For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಕುಮಾರಸ್ವಾಮಿ ಈಗ ಇನ್ನಷ್ಟು ಹಗುರ

  By ಉದಯರವಿ
  |

  'ಸ್ವೀಟಿ ನನ್ನ ಜೋಡಿ' ಚಿತ್ರದ ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಧಿಕಾ ಕುಮಾರಸ್ವಾಮಿ ಈಗೇನು ಮಾಡುತ್ತಿದ್ದಾರೆ? ಅವರೀಗ ಮೂರನೇ ಇನ್ನಿಂಗ್ಸ್ ಅಣಿಯಾಗುತ್ತಿದ್ದಾರೆ. ಸ್ವೀಟಿ ನನ್ನ ಜೋಡಿ ಚಿತ್ರದಲ್ಲಿ ತಮ್ಮ ಗ್ಲಾಮರ್ ಮೂಲಕ ಚಿತ್ರಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿರುವ ರಾಧಿಕಾ ಈಗ ಇನ್ನೊಂದು ಚಿತ್ರಕ್ಕೆ ಸಹಿಹಾಕಿದ್ದಾರಂತೆ.

  ಆದರೆ 'ಸ್ವೀಟಿ' ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಈಗ ಮತ್ತೊಮ್ಮೆ ತಮ್ಮ ಗ್ಲಾಮರ್ ಖದರ್ ತೋರಿಸಲು ಮುಂದಾಗಿದ್ದಾರೆ. ಈ ಬಾರಿ ರಾಧಿಕಾ ಅವರು ಗುರುದೇಶಪಾಂಡೆ ಅವರ ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ ಎನ್ನುತ್ತವೆ ಮೂಲಗಳು. [ನಟಿ ರಾಧಿಕಾ ಕುಮಾರಸ್ವಾಮಿ ಹೊಸ ಅವತಾರ]

  ಚಿರಂಜೀವಿ ಸರ್ಜಾ ನಾಯಕ ನಟನಾಗಿರುವ ಚಿತ್ರದ ಹೆಸರು 'ರುದ್ರತಾಂಡವ'. ಇದು ತಮಿಳಿನ 'ಪಾಂಡಿಯ ನಾಡು' ಚಿತ್ರದ ರೀಮೇಕ್. ಈಗಾಗಲೆ 'ರಾಜಾಹುಲಿ' ರೀಮೇಕ್ ಚಿತ್ರ ಮಾಡಿ ಗುರುದೇಶಪಾಂಡೆ ಗೆಲುವಿನ ನಗೆಬೀರಿದ್ದಾರೆ. ಈಗ ಮತ್ತೊಮ್ಮೆ ರೀಮೇಕ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. [ಸ್ವೀಟಿ ಚಿತ್ರವಿಮರ್ಶೆ]

  ರಾಧಿಕಾಗೆ ಹೇಳಿ ಮಾಡಿಸಿದ ಪಾತ್ರವಿದು

  ರಾಧಿಕಾಗೆ ಹೇಳಿ ಮಾಡಿಸಿದ ಪಾತ್ರವಿದು

  ಈ ಬಗ್ಗೆ ಮಾತನಾಡಿರುವ ಗುರುದೇಶಪಾಂಡೆ ಅವರು, "ಈಗ ಮತ್ತೊಮ್ಮೆ ರೀಮೇಕ್ ಚಿತ್ರ ಮಾಡುತ್ತಿದ್ದೇನೆ. ರೀಮೇಕ್ ಚಿತ್ರಗಳನ್ನು ಮಾಡುವುದು ತಪ್ಪು ಎಂದು ನಾನು ಭಾವಿಸಿಲ್ಲ. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಈ ಪಾತ್ರ ರಾಧಿಕಾ ಅವರಿಗೆ ಹೇಳಿಮಾಡಿಸಿದಂತಿದೆ ಎಂದಿದ್ದಾರೆ.

  ಏಳೆಂಟು ಕೆ.ಜಿಯಷ್ಟು ತೂಕ ಇಳಿಸಿಕೊಂಡ ರಾಧಿಕಾ

  ಏಳೆಂಟು ಕೆ.ಜಿಯಷ್ಟು ತೂಕ ಇಳಿಸಿಕೊಂಡ ರಾಧಿಕಾ

  ಮೂಲಚಿತ್ರದಲ್ಲಿ ಲಕ್ಷ್ಮಿ ಮೆನನ್ ಅಭಿನಯಿಸಿದ್ದರು. ಹಿಂದಿಯಲ್ಲಿ ಸುಷ್ಮಿತಾ ಸೇನ್ (ಮೈ ಹೂನ್ ನಾ) ಆ ಪಾತ್ರಕ್ಕೆ ಜೀವತುಂಬಿದ್ದರು. ಈಗ ಕನ್ನಡದಲ್ಲಿ ರಾಧಿಕಾ ಅವರು ಆ ಪಾತ್ರಕ್ಕೆ ಮರುಜೀವ ನೀಡುತ್ತಿದ್ದಾರೆ. ಈ ಪಾತ್ರಕ್ಕಾಗಿ ರಾಧಿಕಾ ಅವರು ಸುಮಾರು 7 ರಿಂದ 8 ಕೆ.ಜಿಯಷ್ಟು ತೂಕವನ್ನೂ ಇಳಿಸಿಕೊಂಡಿದ್ದಾರಂತೆ.

  ಚಿತ್ರದಲ್ಲಿ ರಾಧಿಕಾ ಅವರದು ಟೀಚರ್ ಪಾತ್ರ

  ಚಿತ್ರದಲ್ಲಿ ರಾಧಿಕಾ ಅವರದು ಟೀಚರ್ ಪಾತ್ರ

  ಚಿತ್ರದಲ್ಲಿ ಅವರದು ಟೀಚರ್ ಪಾತ್ರ. ಮಾರ್ಚ್ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದೆ. ಮೊಬೈಲ್ ಸೇಲ್ಸ್ ಅಂಡ್ ಸರ್ವಿಸ್ ಸೆಂಟರ್ ನಡೆಸುತ್ತಿರುವ ಸೀದಾಸಾದ ಯುವಕನಿಗೆ ಸ್ಕೂಲ್ ಟೀಚರ್ ಜೊತೆ ಲವ್ ಆಗುತ್ತದೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ.

  ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ ಚಿತ್ರಕಾವ್ಯ

  ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿದ ಚಿತ್ರಕಾವ್ಯ

  'ಶಿವಾಜಿ' ಚಿತ್ರದ ಬಳಿಕ 4k ರೆಸಲ್ಯೂಷನ್ ನಲ್ಲಿ ಚಿತ್ರಿಸಿದ ಮತ್ತೊಂದು ತಮಿಳು ಚಿತ್ರ ಎಂಬ ಖ್ಯಾತಿಗೆ ಪಾಂಡಿಯ ನಾಡು ಚಿತ್ರ ಪಾತ್ರವಾಗಿದೆ. ನೂರು ದಿನ ಪ್ರದರ್ಶನ ಕಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಭಾರಿ ಸದ್ದು ಮಾಡಿರುವಂತಹ ಚಿತ್ರ.

  ಗ್ಲಾಮರ್ ಕಡೆಗೆ ಸಾಕಷ್ಟು ಒತ್ತು ಕೊಡುತ್ತಿರುವ ತಾರೆ

  ಗ್ಲಾಮರ್ ಕಡೆಗೆ ಸಾಕಷ್ಟು ಒತ್ತು ಕೊಡುತ್ತಿರುವ ತಾರೆ

  ಗಂಡ ಮಕ್ಕಳು ಸಂಸಾರ ಎಂದು ಕಳೆದುಹೋಗದ ರಾಧಿಕಾ ಕುಮಾರಸ್ವಾಮಿ ತಮ್ಮ ಗ್ಲಾಮರ್ ಗೂ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ ಎಂಬುದನ್ನು ಸ್ವೀಟಿ ಚಿತ್ರದಲ್ಲಿ ಗೊತ್ತಾಗುತ್ತದೆ. ಈಗ ಅವರು ಇನ್ನಷ್ಟು ಸ್ಲಿಮ್ ಆಗಲು ಹೊರಟಿರುವುದು ಉಳಿದ ತಾರೆಗಳು ಯೋಚನೆಗೆ ಬಿದ್ದಂತೆ ಮಾಡಿದೆ.

  English summary
  The latest buzz in the tinsel town rounds that, Kannada actress Radhika Kumaraswamy all set to start onemore innings on the screen. This time the actress teaming up with Chirajeevi Sarja in upcoming movie Rudratandava. Sources say that Radhika has lost almost 6 to 7 kgs for her role in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X