twitter
    For Quick Alerts
    ALLOW NOTIFICATIONS  
    For Daily Alerts

    "ರವಿ ಬೆಳಗೆರೆ ಪುಸ್ತಕದ ಒಂದೇ ಒಂದು ಸಾಲನ್ನು ಕದ್ದಿಲ್ಲ"

    By Rajendra
    |

    'ಹಾಯ್ ಬೆಂಗಳೂರು' ಸಂಪಾದಕ ರವಿ ಬೆಳಗೆರೆ ಅವರ ಕೃತಿಚೌರ್ಯ ಆರೋಪವನ್ನು 'ಭೀಮಾ ತೀರದಲ್ಲಿ' ಚಿತ್ರದ ನಿರ್ದೇಶಕ ಓಂ ಪ್ರಕಾಶ್ ಅವರು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಟಿವಿ 9 ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅವರು, ರವಿ ಬೆಳೆಗರೆ ಆರೋಪಗಳನ್ನು ತಳ್ಳಿ ಹಾಕಿದರು.

    "ತಾವು ಪೊಲೀಸ್ ಇಲಾಖೆ, ಸಾರ್ವಜನಿಕರು, ಎಸ್‌ಪಿ ರಾಜಪ್ಪ ಅವರನ್ನು ಸಂಪರ್ಕಿಸಿ ಚಿತ್ರಕತೆಯನ್ನು ಸಿದ್ಧಪಡಿಸಿದ್ದೇವೆ. ರವಿ ಬೆಳಗೆರೆ ಅವರ 'ಭೀಮಾ ತೀರದ ಹಂತಕರು' ಕೃತಿಯಲ್ಲಿನ ಒಂದೇ ಒಂದು ಸಾಲನ್ನು ಕದ್ದಿಲ್ಲ ಎಂದು ಖಂಡತುಂಡವಾಗಿ ಹೇಳಿದರು. ನಾವು ಹಂತಕರ ಬಗ್ಗೆ ಸಿನಿಮಾ ಮಾಡಿಲ್ಲ" ಎಂದಿದ್ದಾರೆ.

    ನಿಜ ಜೀವನದ ಶೇ.30ರಷ್ಟು ಹಾಗೂ ಕಮರ್ಷಿಯಲ್ ಅಂಶಗಳನ್ನು ಶೇ.70ರಷ್ಟು ಸೇರಿಸಿ ಚಿತ್ರವನ್ನು ಮಾಡಿದ್ದೇವೆ. ಪುಸ್ತಕದಲ್ಲಿನ ಕತೆಯೇ ಬೇರೆ ಸಿನಿಮಾ ಕತೆಯೇ ಬೇರೆ. ಒಂದು ವೇಳೆ ನಾನು ಕತೆ ಕದ್ದಿದ್ದರೆ ಎದೆ ತಟ್ಟಿ ಹೇಳಿಕೊಳ್ಳುತ್ತೇನೆ. ಆದರೆ ರವಿ ಬೆಳಗೆರೆ ಅವರ ಕೃತಿಯನ್ನು ಕದ್ದು ಮಾಡಿಲ್ಲ ಸ್ವಾಮಿ ಎಂದಿದ್ದಾರೆ ಓಂ ಪ್ರಕಾಶ್. (ಒನ್‌ಇಂಡಿಯಾ ಕನ್ನಡ)

    English summary
    Director Om Prakash Rao denies Kannada renowned journalist Ravi Belageres allegations against movie Bheema Theeradalli. Ravi Belagere clamims that 'Bheema Theeradalli' script has lifting from his book Bheema Theerada Hantakaru
    Tuesday, April 10, 2012, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X