಭೋಜನಕೂಟ ಎಂದು ಹೇಳಿದ್ದೆ. ಪಿಆರ್ ಓ ನಾಗೇಂದ್ರ ಅವರು ನಟಿಯನ್ನು ಸಂಪರ್ಕಿಸಿ ತಡವಾಗುವುದನ್ನು ತಿಳಿಸಿದ್ದರು. ರಮ್ಯಾ ತಪ್ಪಲ್ಲ. ಆದರೆ ಪ್ರೆಸ್ ಮೀಟ್ ನಲ್ಲಿ ಅವರ ವರ್ತನೆ ಅದು ಅವರಿಗೂ ಪತ್ರಕರ್ತರಿಗೂ ಸಂಬಂಧಿಸಿದ್ದು ಅದರ ಬಗ್ಗೆ ನಾನು ಏನು ಹೇಳಲಾರೆ.

ಗಣೇಶ್ ಕಾಸರಗೋಡು :28 ವರ್ಷದಿಂದ ಚಿತ್ರರಂಗದಲ್ಲಿದ್ದೀನಿ. ಸೌಜನ್ಯಕ್ಕಾದರೂ ಕ್ಷಮೆ ಯಾಚಿಸಿಲ್ಲ. ನಟಿಯರು ಬರುತ್ತಾರೆ ಹೋಗುತ್ತಾರೆ. ನಮಗೆ ರಾಂಪ್ರಸಾದ್ ಮುಖ್ಯ. 30 -35 ಜನ ಕಾಯ್ತ ಇದ್ವಿ.. ಎಷ್ಟು ಧೈರ್ಯ ಇರಬೇಕು , ಎಂಥಾ ದಾರ್ಷ್ಟ್ಯ ಆಕೆಗೆ. ಹೌದು ಯುದ್ಧ ಮಾಡುವಾಗ ,ಕೋಪ ಬಂದಾಗ ಬಹುವಚನ ಏಕವಚನ ಅಂಥಾ ನೋಡೋಕೆ ಆಗೋಲ್ಲ. ಪ್ರೆಸ್ ಮೀಟ್ ಗೆ ಮುಂಚೆ ಈ ಫಿಲ್ಮಂ ಪೋಸ್ಟರ್ ನೋಡಿ ಎಂಥಾ ಚೆಂದಾ ಇದೇ ಜೋಡಿ ಅಂಥಾ ಅಂದುಕೊಂಡ್ವಿ . ಆ ಚೆಂದಾನೆಲ್ಲಾ ಪೂರ್ತಿ ಕುಲಗೆಡಿಸಿ ಬಿಟ್ಳು ಆಕೆ .

ಗೊಂದಲಕ್ಕೆ ಕಾರಣ: ರಮ್ಯಾ ಅವರು ತಡವಾಗಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬುದು ತಿಳಿದಿದ್ದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರು ಕಾರ್ಯಕ್ರಮಕ್ಕೆ ಮುಂಚಿತವಾಗಿ ಪತ್ರಕರ್ತರಿಗೆ ಹೇಳಬೇಕಿತ್ತು. ಅವರು ಮಾಡಿದ ಸಣ್ಣ ತಪ್ಪು ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾಗಿದೆ ಎಂದು ನಾಯಕ ನಟ ಪ್ರೇಮ್ ಹೇಳಿದ್ದಾರೆ. ಈ ಮುಂಚೆ ನಡೆದಿದ್ದ ಪ್ರೆಸ್ ಮೀಟ್ ನಲ್ಲಿ ನಟ ಪ್ರೇಮ್ ಅವರನ್ನು ಕಡೆಗಣಿಸಿ ರಾಂಪ್ರಸಾದ್ ಅವರು ಮಾತಾಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada