»   » ಶಂಕರ್ ಐಪಿಎಸ್ ವಿವಾದಿತ ದೃಶ್ಯಗಳಿಗೆ ಕತ್ತರಿ

ಶಂಕರ್ ಐಪಿಎಸ್ ವಿವಾದಿತ ದೃಶ್ಯಗಳಿಗೆ ಕತ್ತರಿ

Posted By:
Subscribe to Filmibeat Kannada

'ಶಂಕರ್ ಐಪಿಎಸ್' ಚಿತ್ರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಚಿತ್ರದಲ್ಲಿನ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ಮಾಧ್ಯಮಗಳ ಮುಂದೆ ಕ್ಷಮೆ ಕೋರುವಂತೆ ನಿರ್ಮಾಪಕರಿಗೆ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಶಂಕರ್ ಐಪಿಎಸ್ ಚಿತ್ರದಲ್ಲಿ ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳಿವೆ. ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದು ಅಗೌರವಯುತವಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘ ನ್ಯಾಯಾಲಯದಲ್ಲಿ ದಾವಾ ಹೂಡಲಾಗಿತ್ತು. ಈ ಸಂಬಂಧ ಚಿತ್ರ ಪ್ರದರ್ಶನಕ್ಕೆ ಕೋರ್ಟ್ ಜೂನ್ 5ರವರೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ಇಂದು ವಿಚಾರಣೆ ವೇಳೆ ಚಿತ್ರದ ನಿರ್ಮಾಪಕರಾದ ಕೆ ಮಂಜು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು. ಚಿತ್ರದಲ್ಲಿನ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕುವುದಾಗಿ ಕೋರ್ಟ್ ಗೆ ತಿಳಿಸಿದ್ದರು. ವಿವಾದಿತ ದೃಶ್ಯಗಳಿಗೆ ಕೇವಲ ಕತ್ತರಿ ಹಾಕುವುದಷ್ಟೇ ಅಲ್ಲ ಮಾಧ್ಯಮಗಳ ಮುಂದೆ ಕ್ಷಮೆ ಕೋರುವಂತೆ ಕೋರ್ಟ್ ಆದೇಶಿಸಿದೆ.

ಶಂಕರ್ ಐಪಿಎಸ್ ಚಿತ್ರ ಈಗಾಗಲೆ ಪ್ರದರ್ಶನಗೊಳ್ಳುತ್ತಿದ್ದು ಮುಂಬರುವ ಎರಡು ಮೂರು ದಿನಗಳಲ್ಲಿ ವಿವಾದಿತ ದೃಶ್ಯಗಳಿಗೆ ಕತ್ತರಿ ಬೀಳಲಿದೆ. ಚಿತ್ರವನ್ನು ಪರಿಶೀಲಿಸಲು ವಕೀಲರಿಂದ ಇಂದು ಸಂಜೆ ಶಂಕರ್ ಐಪಿಎಸ್ ಚಿತ್ರದ ವೀಕ್ಷಣೆ ಮಲ್ಲೇಶ್ವರ ರೇಣುಕಾಂಬ ಚಿತ್ರಮಂದಿರದಲ್ಲಿ ನಡೆಯಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada