»   » ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿರುವ ನಟ ರಾಮ್ ಕುಮಾರ್?

ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿರುವ ನಟ ರಾಮ್ ಕುಮಾರ್?

By: ಹರಾ
Subscribe to Filmibeat Kannada

ನಟ ರಾಮ್ ಕುಮಾರ್ ಗೊತ್ತಲ್ವಾ..? 90 ರ ದಶಕದ ಕನ್ನಡ ಚಿತ್ರರಂಗದ ಚಾಕಲೇಟ್ ಬಾಯ್ ರಾಮ್ ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 'ಮುತ್ತಿನ ಹಾರ' ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡ ರಾಮ್ ಕುಮಾರ್, ನಟನಾಗಿ ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದವರು.

ಇಂತಿಪ್ಪ ರಾಮ್ ಕುಮಾರ್ ಈಗೇನು ಮಾಡುತ್ತಿದ್ದಾರೆ? ತೆರೆ ಮೇಲೆ ರಾಮ್ ಕುಮಾರ್ ಕಾಣಿಸಿಕೊಂಡು ವರ್ಷಗಳೇ ಉರುಳಿವೆ. ಎರಡು ವರ್ಷಗಳ ಹಿಂದೆ 'ಶ್ರೀ ನಾಗ ಶಕ್ತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ರಾಮ್ ಕುಮಾರ್ ಸುಳಿವು ಗಾಂಧಿನಗರದಲ್ಲಿಲ್ಲ.

Actor Ramkumar to make Sandalwood re-entry?

ಅಸಲಿಗೆ, 'ಪಾಂಡವರು' ಚಿತ್ರದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ರಾಮ್ ಕುಮಾರ್ ಸಕ್ರಿಯರಾಗಿಲ್ಲ. ಆದ್ರೀಗ ಮತ್ತೊಮ್ಮೆ ಗಾಂಧಿನಗರದಲ್ಲಿ ಸದ್ದು ಮಾಡುವ ಆಲೋಚನೆ ರಾಮ್ ಕುಮಾರ್ ಗಿದೆ.

ಮೂಲಗಳ ಪ್ರಕಾರ, ರಾಮ್ ಕುಮಾರ್ ಮತ್ತೊಮ್ಮೆ ತೆರೆಮೇಲೆ ಮಿಂಚುವ ಕನಸು ಕಾಣುತ್ತಿದ್ದಾರಂತೆ. ಒಂದೊಳ್ಳೆ ಕಥೆಗಾಗಿ ಹುಡುಕಾಟ ನಡೆಸುತ್ತಿರುವ ರಾಮ್ ಕುಮಾರ್, ಚಿತ್ರ ನಿರ್ಮಾಣಕ್ಕೂ ಕೈ ಹಾಕುವ ಆಲೋಚನೆ ಮಾಡಿದ್ದಾರಂತೆ. [ಜೋಡಿ ನಂ.1ನಲ್ಲಿ ಜತೆಯಾದ ರಾಮ್, ಅಭಿಜಿತ್]

Actor Ramkumar to make Sandalwood re-entry?

'ಸಿದ್ದಾರ್ಥ' ಆಡಿಯೋ ರಿಲೀಸ್ ಸಮಾರಂಭದಲ್ಲೂ ಕಾಣಿಸಿಕೊಂಡ ಅಣ್ಣಾವ್ರ ಅಳಿಯ ರಾಮ್ ಕುಮಾರ್, ಈಗಾಗಲೇ ಕೆಲ ಕಥೆಗಳನ್ನ ಕೇಳಿದ್ದಾರಂತೆ. ಆದ್ರೆ, ರಾಮ್ ಕುಮಾರ್ ಯಾಕೋ ಮನಸ್ಸು ಮಾಡುತ್ತಿಲ್ಲ.

ವರ್ಷಗಳ ನಂತ್ರ ರಾಮ್ ಕುಮಾರ್ ಮರಳಿ ನಟಿಸುತ್ತಾರೆ ಅಂದ್ರೆ, ಸಹಜವಾಗಿ ಕನ್ನಡ ಪ್ರೇಕ್ಷಕರಿಗಿದು ಖುಷಿಯ ವಿಚಾರ. ತಮ್ಮೆಲ್ಲಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಬೇಕು ಅಂದ್ರೆ ರಾಮ್ ಕುಮಾರ್ ಸದ್ಯದಲ್ಲೇ ಒಂದು ನಿರ್ಧಾರ ಕೈಗೊಳ್ಳಬೇಕು. ಏನಂತೀರಿ..?

English summary
According to the sources of Gandhinagar, Kannada Actor Ramkumar is planning to make a come-back into Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada