For Quick Alerts
  ALLOW NOTIFICATIONS  
  For Daily Alerts

  ನಟಿ ಐಶ್ವರ್ಯ ರೈ ಮತ್ತೆ ಗರ್ಭಿಣಿಯಂತೆ

  By Srinath
  |

  ಇದರಲ್ಲಿ ಎಷ್ಟು ಸತ್ಯವಿದೆಯೋ, ಎಷ್ಟು ಸುಳ್ಳೋ ಖುದ್ದು ಆ ಅಭಿಷೇಕ್ ಬಚ್ಚನ್ ಅವರೇ ತಿಳಿಸಬೇಕು, ಅಥವಾ ನಮ್ಮ ಕನ್ನಡತಿ ಐಶ್ವರ್ಯ ರೈ ದೃಢಪಡಿಸಿದರೂ ಆದೀತು. ಐಶ್ವರ್ಯ ಮಾವ ಅಮಿತಾಭ್‌ ಬಚ್ಚನ್‌ ತನ್ನ ಮುದ್ದು ಮೊಮ್ಮಗುವಿಗೆ ಇನ್ನೂ ಅಧಿಕೃತವಾಗಿ ಹೆಸರನ್ನೂ ಇಟ್ಟಿಲ್ಲ. ಆಗಲೇ ಮತ್ತೊಂದು ಮಗುವನ್ನು ಸ್ವಾಗತಿಸುವ ಆತುರ-ಕಾತರ ತೋರಿಸಿದ್ದಾರಂತೆ!

  ವಿಷಯ ಏನಪಾ ಅಂದರೆ ಹಸಿ ಬಾಣಂತಿ ಐಶ್ವರ್ಯ ರೈ ಮತ್ತೆ ಗರ್ಭವತಿಯಾಗಿದ್ದಾರಂತೆ. ಹಾಗಂತ ರಾಷ್ಟ್ರೀಯ ಮಾಧ್ಯಮಗಳು ಸಾರಿ ಹೇಳುತ್ತಿವೆ. ಐಶ್ವರ್ಯಳನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರು ಹೇಳುವ ಪ್ರಕಾರ ನಟಿ ಐಶ್ವರ್ಯ ರೈ ಮತ್ತೊಂದು ಮಗುವಿಗೆ ತಾಯಿಯಾಗಲಿದ್ದಾರೆ. ಅದಕ್ಕಾಗಿ ಆಕೆ ತಕ್ಷಣಕ್ಕೆ ಯಾವುದೇ ಚಿತ್ರೀಕರಣಗಳಿಗಾಗಿ ಸಹಿ ಹಾಕುತ್ತಿಲ್ಲ ಎಂಬುದು ಅವರ ಶೋಧ.

  ಅಂದಹಾಗೆ 38 ವರ್ಷದ ಐಶ್ವರ್ಯ ಕಳೆದ ನವೆಂಬರಿನಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

  ಅನೇಕ ಮಹತ್ವದ ಕಾಲ್ ಶೀಟ್ ಗಳು ಐಶ್ವರ್ಯಳತ್ತ ಸುಳಿದಾಡಿದವು. ಆದರೆ ಮಹಾತಾಯಿ ಯಾವುದಕ್ಕೂ ಒಪ್ಪಿಗೆಯ ಮುದ್ರೆ ಹಾಕುತ್ತಿಲ್ಲ. ದೀರ್ಘಾವಧಿ ಯೋಜನೆಗಳಂತೂ ಬೇಡ್ವೇ ಬೇಡ ಎನ್ನುತ್ತಿದ್ದಾರಂತೆ ಐಶ್ವರ್ಯ. ಸಣ್ಣಪುಟ್ಟ ಜಾಹೀರಾತು, ಪ್ರಮೋಷನಲ್ ಚಿತ್ರೀಕರಗಳಿಗೆ OK ಅನ್ನುತ್ತಿದ್ದಾರೆ ಎಂಬುದು ಆ ಪತ್ರಕರ್ತರ ಖಡಕ್ ಮಾಹಿತಿಯೋ ಅಥವಾ ದುಃಖವೋ ತಿಳಿಯದಾಗಿದೆ.

  English summary
  It is reported that Aishwarya Rai Bachchan is planning her second child very soon. Thats why she has not signed any film or not so hurry to retun to silver screen says a critic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X