»   » ಸ್ವಂತ ಬುದ್ಧಿಯಿಂದ ವಿಜಿ ಅರ್ಜಿ ಹಾಕಿಲ್ಲ : ನಾಗರತ್ನ

ಸ್ವಂತ ಬುದ್ಧಿಯಿಂದ ವಿಜಿ ಅರ್ಜಿ ಹಾಕಿಲ್ಲ : ನಾಗರತ್ನ

Posted By:
Subscribe to Filmibeat Kannada
Actor Vijay divorce case takes new twist
ವಿಜಯ್‌ಗೆ ಬೇರೆ ಸಂಬಂಧವಿದೆ, ನನ್ನ ತಂದೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ, ನಮ್ಮ ಮನೆಯಲ್ಲಿರುವ ಎಲ್ಲರಿಗೂ ತುಂಬಾ ಕಿರುಕುಳ ನೀಡಿದ್ದಾರೆ, ನನ್ನನ್ನು ಕೂಡ ಸಾಕಷ್ಟು ಬಾರಿ ಹೊಡೆದಿದ್ದಾರೆ, ನನ್ನನ್ನು ನಾಯಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ, ಅವರು ಶುಭಾ ಪೂಂಜಾಳನ್ನು ಮದುವೆಯಾಗಿದ್ದಾರೆ ಇತ್ಯಾದಿಯಾಗಿ ಆರೋಪ ಹೊರಿಸಿದ್ದ ವಿಜಯ್ ಅವರ ಹೆಂಡತಿ ನಾಗರತ್ನ ಅವರು ಈ ಪ್ರಕರಣಕ್ಕೆ ಈಗ ಹೊಸ ತಿರುವು ನೀಡಿದ್ದಾರೆ.

ವಿಜಯ್ ನಿಜಕ್ಕೂ ಅಮಾಯಕರಾಗಿದ್ದಾರೆ. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿಯಿದೆ, ನನಗೆ ಕೂಡ ಅವರ ಮೇಲೆ ಅಷ್ಟೆಯೇ ಪ್ರೀತಿಯಿದೆ. ಅವರು ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲ ಅವರು ಮಾಡಿರುವ ಆರೋಪಗಳಲ್ಲ. ಇದನ್ನೆಲ್ಲ ಅವರು ತಮ್ಮ ಸ್ವಂತ ಬುದ್ಧಿಯಿಂದ ಮಾಡಿಲ್ಲ. ವಿಜಯ್, ಅವರ ಅಪ್ಪ ಮತ್ತು ಅಮ್ಮ ಕೂಡ ಒಳ್ಳೆಯವರು. ಈ ಎಲ್ಲ ಹಗರಣದ ಹಿಂದೆ ಅವರ ಅಕ್ಕ ಮತ್ತು ಭಾವನವರ ಕೈವಾಡವಿದೆ ಎಂದು ನಾಗರತ್ನ ಆರೋಪಿಸಿದ್ದಾರೆ.

ವಿಜಯ್ ಅವರ ಭಾವ ನಾಗರಾಜ್ ಅವರು ತಮ್ಮ ಮೊಬೈಲಿಗೆ ಕರೆ ಮಾಡಿ ತಮಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ನಾಗರತ್ನ ಅವರು ಆರೋಪಿಸಿದ್ದಾರೆ. "ನಾನೇ ನಿಮ್ಮ ಸಂಸಾರವನ್ನು ಒಡೀತೀನಿ. ಏನ್ ಮಾಡ್ಕೋತಿಯೋ ಮಾಡ್ಕೋ ಹೋಗು. ನೀನು ನಿನ್ನ ಮಕ್ಕಳು ಬೆಂಗಳೂರಿನಲ್ಲಿ ಹೇಗೆ ಬದುಕ್ತೀರೋ ನೋಡ್ತೀವಿ. ಕಾರು, ಲಾರಿ ಹತ್ತಿಸಿ ಕೊಂದು ಹಾಕ್ತೀವಿ" ಎಂದು ಗುರುವಾರ ರಾತ್ರಿ 11 ಗಂಟೆಗೆ ಫೋನ್ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ನಾಗರತ್ನ ಅವರು ಅಲವತ್ತುಕೊಂಡಿದ್ದಾರೆ.

ಇದರಿಂದ ನನಗೆ ತುಂಬಾ ಭಯವಾಗುತ್ತಿದೆ. ನನ್ನ ಮಕ್ಕಳೆಲ್ಲಿ ಅನಾಥವಾಗುತ್ತವೋ ಎಂದು ಆತಂಕವಾಗುತ್ತಿದೆ. ನಮ್ಮ ಸಂಸಾರ ಬೀದಿಗೆ ಬರಲು ಅವರೇ ಕಾರಣ. ಅವರು ಸಲ್ಲದ್ದನ್ನೆಲ್ಲ ಹೇಳಿದ್ದರಿಂದಲೇ ವಿಜಯ್ ಅವರು ವಿಚ್ಛೇದನ ಅರ್ಜಿ ಹಾಕಿದ್ದಾರೆ. ಇದನ್ನು ಅವರು ತಮ್ಮ ಸ್ವಂತ ಬುದ್ಧಿಯಿಂದ ಮಾಡಿಲ್ಲ. ಈಗ ಕೂಡ ಅವರಿಗೆ ನನ್ನ ಮೇಲೆ ಯಾವುದೇ ದ್ವೇಷವಿಲ್ಲ. ಅಕ್ಕ ಭಾವ ಸುಳ್ಳು ಹೇಳಿದರೂ ಅದನ್ನು ವಿಜಯ್ ನಂಬುತ್ತಾರೆ ಎಂದು ನಾಗರತ್ನ ಅವರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ.

ಆದರೆ, ವಿಜಯ್ ಮಾತ್ರ ಗುರುವಾರ ವಿಭಿನ್ನ ಕಥೆಯನ್ನೇ ಹೇಳಿದ್ದಾರೆ. ಪತ್ನಿಗೆ ತಂದೆ ತಾಯಿ ಸೇರಿಕೊಂಡು ತಮ್ಮ ಮನೆಯ ಯಾವ ಸದಸ್ಯನ ಮೇಲೂ ಪ್ರೀತಿಯಿಲ್ಲ. ಕಳೆದ 14 ವರ್ಷಗಳಿಂದ ಆಕೆಯನ್ನು ಸಹಿಸಿಕೊಂಡು ಬಂದಿದ್ದೇವೆ. ಆಕೆ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೇನೆ. ತಾಯಿ ಸಾಯುವ ಸ್ಥಿತಿಯಲ್ಲಿದ್ದರೂ ಆಕೆಯನ್ನು ಬೀದಿ ಭಿಕಾರಿಯಂತೆ ನೋಡಿಕೊಂಡಳು. ಆಕೆಯೊಂದಿಗೆ ಜೀವನ ಮಾಡುವುದು ಸಾಧ್ಯವೇ ಇಲ್ಲ. ಆಕೆಯ ಪಾಡಿಗೆ ಆಕೆ ಇರಲಿ, ನನ್ನ ಪಾಡಿಗೆ ತಂದೆ ತಾಯಿ ಜೊತೆಗೆ ನಾನು ಇರುತ್ತೇನೆ. ನನ್ನ ತಾಯಿ ಎಷ್ಟು ಸತ್ಯವೋ, ನಾನು ಹೇಳುತ್ತಿರುವುದೆಲ್ಲ ಕೂಡ ಅಷ್ಟೇ ಸತ್ಯ ಎಂದು ವಿಜಯ್ ಮಾಧ್ಯಮದೆದಿರು ನುಡಿದಿದ್ದರು.

ಒಟ್ಟಿನಲ್ಲಿ ಈ ಪ್ರಕರಣ ಸಾಕಷ್ಟು ಗೋಜಲು ಗೋಜಲಾಗಿದೆ. ಇದು ವಿಜಯ್ ಮತ್ತು ನಾಗರತ್ನ ಅವರ ನಡುವಿನ ದಾಂಪತ್ಯ ಕಲಹ ಅಂತ ಕಂಡುಬಂದರೂ, ಮೂರನೇ ವ್ಯಕ್ತಿಯ ಮೂಗುತೂರಿಸುವಿಕೆಯಿಂದ ಇದೆಲ್ಲ ಸಂಭವಿಸಿರಬಹುದು ಎಂಬಂತೆಯೂ ತೋರುತ್ತಿದೆ. ಆ ಮೂರನೇ ವ್ಯಕ್ತಿ ಯಾರು? ವಿಜಿ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿರುವ ನಟಿ ಶುಭಾ ಪೂಂಜಾನಾ, ವಿಜಿ ಅವರ ಭಾವನಾ? ವಿಜಯ್ ಅವರ ತಂದೆ ತಾಯಿಯಾ? ವಿಜಯ್ ಅವರ ಸುತ್ತಮುತ್ತಲಿರುವವರಾ?

English summary
Kannada actor Duniya Vijay's wife Nagarathna has given new twist to divorce case by Vijay saying he has not filed divorce petition on his own and has done at the behest of his brother-in-law Nagaraj. She has also alleged life threat from Nagaraj.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada