»   » ತಾರೆಯೊಬ್ಬಳ ದಾಂಪತ್ಯ ಜೀವನ ಮುರಿದು ಬಿತ್ತಾ?

ತಾರೆಯೊಬ್ಬಳ ದಾಂಪತ್ಯ ಜೀವನ ಮುರಿದು ಬಿತ್ತಾ?

By: ಉದಯರವಿ
Subscribe to Filmibeat Kannada

ಎಲ್ಲರಿಗೂ ಮಾದರಿಯಾಗಿ ದಾರಿದೀಪವಾಗಬೇಕಿದ್ದ ಸಿನಿಮಾ ತಾರೆಗಳು ಪದೇ ಪದೇ ವಿವಾಹ ವಿಚ್ಛೇದನದಂತಹ ಸುದ್ದಿಗಳಿಂದ ಅಭಿಮಾನಿಗಳಿಗೆ ಅಪ್ರಿಯವಾಗುತ್ತಿದ್ದಾರೆ. ಈಗ ಅಂತಹದ್ದೇ ಮತ್ತೊಂದು ಸುದ್ದಿ ಬಾಲಿವುಡ್ ವಲಯದಲ್ಲಿ ಸ್ಫೋಟಗೊಂಡಿದೆ.

ಸ್ವರ್ಗದಲ್ಲೇ ನಿಶ್ಚಯವಾಗಿದ್ದ ಜೋಡಿ ಇದು ಎಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಗಾಲ್ಫ್ ಪಟು ಜ್ಯೋತಿ ರಾಂಧ್ವಾ ಹಾಗೂ ಬಾಲಿವುಡ್ ತಾರೆ ಚಿತ್ರಾಂಗದ ಸಿಂಗ್ ಮದುವೆಯಾದಾಗ ಈ ಮಾತುಗಳು ಜನಜನಿತವಾಗಿದ್ದವು. ಹನ್ನೆರಡು ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಜೀವನ ಈಗ ಮುರಿದು ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಕಳೆದ ಕೆಲತಿಂಗಳಿಂದ ಇವರಿಬ್ಬರ ದಾಂಪತ್ಯ ಜೀವನ ಹಳಸಿದ್ದು ಇತ್ತೀಚೆಗೆ (ಮೇ.10) ಚಿತ್ರಾಂಗದ ಅವರು ಗುರಗಾಂವ್ ನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿತ್ರಾಂಗದ ಅವರ ಅರ್ಜಿ ವಿಚಾರಣೆಯನ್ನು ಕೋರ್ಟ್ ನವೆಂಬರ್ 11ಕ್ಕೆ ಮುಂದೂಡಿದೆ.

ಇವರಿಬ್ಬರ ದಾಂಪತ್ಯದ ದ್ಯೋತಕವಾಗಿ ಒಬ್ಬ ಪುತ್ರನೂ ಇದ್ದಾನೆ. ಹೆಸರು ಝೋರಾವರ್. ವಿಚ್ಛೇದನದ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ ಚಿತ್ರಾಂಗದ ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ನಾವು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಭೂ ವ್ಯಾಜ್ಯವೊಂದರ ಇತ್ಯರ್ಥಕ್ಕಾಗಿ ಹೋಗಿದ್ದೆವು ಎಂದಿದ್ದಾರೆ.

ಒಟ್ಟಿನಲ್ಲಿ ಸುಳ್ಳು ಯಾವುದು ಸತ್ಯ ಏನು ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವೆ? ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ದೇಸಿ ಬಯ್ಸ್, ಇಂಕಾರ್ ಹಾಗೂ ಐ, ಮೀ ಔರ್ ಮೇನ್ ಚಿತ್ರಗಳಲ್ಲಿ ಚಿತ್ರಾಂಗದ ಅಭಿನಯಿಸಿದ್ದಾರೆ.

English summary
Desi Boyz, Inkaar and I, Me Aur Main star Chitrangada Singh denied reports on divorce. The actress confirmed that she had gone to the Gurgaon court with her husband but claimed it was for an internal settlement of a property dispute.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada