»   » ದಂತದಗೊಂಬೆ ಪ್ರಣೀತಾ ಸಂಭಾವನೆ ಗಗನಕುಸುಮ

ದಂತದಗೊಂಬೆ ಪ್ರಣೀತಾ ಸಂಭಾವನೆ ಗಗನಕುಸುಮ

By: ಉದಯರವಿ
Subscribe to Filmibeat Kannada

ಚಿಗರೆ ಕಂಗಳ ಪ್ರಣೀತಾ ಈಗ ದಕ್ಷಿಣ ಭಾರತದ ಹಾಟ್ ಫೇವರಿಟ್ ತಾರೆ. ಪ್ರಣೀತಾ ಕಾಲ್ ಶೀಟ್ ಗಾಗಿ ನಿರ್ಮಾಪಕರು ಈಗ ಮುಗಿಬೀಳುತ್ತಿದ್ದಾರೆ. ಆದರೆ ಅವರ ಸಂಭಾವನೆ ಕೇಳಿ ಬಾಪ್ ರೇ ಎಂದು ಹೌಹಾರುತ್ತಿರುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಪ್ರಣೀತಾ ಅಭಿನಯಿಸಿದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವುದೇ ಅವರ ಸಂಭಾವನೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಇತ್ತೀಚೆಗಿನ ಬ್ರಹ್ಮ ಹಾಗೂ ತೆಲುಗಿನ ಅತ್ತಾರಿಂಟಿಕಿ ದಾರೇದಿ ಚಿತ್ರಗಳೇ ಇದಕ್ಕೆ ಸಾಕ್ಷಿ.

ಇನ್ನೊಂದು ಮೂಲದ ಪ್ರಕಾರ ಪ್ರಣೀತಾ ಅಭಿನಯದ ಚಿತ್ರಗಳು ನಿರ್ಮಾಪಕರ ಕೈಹಿಡಿಯುತ್ತಿವೆ. ದುಡ್ಡಾಕುವ ನಿರ್ಮಾಪಕರಿಗೆ ಸೆಂಟಿಮೆಂಟ್ ಜಾಸ್ತಿ ಇರುತ್ತದೆ. ಹಾಗಾಗಿ ಪ್ರಣೀತಾರನ್ನು ಲಕ್ಕಿ ನಟಿ ಎಂದೇ ಪರಿಭಾವಿಸುತ್ತಿದ್ದಾರೆ. ಇನ್ನೊಂದು ಕಡೆ ತಮ್ಮ ಚಿತ್ರಕ್ಕೆ ಪ್ರಣೀತಾನೇ ಬೇಕು ಎಂದು ನಾಯಕ ನಟರೂ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.

ಪ್ರಣೀತಾ ಸಂಭಾವನೆ ಈಗ ಒಂದು ಕೋಟಿ

ಈ ಎಲ್ಲಾ ಬೆಳವಣಿಗೆಗಳಲ್ಲಿ ಪ್ರಣೀತಾ ಸಂಭಾವನೆ ಮುಗಿಲು ಮುಟ್ಟಿದೆ. ಮೂಲಗಳ ಪ್ರಕಾರ ಅವರ ಸಂಭಾವನೆ ಈಗ ಒಂದು ಕೋಟಿಯಂತೆ. ಇನ್ನು ಹೀರೋಗಳೂ ಪ್ರಣೀತಾರನ್ನೇ ರೆಕಮಂಡ್ ಮಾಡುತ್ತಿರುವ ಕಾರಣ ನಿರ್ಮಾಪಕರಿಗೆ ಬೇರೆ ದಾರಿ ಕಾಣುತ್ತಿಲ್ಲ.

ಪ್ರಣೀತಾಗೆ ಶುಕ್ರದೆಸೆ ಶುರು

ತೆಲುಗಿನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆ ಅತ್ತಾರಿಂಟಿ ಕಿ ದಾರೇದಿ ಚಿತ್ರದಲ್ಲಿ ಅಭಿನಯಿಸಿದ ಬಳಿಕ ಪ್ರಣೀತಾಗೆ ಶುಕ್ರದೆಸೆ ಶುರುವಾಯಿತು. ಅಲ್ಲಿಂದ ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಇತ್ತೀಚೆಗೆ ತೆಲುಗಿನ ಜೂ.ಎನ್ಟಿಆರ್ ಚಿತ್ರಕ್ಕೂ ಪ್ರಣೀತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಜೂ.ಎನ್ಟಿಆರ್ ಜೊತೆ ರಭಸ ಚಿತ್ರಕ್ಕೆ ಸಹಿ

ಜೂ.ಎನ್ಟಿಆರ್ ಲೇಟೆಸ್ಟ್ 'ರಭಸ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪ್ರತಿಯೊಬ್ಬರೂ ಮುಂದೆ ಬಂದು ಮಾತನಾಡುತ್ತಿದ್ದಾರಂತೆ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅವರು ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲವಂತೆ.

ಬಾಲಿವುಡ್ ನಲ್ಲೂ ಪ್ರಣೀತಾಗೆ ಆಫರ್

ಪ್ರಣೀತಾ ಅವರಿಗೆ ಬಾಲಿವುಡ್ ನಲ್ಲೂ ಆಫರ್ ಬಂದಿದೆಯಂತೆ. ಅದೂ ಚಿರಂಜೀವಿ ಪುತ್ರ ರಾಜ್ ಚರಣ್ ಜೊತೆಗಿನ ಚಿತ್ರ ಎನ್ನಲಾಗಿದೆ. ಒಟ್ಟಾರೆಯಾಗಿ ಕನ್ನಡದ ಬೆಡಗಿ ಪ್ರಣೀತಾ ಈಗ ಬಲು ಎತ್ತರಕ್ಕೆ ಏರುವ ಮೂಲಕ ಸ್ಯಾಂಡಲ್ ವುಡ್ ತಲೆಯೆತ್ತಿ ನೋಡುವಂತಾಗಿದೆ.

ಕನ್ನಡ ಚಿತ್ರ ನಿರ್ಮಾಪಕರ ಪಾಲಿಗೆ ಗಗನಕುಸುಮ

ಕನ್ನಡದ ಮೀಡಿಯಂ ಬಜೆಟ್ ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಣೀತಾ ಅವರು ಇನ್ನು ಮುಂದೆ ಕನ್ನಡ ಚಿತ್ರ ನಿರ್ಮಾಪಕರ ಪಾಲಿಗೆ ಗಗನಕುಸುಮ. ಅವರ ಅಭಿನಯದ ಅಂಗಾರಕ, ವಿಜಲ್, ಮಿ.420 ಚಿತ್ರಗಳಲ್ಲಿ ಅಭಿನಯಿಸಿರುವುದು ಗೊತ್ತೇ ಇದೆ.

English summary
The latest buzz is, actress Praneetha is demanding Rs.1cr for her new projects. Currently she is starring in NTR's ‘Rabhasa’ along with Samantha. Praneetha who scored a hit with ‘Attarintiki Daaredi’ is planning to hike her remuneration as her film Brahma in sandalwood also turned out to be a hit.
Please Wait while comments are loading...