»   » ಪ್ರೌಢಶಾಲಾ ಶಿಕ್ಷಕಿ ಕೆಲಸಕ್ಕೆ ತಾರೆ ಐಶ್ವರ್ಯ ರೈ ಅರ್ಜಿ!

ಪ್ರೌಢಶಾಲಾ ಶಿಕ್ಷಕಿ ಕೆಲಸಕ್ಕೆ ತಾರೆ ಐಶ್ವರ್ಯ ರೈ ಅರ್ಜಿ!

Posted By:
Subscribe to Filmibeat Kannada
ಸರ್ಕಾರಿ ಕೆಲಸ ಅಂದರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಸಂಬಳದ ವಿಚಾರ ಪಕ್ಕಕ್ಕಿಟ್ಟರೂ ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಒಂಚೂರು ಯೋಚಿಸಿದಾಗ ಎಂಥಹವರ ಮನಸ್ಸು ದೇವರ ಕೆಲಸಕ್ಕೆ ಹಾತೊರೆಯುತ್ತದೆ. ಈಗಾಗಲೆ ಅಮ್ಮನಾಗಿರುವ ಬಾಲಿವುಡ್ ತಾರೆ ಐಶ್ವರ್ಯ ರೈ ಕೂಡ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರೇ? ಅದೂ ಕರ್ನಾಟಕ ಸರ್ಕಾರಿ ಕೆಲಸಕ್ಕೆ?

ಈ ಅನುಮಾನಕ್ಕೆ ಕಾರಣವಾಗಿದ್ದು ಭಾನುವಾರ (ಜು.15) ನಡೆದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ. ಕಾರವಾರ-ಕೋಡಿಬಾಗ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಹೈಸ್ಕೂಲಿನಲ್ಲಿ ಪರೀಕ್ಷೆ ನಡೆಯಿತು. ಆ‍ಶ್ಚರ್ಯಕರ ಸಂಗತಿ ಎಂದರೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇರುವುದು.

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಐಶ್ವರ್ಯ ರೈ ಬರುತ್ತಾರಾ ಎಂಬ ಕುತೂಹಲ ಪರೀಕ್ಷಾ ಮೇಲ್ವಿಚಾರಕರನ್ನೂ ಕಾಡುತ್ತಿತ್ತು. ಆದರೆ ಪರೀಕ್ಷೆಗೆ ಐಶ್ವರ್ಯ ಬಾರದೆ ಅವರನ್ನು ನಿರಾಸೆಗೊಳಿಸಿದರು. ಪರೀಕ್ಷಾರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇದದ್ದೇ ಈ ಕುತೂಹಲಕ್ಕೆ ಕಾರಣವಾಯಿತು.

ನಾರಾಯಣ ಗೊಂಡ (ನೋಂದಣಿ ಸಂಖ್ಯೆ 2199534) ಎಂಬುವವರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಫೋಟೋ ಇದ್ದ ಜಾಗದಲ್ಲಿ ತಾರೆ ಐಶ್ವರ್ಯ ರೈ ಫೋಟೋ ಇತ್ತು. ಹೆಸರು ಮಾತ್ರ ನಾರಾಯಣ ಗೊಂಡ ಎಂದೇ ಇತ್ತು.

ಈ ಅಚಾತುರ್ಯ ಹೇಗಾಯಿತು ಎಂದು ಈ ಬಗ್ಗೆ ವಿಚಾರಿಸೋಣ ಎಂದರೆ ನಾರಾಯಣ ಗೊಂಡ ಪರೀಕ್ಷೆಗೆ ಬರಲೇ ಇಲ್ಲ. ಆತ ಗೈರು ಹಾಜರಾಗಿದ್ದ. ಸರಿ ಈತ ಕೊಟ್ಟಿರುವ ವಿಳಾಸದಲ್ಲಾದರೂ ಹುಡುಕೋಣ ಎಂದರೆ ಅದೂ ತಪ್ಪಾಗಿತ್ತು. ಬಹುಶಃ ಆತ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಬಹುದು ಎಂದು ಪರೀಕ್ಷಾ ಮೇಲ್ವಿಚಾರಕರು ಅಂದಾಜಿಸಿದರು. 

ಎನ್‌ಆರ್ ಶೀಟ್‌ನಲ್ಲಿ ಆಗಿರುವ ಪ್ರಮಾದವನ್ನು ಕೇಂದ್ರದ ಮೇಲ್ವಿಚಾರಕರು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣ ಸಿದ್ದಪ್ಪ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು.

ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಎಲ್ಲಿಂದ ಬೇಕಾದರೂ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿತ್ತು. ಈ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡು ಯಾರೋ ಐಶ್ವರ್ಯ ರೈ ಫೋಟೋ ಹಾಕಿರಬಹುದು. ಅಥವಾ ಭಾವಚಿತ್ರ ಅಪ್ ಲೋಡ್ ಮಾಡುವಾಗ ಕಣ್ತಪ್ಪಿನಿಂದಲೂ ಆಗಿರುವ ಸಾಧ್ಯತೆ ಇದೆ ಎಂದು ಪರೀಕ್ಷೆಗಳ ಉಸ್ತುವಾರಿ ವಹಿಸಿರುವ ಅಧಿಕಾರಿ ಎಸ್ ಜಯಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)

English summary
Is Bollwood actress Aishwarya Rai is an aspirant for teachers post? The list of candidates arrived at the government high school Karwar and the overseeing staff were surprised to see the photograph of Bollywood star Aishwarya Rai's photograph included against no.2199534. But the name of the candidate was of a male, Narayana Gonda.
Please Wait while comments are loading...