Just In
- 10 min ago
ಬೆಂಕಿ ಹಚ್ಚಿ ಆನೆ ಸಾವು: ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು- ಸುಮಲತಾ
- 1 hr ago
ನಟಿ ರಾಗಿಣಿಗೆ ಜಾಮೀನು ಸಿಕ್ಕರೂ ಜೈಲಿನಿಂದ ಹೊರಬರಲು ಪರದಾಟ
- 2 hrs ago
ಕಾರವಾರ ಬೀಚ್ ಸ್ವಚ್ಛ ಮಾಡಿದ ನಟ ಅರುಣ್ ಸಾಗರ್
- 2 hrs ago
ಹಿಂದಿ ರಾಷ್ಟ್ರ ಭಾಷೆ ಎಂದ ಸಾಹಿತಿ ದೊಡ್ಡರಂಗೇಗೌಡ: ಇದು ಅವರ ಅರಿವಿನ ಕೊರತೆಯಾಗಿರಬಹುದು ಎಂದ ನಿಖಿಲ್
Don't Miss!
- Sports
'ವೈಟ್ಬಾಲ್ ತಂಡಗಳಲ್ಲಿ ಅಯ್ಯರ್, ಸ್ಯಾಮ್ಸನ್ ಬದಲು ಪಂತ್ ಆಡಿಸಬೇಕು'
- News
ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಣಿರತ್ನಂ ಮುಂದಿನ ಚಿತ್ರದಲ್ಲಿ ಒಬ್ಬರಲ್ಲ, ಇಬ್ಬರಲ್ಲ 8 ಜನ ಸೂಪರ್ ಸ್ಟಾರ್ಸ್
ಖ್ಯಾತ ನಿರ್ದೇಶಕ ಮಣಿರತ್ನಂ ಕಳೆದ ವರ್ಷ ಚೆಕ್ಕ ಚಿವಂತ ವಾನಂ ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಹಲವು ಸೂಪರ್ ಸ್ಟಾರ್ ನಟರ ಕರೆತಂದಿದ್ದರು. ಅರವಿಂದ್ ಸ್ವಾಮಿ, ಸಿಂಬು, ಅರುಣ್ ವಿಜಯ್, ವಿಜಯ್ ಸೇತುಪತಿ, ಜ್ಯೋತಿಕಾ, ಅಧಿತಿ ರಾವ್ ಹೈದರಿ, ಪ್ರಕಾಶ್ ರಾಜ್, ಜಯಸುಧಾ, ತ್ಯಾಗರಾಜನ್ ಅಂತಹ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು.
ಇದೀಗ, ಪೊನ್ನಿಯನ್ ಸೆಲ್ವನ್ ಎಂಬ ಚಿತ್ರವೊಂದನ್ನ ಮಾಡುತ್ತಿರುವ ಮಣಿರತ್ನಂ ಈ ಬಾರಿ ಮತ್ತೆ ದೊಡ್ಡ ತಾರಬಳಗದ ಜೊತೆ ಬರ್ತಿದ್ದಾರೆ. ಭಾರತದ ಖ್ಯಾತ ಕಲಾವಿದರನ್ನ ಈ ಸಿನಿಮಾಗಾಗಿ ಕರೆತರುತ್ತಿದ್ದಾರೆ. ಇದು ದಕ್ಷಿಣ ಭಾರತದಲ್ಲೇ ಬಹುದೊಡ್ಡ ಸಿನಿಮಾ ಆಗಲಿದೆ.
ಬಂಪರ್ ಆಫರ್ ಪಡೆದ ಅನುಷ್ಕಾ ಶೆಟ್ಟಿ: ಐಶ್ವರ್ಯ ರೈ ಜೊತೆ ನಟನೆ.!
ಸದ್ಯದ ಮಾಹಿತಿ ಪ್ರಕಾರ ಮಣಿರತ್ನಂ ಅವರ ಮುಂದಿನ ಸಿನಿಮಾ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 8 ಜನ ಸೂಪರ್ ಸ್ಟಾರ್ ಕಲಾವಿದರು ತೆರೆಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಿದ್ರೆ, ಸದ್ಯಕ್ಕೆ ಆಯ್ಕೆಯಾಗಿರುವ ಆ 8 ಜನ ಸ್ಟಾರ್ ನಟರು ಯಾರು?

ಚಿಯಾನ್ ವಿಕ್ರಂ
ರಾವಣ್ ಸಿನಿಮಾದ ಬಳಿಕ ಚಿಯಾನ್ ವಿಕ್ರಂ ಮತ್ತೆ ಮಣಿರತ್ನಂ ಅವರ ಜೊತೆ ಒಂದಾಗುತ್ತಿದ್ದಾರೆ. ಮೂಲಗಳ ಪ್ರಕಾರ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಆದಿತ್ಯ ಕರಿಕಾಳನ್ ಎಂಬ ಪಾತ್ರದಲ್ಲಿ ವಿಕ್ರಂ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಅಮಿತಾಭ್ ಬಚ್ಚನ್
ಇದೇ ಮೊದಲ ಬಾರಿಗೆ ಮಣಿರತ್ನಂ ಅವರ ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ನಟಿಸಲಿದ್ದಾರಂತೆ. ಸುಂದರ ಕೋಜರ್ ಎಂಬ ಪಾತ್ರದಲ್ಲಿ ಬಿಗ್ ಬಿ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಅನುಷ್ಕಾ ಶೆಟ್ಟಿ ಕುರಿತು ಬ್ರೇಕಿಂಗ್ ನ್ಯೂಸ್: ಇದು ಮದುವೆ ಸುದ್ದಿಯಲ್ಲ.!

ಜಯಂ ರವಿ
ಇದೀಗ ಕೇಳಿಬರುತ್ತಿರುವ ಸುದ್ದಿ ಪ್ರಕಾರ, ತಮಿಳು ನಟ ಜಯಂ ರವಿ ಕೂಡ ಮಣಿರತ್ನಂ ಅವರ ಮೆಗಾ ಪ್ರಾಜೆಕ್ಟ್ ನಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ಪಕ್ಕಾ ಆದ್ರೆ, ಮಣಿರತ್ನಂ ಜೊತೆ ಮೊದಲ ಸಲ ಸಿನಿಮಾ ಮಾಡ್ತಿದ್ದಾರೆ ಜಯಂ ರವಿ.

ತಮಿಳು ಸ್ಟಾರ್ ಕಾರ್ತಿ
ತಮಿಳಿನ ಖ್ಯಾತ ನಟ ಕಾರ್ತಿ ಕೂಡ ಮಣಿರತ್ನಂ ಅವರ ಚಿತ್ರಕ್ಕಾಗಿ ಎಂಟ್ರಿ ಕೊಡುತ್ತಿದ್ದಾರಂತೆ. ಈ ಮೂಲಕ ಪೊನ್ನಿಯನ್ ಸೆಲ್ವನ್ ಸಿನಿಮಾದ ತಾರಬಳಗ ಮತ್ತಷ್ಟು ರಂಗೇರುತ್ತಿದೆ.

ತೆಲುಗು ನಟ ಮೋಹನ್ ಬಾಬು
ಸದ್ಯದ ಮಾಹಿತಿ ಪ್ರಕಾರ, ತೆಲುಗು ನಟ ಮೋಹನ್ ಬಾಬು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರಂತೆ. ಬಹುವರ್ಷಗಳ ನಂತರ ತಮಿಳು ಸಿನಿಮಾ ಮಾಡ್ತಿರುವ ಮೋಹನ್ ಬಾಬುಗೆ ಇದು ಕಂಬ್ಯಾಕ್ ಚಿತ್ರ ಎನ್ನಲಾಗುತ್ತಿದೆ.

ಐಶ್ವರ್ಯ ರೈ ಎಂಟ್ರಿ
ತುಂಬಾ ವರ್ಷದ ನಂತರ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಇದೇ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ನಟಿಸುತ್ತಿದ್ದು, ಸೊಸೆ ಮತ್ತು ಮಾವ ಒಂದೇ ಸಿನಿಮಾ ಮಾಡುತ್ತಿರುವುದು ಅಪರೂಪ.

ಕೀರ್ತಿ ಸುರೇಶ್
ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡುತ್ತಿರುವ ನಟಿ ಕೀರ್ತಿ ಸುರೇಶ್ ಕೂಡ ಮಣಿರತ್ನಂ ಅವರ ಮೆಗಾಸಿನಿಮಾದಲ್ಲಿ ಇರಲಿದ್ದಾರಂತೆ. ಅಂದ್ಹಾಗೆ, ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಯುವರಾಣಿ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಅನುಷ್ಕಾ ಶೆಟ್ಟಿ
ಈ ಹಿಂದೆ ನಯನತಾರ ಕೂಡ ಈ ಸಿನಿಮಾದಲ್ಲಿ ಇರಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ನಯನತಾರ ಬದಲು ಅನುಷ್ಕಾ ಶೆಟ್ಟಿಯ ಆಗಮನವಾಗಿದೆಯಂತೆ. ಸದ್ಯಕ್ಕೆ ಈ ಪಾತ್ರಗಳು ಮತ್ತು ಈ 8 ಕಲಾವಿದರು ಈ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಂತೆ. ಮುಂದಿನ ದಿನಗಳಲ್ಲಿ ಮತ್ಯಾವ ಸ್ಟಾರ್ ಈ ಚಿತ್ರಕ್ಕಾಗಿ ಓಕೆ ಎನ್ನುತ್ತಾರೋ ಕಾದುನೋಡಬೇಕಿದೆ.