»   » ಸುದೀಪ್-ಶಿವಣ್ಣಗೆ ಜೋಡಿಯಾಗ್ತಾರ, ಅನುಷ್ಕಾ-ನಯನತಾರಾ

ಸುದೀಪ್-ಶಿವಣ್ಣಗೆ ಜೋಡಿಯಾಗ್ತಾರ, ಅನುಷ್ಕಾ-ನಯನತಾರಾ

By: ಸೋನು ಗೌಡ
Subscribe to Filmibeat Kannada

ಹ್ಯಾಟ್ರಿಕ್ ನಿರ್ದೇಶಕ 'ಜೋಗಿ' ಪ್ರೇಮ್ ಅವರು ಸ್ಯಾಂಡಲ್ ವುಡ್ ನ ದಿಗ್ಗಜರಿಬ್ಬರನ್ನು ಸೇರಿಸಿ ಸಿನಿಮಾ ಮಾಡಲು ಹೊರಟಿರುವ ವಿಷಯ ನಿಮಗೆ ತಿಳಿದೇ ಇದೆ ಅಲ್ವಾ?. ಇದೀಗ ಆ ಹೊಸ ಪ್ರಾಜೆಕ್ಟ್ ಗೆ ಇಬ್ಬರು ಪರಬಾಷಾ ನಾಯಕಿಯರು ಎಂಟ್ರಿ ಆಗುವ ಸಾಧ್ಯತೆ ಇದೆ.

ಹೌದು ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಒಂದಾಗಿ ಕಾಣಿಸಿಕೊಳ್ಳಲಿರುವ 'ಕಲಿ' ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ಅನುಷ್ಕಾ ಶೆಟ್ಟಿ ಮತ್ತು ನಯನತಾರ ಅವರನ್ನು ಕರೆತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

Actress Anushka Shetty and Nayantara Acting in Jogi Prem's 'Kali'

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೇ ಮೊದಲ ಬಾರಿಗೆ ಭಾರಿ ಬಜೆಟ್ ನ ಸಿನಿಮಾವೊಂದು ಸೆಟ್ಟೇರುತ್ತಿದ್ದು, ಬರೋಬ್ಬರಿ 110 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ಸಿನಿಮಾ ಮೂಡಿಬರಲಿದೆ. ನಿರ್ಮಾಪಕ ಸಿ.ಆರ್ ಮನೋಹರ್ ಅವರು ಈ ಸ್ಟಾರ್ ನಟರ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಇನ್ನು ನಟಿ ಅನುಷ್ಕಾ ಅವರು ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿ ಪಡೆದರೂ ಕೂಡ ಅವರು ಹುಟ್ಟಿ ಬೆಳೆದಿದ್ದು ಕನ್ನಡ ನಾಡಿನಲ್ಲಿ ಆಗಿರುವುದರಿಂದ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿದ್ರು ಅಚ್ಚರಿ ಇಲ್ಲ.[ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

Actress Anushka Shetty and Nayantara Acting in Jogi Prem's 'Kali'

ಇನ್ನೋರ್ವ ನಟಿ ನಯನತಾರಾ ಅವರು ಉಪೇಂದ್ರ ಅವರ ಜೊತೆ 'ಸೂಪರ್' ಸಿನಿಮಾದಲ್ಲಿ ನಟಿಸಿದ್ದರಿಂದ ಈಗಾಗಲೇ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ. ಜೊತೆಗೆ ನಿರ್ದೇಶಕ ಪ್ರೇಮ್ ಅವರು ಈ ಸಿನಿಮಾವನ್ನು ಬಹು ಭಾಷೆಯಲ್ಲಿ ತಯಾರಿಸಲು ನಿರ್ಧರಿಸಿರುವುದರಿಂದ ಈ ಇಬ್ಬರೂ ನಟಿಯರು ಗಾಂಧಿನಗರಕ್ಕೆ ಬಂದರೂ ಬರಬಹುದು.[ವಾವ್.! ಶಿವಣ್ಣ-ದೀಪಣ್ಣ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಯ್ತಾ?]

ಒಟ್ನಲ್ಲಿ ಬಹಳ ಅದ್ಧೂರಿಯಾಗಿ ಸ್ಟಾರ್ ನಟರ ಚಿತ್ರದ ಟೈಟಲ್ ಲಾಂಚ್ ಮಾಡಿ ಸುದ್ದಿ ಮಾಡಿದ ನಿರ್ದೇಶಕರು ಇದೀಗ ದಕ್ಷಿಣ ಭಾರತದ ಸ್ಟಾರ್ ನಟಿಯರನ್ನು ಕರೆತಂದು ಮತ್ತೆ ಸುದ್ದಿ ಮಾಡುವ ಆತುರದಲ್ಲಿದ್ದಾರೆ.

English summary
South star actresses Anushka Shetty & Nayantara to play the lead role opposite Sandalwood Superstars Shivarajkumar & Sudeep in Jogi Prem's Kannada Movie 'Kali'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada