For Quick Alerts
  ALLOW NOTIFICATIONS  
  For Daily Alerts

  'ಅಂಬರೀಶ' ಚಿತ್ರದಿಂದ ನಿಶಾ ಔಟ್; ಕಾರಣ ನಿಗೂಢ

  By Rajendra
  |

  ಈ ವರ್ಷ ಕನ್ನಡಕ್ಕೆ ಅಡಿಯಿಟ್ಟ ಚೆಲುವೆ ನಿಶಾ. ಹೆಸರಿನಲ್ಲೇ ಏನೋ ಒಂದು ಪುಳಕ ಇತ್ತು. ನೋಡಲೂ ಆಕರ್ಷಕವಾಗಿದ್ದರು. ಈಕೆ ಬೇರಾರು ಅಲ್ಲ ಹಾಲಿ ಚನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್. ಅಂಬರೀಶ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದರು.

  ಹತ್ತು ದಿನಗಳ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಈಗ ಚಿತ್ರದಿಂದ ಹೊರಬಿದಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಇನ್ನೊಂದು ಮೂಲದ ಪ್ರಕಾರ, ನಿಶಾ ಜಾಗಕ್ಕೆ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದು.

  ಈಗಷ್ಟೇ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ನಿಶಾ ಅವರಿಗೆ ಅಷ್ಟಾಗಿ ಅಭಿನಯ ಬರುತ್ತಿರಲಿಲ್ಲವಂತೆ. ಅಭಿನಯದಲ್ಲಿ ಅವರು ಇನ್ನೂ ಪಕ್ವವಾಗಬೇಕಾಗಿದೆ. ಅವರಿಂದ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂಬ ಸಂಗತಿಗಳ ಕಾರಣ ನಿಶಾ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

  ಆದರೆ ನಿಶಾ ಹೇಳುವುದೇ ಬೇರೆ. ಚಿತ್ರೀಕರಣದ ವೇಳೆ ಕೊಡಗಿನಲ್ಲಿ ಗಾಯಗೊಂಡಿದ್ದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಮಹೇಶ್ ಸುಖಧರೆ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಅಂಬರೀಶ ಚಿತ್ರಕ್ಕೆ ಈ ಹಿಂದೆ ಅಮಲಾ ಪೌಲ್ ಅವರನ್ನು ಕರೆತರಲು ನಿರ್ಧರಿಸಲಾಗಿತ್ತು. ಆದರೆ ಅಮಾಲಾ ಡೇಟ್ಸ್ ಹೊಂದಾಣಿಕೆ ಆಗಿರಲಿಲ್ಲ. ಆಗ ನಿಶಾ ಯೋಗೇಶ್ವರ್ ಹೆಸರು ಕೇಳಿಬಂದಿತ್ತು. (ಏಜೆನ್ಸೀಸ್)

  English summary
  Actress Nisha Yogeshwar, daughter of actor turned politician C P Yogeshwar has stepped out of her debut film 'Ambareesha' opposite Challenging Star Darshan. The film is not yet known, the movie is being directed by Mahesh Sukhadhare.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X