»   » ಕಂಠೀರವನಿಗಾಗಿ ಶುಭಾ ಪೂಂಜಾ 'ಪುತ್ರ' ತ್ಯಾಗ

ಕಂಠೀರವನಿಗಾಗಿ ಶುಭಾ ಪೂಂಜಾ 'ಪುತ್ರ' ತ್ಯಾಗ

Posted By:
Subscribe to Filmibeat Kannada

'ಪುತ್ರ' ಚಿತ್ರದಿಂದ ನಟಿ ಶುಭಾ ಪೂಂಜಾ ಹೊರಬಿದ್ದಿದ್ದಾರೆ. ಆಕೆಯ ಸ್ಥಾನಕ್ಕೆ 'ಅಂಬಾರಿ'ಖ್ಯಾತಿಯ ಸುಪ್ರೀತಾರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರಕ್ಕೆ ಕೆಲ ದಿನಗಳ ಕಾಲ ಚಿತ್ರೀಕರಣವನ್ನು ನಡೆಸಲಾಗಿತ್ತು. ವಿ ಉಮಾಕಾಂತ್ ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ.

ಕೆಲ ದಿನಗಳ ಚಿತ್ರೀಕರಣದ ಬಳಿಕ ಕಾರಣಾಂತರಗಳಿಂದ 'ಪುತ್ರ' ಚಿತ್ರೀಕರಣ ನಿಂತು ಹೋಗಿತ್ತು. ಚಿತ್ರದ ತಾರಾಗಣದಲ್ಲಿ ದಿಗಂತ್ ಗೆ ಜೊತೆಯಾಗಿ ಶುಭಾ ಪೂಂಜಾ ಆಯ್ಕೆಯಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಶುಭಾ ಪೂಂಜಾ ಜಾಗಕ್ಕೆ ಸುಪ್ರೀತಾರನ್ನು ಆಯ್ಕೆ ಮಾಡಲಾಗಿದೆ. ಇದಕ್ಕೆ ಕಾರಣಗಳೇನು ಎಂಬುದು ನಿಗೂಢವಾಗಿವೆ.

ಶುಭಾ ಪೂಂಜಾ ಸದ್ಯಕ್ಕೆ ವಿಜಯ್ ನಾಯಕ ನಟನಾಗಿರುವ 'ಕಂಠೀರವ' ಚಿತ್ರದಲ್ಲಿ ಬ್ಯ್ಯುಸಿಯಾಗಿದ್ದಾರೆ. ಒಂದೆರಡು ತಿಂಗಳ ವಿರಾಮದ ಬಳಿಕ 'ಪುತ್ರ' ಚಿತ್ರ ಇದೀಗ ಮತ್ತೆ ಕೈಗೆತ್ತಿಕೊಳ್ಳಲಾಗಿದೆ. ಪುತ್ರ ಚಿತ್ರಕ್ಕಾಗಿ ಬಹಳ ದಿನಗಳಿಂದ ನಿರೀಕ್ಷಿಸಿದ್ದೇ ಆಯ್ತು. ಬಳಿಕ ತಮಗೆ 'ಕಂಠೀರವ' ಚಿತ್ರದಲ್ಲಿ ಅವಕಾಶ ಬಂತು. ವಿಧಿಯಿಲ್ಲದೆ ಚಿತ್ರವನ್ನು ಕೈಬಿಡಬೇಕಾಯಿತು ಎಂದು ಶುಭಾ ಪೂಂಜಾ ಪ್ರತಿಕ್ರಿಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada