»   » ಎಂಬತ್ತೈದು ಲಕ್ಷಕ್ಕೆ ಉಂಡೆನಾಮ ತಿಕ್ಕಿದ ತಾರೆ ಅರೆಸ್ಟ್

ಎಂಬತ್ತೈದು ಲಕ್ಷಕ್ಕೆ ಉಂಡೆನಾಮ ತಿಕ್ಕಿದ ತಾರೆ ಅರೆಸ್ಟ್

By: ಶಂಕರ್, ಚೆನ್ನೈ
Subscribe to Filmibeat Kannada
Actress Bhuvana
ಈಕೆಯ ಜಾತಕ ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಒಂದೆರಡು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈಗ ಚೀಟಿಂಗ್ ಕೇಸಲ್ಲಿ ಬುಕ್ ಆಗಿದ್ದಾರೆ. ಈಕೆ ಬೇರಾರು ಅಲ್ಲ ತಮಿಳಿನ ಸಿನೆಮಾ ತಾರೆ ಭುವನಾ ಅಲಿಯಾಸ್ ಭುವನೇಶ್ವರಿ. ಚೆನ್ನೈ ಮೂಲದ ಗುರುನಾಧನ್ ಎಂಬ ಫಿಲಂ ಫೈನಾನ್ಸಿಯರ್ ಈಕೆಯ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಒಟ್ಟು ರು.85 ಲಕ್ಷಗಳನ್ನು ಈಕೆ ತಮಗೆ ಮೋಸ ಮಾಡಿದ್ದಾರೆ ಎಂದು ಗುರುನಾಧನ್ ಆರೋಪಿಸಿದ್ದಾರೆ. ಚಿತ್ರ ನಿರ್ಮಾಣಕ್ಕೆ ಇಳಿದಿದ್ದ ಈಕೆ ಚಿತ್ರ ನಿರ್ಮಿಸುವ ಸಲುವಾಗಿ ಸಾಲ ಮಾಡಿದ್ದರು.

ಸಾಲದ ಬಹುತೇಕ ಮೊತ್ತವನ್ನು ಈಕೆ ತನ್ನ ತಾಯಿಗೆ ಹಸ್ತಾಂತರಿಸಿದ್ದರು ಎನ್ನಲಾಗಿದೆ. ಸಾಲಕ್ಕೆ ಪ್ರತಿಯಾಗಿ ಕೊಟ್ಟಿದ್ದ ಚೆಕ್ ಬೌನ್ಸ್ ಆಗಿದೆ. ಕಡೆಗೆ ಫೈನಾನ್ಸಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭುವನೇಶ್ವರಿ ಹಾಗೂ ಆಕೆಯ ತಾಯಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಒಂದಷ್ಟು ಕಾಲ ತೆಲುಗು ಚಿತ್ರರಂಗದಲ್ಲೂ ರಾಗಿಬೀಸಿದ ಈಕೆಗೆ ಅಲ್ಲೂ ಏನೂ ಗಿಟ್ಟದೆ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದರು. ತಾರೆಯಾಗಿ ತಮಗೆ ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ತಾವು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಹೇಳಿಕೊಂಡಿದ್ದರು.

ಈಗಾಗಲೆ ಎರಡು ಟಿವಿ ಸೀರಿಯಲ್ಸ್ ಕೂಡ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈಕೆ ಒಂದು ಚಿತ್ರ ನಿರ್ಮಿಸುವ ಸಲುವಾಗಿ ಶೀರ್ಷಿಕೆಯನ್ನೂ ಕೂಡ ನೋಂದಾಯಿಸಿಕೊಂಡಿದ್ದರಂತೆ. ಅಷ್ಟರಲ್ಲಾಗಲೆ ಈ ಎಡವಟ್ಟು ಮಾಡಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈಕೆ ಅಭಿನಯದ ಒಂದೇ ಒಂದು ಚಿತ್ರ ಎಂದರೆ ಕೊಂಜಂ ಸಿರುಪ್ಪು ಕೊಂಜಂ ಕೋಬಂ. ಅದೂ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದ್ದು ಚಿತ್ರ ಅನ್ನುವುದು ಬಿಟ್ಟರೆ ಇನ್ನೇನು ವಿಶೇಷವಿಲ್ಲ.

English summary
Konjam Sirippu Konjam Kobam fame actress Bhuvana alias Bhuvaneshwari has been arrested for cheating a cinema financier about Rs 85 lakhs and lodged in Puzhal jail.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada