'ಕುರುಕ್ಷೇತ್ರ'ದ ದ್ರೌಪದಿ ಪಾತ್ರಕ್ಕಾಗಿ ಈ ನಟಿಗೆ ಆಫರ್ ನೀಡಲಾಗಿದ್ಯಂತೆ!

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದ ಬಗ್ಗೆ ದಿನಕ್ಕೊಂದು ಕುತೂಹಲ ಹುಟ್ಟಿಸುವಂತಹ ಸುದ್ದಿ ಗಾಂಧಿನಗರದಲ್ಲಿ ಕೇಳಿ ಬರುತ್ತಲೇ ಇದೆ. ಈ ಬಾರಿ ಟಾಕ್ ಕೇಳಿ ಬಂದಿರುವುದು ದ್ರೌಪದಿ ಬಗ್ಗೆ.

ಇಷ್ಟು ದಿನ 'ಕುರುಕ್ಷೇತ್ರ' ಚಿತ್ರದಲ್ಲಿ ಕರ್ಣ ಯಾರು? ಭೀಮ ಯಾರು? ಕೃಷ್ಣ ಯಾರು ಎಂಬ ಸುದ್ದಿಗಳು ಚರ್ಚೆಯಾಗುತ್ತಿದ್ದವು. ಆದ್ರೆ, 'ಕುರುಕ್ಷೇತ್ರ'ದಲ್ಲಿ ದ್ರೌಪದಿ ಯಾರಾಗ್ತಾರೆ ಎಂಬುದರ ಬಗ್ಗೆ ಎಲ್ಲೂ ಸುಳಿವು ಬಿಟ್ಟುಕೊಟ್ಟಿಲ್ಲ. ಮೂಲಗಳ ಪ್ರಕಾರ ದಕ್ಷಿಣ ಚಿತ್ರರಂಗದ ಖ್ಯಾತ ನಟಿಯೊಬ್ಬರು ಈ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗಿದ್ರೆ, ಆ ನಟಿ ಯಾರು ಎಂಬುದು ಕುತೂಹಲ. ಈ ಕುತೂಹಲಕ್ಕೀಗ ಒಂದು ಸಣ್ಣ ಸುಳಿವು ಸಿಕ್ಕಿದೆ.

Actress Nayantara Approached to Play Draupadi in Kurukshetra

ಹೌದು, ಕನ್ನಡದ 'ಕುರುಕ್ಷೇತ್ರ' ಚಿತ್ರದಲ್ಲಿ ದ್ರೌಪದಿ ಪಾತ್ರವನ್ನ ನಿರ್ವಹಿಸಲು ಬಹುಭಾಷಾ ತಾರೆ ನಯನತಾರ ಅವರನ್ನ ಅಪ್ರೋಚ್ ನೀಡಲಾಗಿದೆಯಂತೆ. ಆದ್ರೆ, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಿಲ್ಲವೆನ್ನುತ್ತಿವೆ ಮೂಲಗಳು.

ಮತ್ತೊಂದೆಡೆ ದ್ರೌಪದಿ ಪಾತ್ರಕ್ಕಾಗಿ ಕನ್ನಡದ ಹುಡುಗಿಯಾಗಿರುವ ಅನುಷ್ಕಾ ಶೆಟ್ಟಿ ಅವರನ್ನ ಕರೆತರುವ ಯೋಚನೆಯೂ ಕೂಡ ನಡೆಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಪರಭಾಷಾ ನಟಿಯರ ಬದಲು ಕನ್ನಡದ ನಟಿಯೊಬ್ಬರೇ ಈ ಪಾತ್ರವನ್ನ ಮಾಡುತ್ತಾರೆ ಎಂದು ಕೂಡ ಹೇಳಲಾಗ್ತಿದೆ.

Actress Nayantara Approached to Play Draupadi in Kurukshetra

ಸದ್ಯ, ದರ್ಶನ್ 'ದುರ್ಯೋಧನ', ರವಿಚಂದ್ರನ್ 'ಶ್ರೀಕೃಷ್ಣ', ಹಿರಿಯ ನಟ ಶ್ರೀನಿವಾಸ ಮೂರ್ತಿ 'ದ್ರೋಣಾಚಾರ್ಯ' ಮತ್ತು ನಟ ಶ್ರೀನಾಥ್ 'ಧೃತರಾಷ್ಟ್ರ'ನ ಪಾತ್ರಗಳು ಮಾತ್ರ ಅಂತಿಮವಾಗಿದೆ. ಉಳಿದಂತೆ ಕಲಾವಿದರ ಆಯ್ಕೆಯಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಆದಷ್ಟೂ ಬೇಗ ಬೇರೆ ಪಾತ್ರಗಳನ್ನ ಅಂತಿಮ ಮಾಡಲಿದೆ. ಈ ಚಿತ್ರವನ್ನ ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ಮುನಿರತ್ನ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಮತ್ತಷ್ಟು ಮಾಹಿತಿಗಳು ಹೊರಬೀಳಲಿದೆ.

More from Filmibeat

English summary
According to Sources Nayantara is one among the actresses who has been approached to play the character of Draupadi. However, no final decision has been taken as yet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X