Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೂ ಎನ್‌ಟಿಆರ್ ಸಿನಿಮಾಕ್ಕೆ ಬಾಲಿವುಡ್ ಸ್ಟಾರ್ ಅನ್ನು ಎಳೆದು ತರಲಿರುವ ಪ್ರಶಾಂತ್ ನೀಲ್!
ಮಾಡಿರುವ ಮೂರೇ ಸಿನಿಮಾಕ್ಕೆ ಭಾರತದ ಟಾಪ್ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.
'ಕೆಜಿಎಫ್ 2' ಸಿನಿಮಾ ಇನ್ನೂ ಬಿಡುಗಡೆ ಆಗುವ ಮುನ್ನವೇ ಪ್ರಶಾಂತ್‌ಗೆ ಪರಭಾಷೆಗಳ ಸ್ಟಾರ್ ನಟರು, ದೊಡ್ಡ ನಿರ್ಮಾಣ ಸಂಸ್ಥೆಗಳಿಂದ ಆಫರ್‌ಗಳ ಮೇಲೆ ಆಫರ್ ಬಂದಿತ್ತು. ಅದರ ಫಲವಾಗಿಯೇ ಪ್ರಶಾಂತ್ ನೀಲ್ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
ಪ್ರಸ್ತುತ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ದೇಶನ ಮಾಡುತ್ತಿರುವ ಪ್ರಶಾಂತ್ ನೀಲ್ ಆ ಬಳಿಕ ಜೂ ಎನ್‌ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಸಿನಿಮಾ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. ಅದರ ಜೊತೆಗೆ ಈಗ ಬರುತ್ತಿರುವ ಹೊಸ ಸುದ್ದಿಯೆಂದರೆ ಈ ಸಿನಿಮಾಕ್ಕಾಗಿ ಬಾಲಿವುಡ್‌ನ ಸ್ಟಾರ್ ನಟರೊಬ್ಬರನ್ನು ಪ್ರಶಾಂತ್ ನೀಲ್ ಎಳೆದು ತರಲಿದ್ದಾರಂತೆ!
ಪ್ರಶಾಂತ್ ನೀಲ್-ಜೂ ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಹವಾ ಸೃಷ್ಟಿಯಾಗಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಈ ಹವಾ ಇನ್ನೂ ಹೆಚ್ಚಾಗಿದ್ದು, ಸಿನಿಮಾದ ಪಾತ್ರವರ್ಗದ ಬಗ್ಗೆ ಸಣ್ಣಗೆ ಚರ್ಚೆ ಆರಂಭವಾಗಿದೆ. ಈಗ ಹರಿದಾಡುತ್ತಿರುವ ಸುದ್ದಿಯೆಂದರೆ ಜೂ ಎನ್‌ಟಿಆರ್ ಸಿನಿಮಾಕ್ಕಾಗಿ ಬಾಲಿವುಡ್‌ನ ಸ್ಟಾರ್ ನಟರೊಬ್ಬರನ್ನು ಪ್ರಶಾಂತ್ ನೀಲ್ ಕೆತರಲಿದ್ದಾರಂತೆ!

ತೆಲುಗಿಗೆ ಬರಲಿದ್ದಾರಾ ಆಮಿರ್ ಖಾನ್?
ಬಾಲಿವುಡ್‌ನ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಆಮಿರ್ ಖಾನ್ ಅವರನ್ನು ಜೂ ಎನ್‌ಟಿಆರ್‌ರ ಸಿನಿಮಾಕ್ಕಾಗಿ ಪ್ರಶಾಂತ್ ನೀಲ್ ಕರೆತರಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಆಮಿರ್ ಖಾನ್ ಜೊತೆ ಮುಗಿಸಿದ್ದಾರಂತೆ ಪ್ರಶಾಂತ್ ನೀಲ್. ಆಮಿರ್ ಖಾನ್ ಸಹ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.

ಖಳನ ಪಾತ್ರದಲ್ಲಿ ಆಮಿರ್ ಖಾನ್!
ಆಮಿರ್ ಖಾನ್, ಜೂ ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಶನ್ ಸಿನಿಮಾದಲ್ಲಿ ಖಳನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹೀರೋ ಅಷ್ಟೆ ಪ್ರಧಾನವಾದ ಪಾತ್ರ ಇದಾಗಿರಲಿದ್ದು, ಇಬ್ಬರಿಗೂ ಸಮಾನ ಸ್ಕೋಪ್ ಹಾಗೂ ಸ್ಪೇಸ್ ಅನ್ನು ಪ್ರಶಾಂತ್ ನೀಲ್ ಸೃಷ್ಟಿಸಲಿದ್ದಾರಂತೆ. ಇದೇ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಹ ನಾಯಕಿಯಾಗಿ ಜೂ ಎನ್‌ಟಿಆರ್ ಜೊತೆ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ ಆದರೆ ಸುದ್ದಿ ಖಾತ್ರಿಯಾಗಿಲ್ಲ.

ಅತಿಥಿ ಪಾತ್ರದಲ್ಲಿ ನಟಿಸಲ್ಲ ಆಮಿರ್ ಖಾನ್
ಇನ್ನು ನಟ ಆಮಿರ್ ಖಾನ್, ಯಾರ ಸಿನಿಮಾದಲ್ಲಿಯೂ ಅತಿಥಿ ಪಾತ್ರದಲ್ಲಿ ನಟಿಸುವುದಿಲ್ಲ. ತಮ್ಮ ಆತ್ಮೀಯ ಗೆಳೆಯರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಅವರುಗಳು ಹಲವು ಬಾರಿ ಕೇಳಿದ್ದಾಗಿಯೂ ಅವರು ಈ ವರೆಗೆ ಅತಿಥಿ ಪಾತ್ರದಲ್ಲಿ ನಟಿಸಿಲ್ಲ. ಹಾಗಾಗಿ ಜೂ ಎನ್‌ಟಿಆರ್ ಸಿನಿಮಾದಲ್ಲಿ ಸಹ ಅವರದ್ದು ಅತಿಥಿ ಪಾತ್ರ ಆಗಿರುವುದಿಲ್ಲ ಪೂರ್ಣ ಪ್ರಮಾಣದ ಪಾತ್ರವಾಗಿರುತ್ತದೆ ಎನ್ನಲಾಗುತ್ತಿದೆ. ಇನ್ನು ಸಲ್ಮಾನ್ ಖಾನ್ ಈಗಾಗಲೇ ತೆಲುಗು ಸಿನಿಮಾ 'ಗಾಡ್ ಫಾದರ್'ನಲ್ಲಿ ನಟಿಸಿದ್ದಾರೆ. ಈಗ ಆಮಿರ್ ಖಾನ್ ಸಹ ದಕ್ಷಿಣಕ್ಕೆ ಬರುವ ಮನಸ್ಸು ಮಾಡಿದ್ದಾರೆ.

ಹಾಲಿವುಡ್ ಸಿನಿಮಾದಲ್ಲಿ ಜೂ ಎನ್‌ಟಿಆರ್
ಇನ್ನು ನಟ ಜೂ ಎನ್‌ಟಿಆರ್ ಪ್ರಸ್ತುತ ಕೊರಟಾಲ ಶಿವ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕವಷ್ಟೆ ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ನಡುವೆ ಜೂ ಎನ್‌ಟಿಆರ್‌ಗೆ ಒಂದು ಬಾಲಿವುಡ್ ಹಾಗೂ ಒಂದು ಹಾಲಿವುಡ್ ಆಫರ್ ಸಹ ಬಂದಿದೆ ಎನ್ನಲಾಗುತ್ತಿದೆ. ಜೂ ಎನ್‌ಟಿಆರ್ ನಟನೆಯ 'RRR' ಸಿನಿಮಾ ಅನ್ನು ಹಾಲಿವುಡ್ ಸಿನಿ ಕರ್ಮಿಗಳು ಹಾಗೂ ಪ್ರೇಕ್ಷಕರು ಮೆಚ್ಚಿಕೊಂಡಿರುವ ಕಾರಣ ಜೂ ಎನ್‌ಟಿಆರ್‌ಗೆ ಹಾಲಿವುಡ್‌ನಲ್ಲೂ ಬೇಡಿಕೆ ಶುರುವಾಗಿದೆ.