For Quick Alerts
  ALLOW NOTIFICATIONS  
  For Daily Alerts

  ಕವಲುದಾರಿಯಲ್ಲಿ ನಟಿ ರಂಭಾ ದಾಂಪತ್ಯ ಜೀವನ?

  By ಉದಯರವಿ
  |

  'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಯಲ್ಲಿ ಅಂಬೆಗಾಲಿಕ್ಕಿದ ನಟಿ ರಂಭಾ ಈಗ ಅಂಬೆಗಾಲಿಡುತ್ತಿರುವ ಮಗುವೊಂದರ ತಾಯಿ. ಅವರು ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಕಹಿ ಸುದ್ದಿ ಇದು.

  ನಟಿ ರಂಭಾ ಅವರ ವೈವಾಹಿಕ ಜೀವನ ಕವಲುದಾರಿಯಲ್ಲಿ ಸಾಗುತ್ತಿದೆಯೇ? ಅವರ ದಾಂಪತ್ಯ ಜೀವನ ಮುರಿದುಬಿತ್ತಾ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಮೂಲಗಳ ಪ್ರಕಾರ ತಮ್ಮ ಪತಿ ಅನಿವಾಸಿ ಭಾರತೀಯ ಇಂದಿರನ್ ಪದ್ಮನಾಭಂ ಜೊತೆಗಿನ ಸಂಬಂಧದ ಕೊಂಡಿ ಕಳಚಿಬಿದ್ದಿದೆ ಎನ್ನುತ್ತವೆ ಮೂಲಗಳು.

  ಈಗ ರಂಭಾ ಅವರು ತಮ್ಮ ಪತಿಯಿಂದ ದೂರವಾಗಿದ್ದಾರಂತೆ. ಆದರೆ ಸಂತಸದ ಸುದ್ದಿ ಎಂದರೆ ರಂಭಾ ಮತ್ತೆ ಬಣ್ಣ ಹಚ್ಚುತ್ತಿರುವುದು. ಆದರೆ ಈಗ್ಯಾರು ಕೊಡ್ತಾರೆ ಮರಸುತ್ತುವ ಪಾತ್ರ? ಈಗೇನಿದ್ದರೂ ರಂಭಾ ಅವರದು ಅತ್ತೆ, ಅಕ್ಕ, ಅಮ್ಮನ ಪಾತ್ರಗಳು. ಹೇಗೂ ರಿಯಲ್ ಲೈಫ್ ನಲ್ಲಿ ಅಮ್ಮನಾಗಿ ಪಡೆದ ಅನುಭವ ಜೊತೆಗಿದೆ.

  ತಿರುಪತಿಯಲ್ಲಿ ಅದ್ದೂರಿ ಮದುವೆ

  ತಿರುಪತಿಯಲ್ಲಿ ಅದ್ದೂರಿ ಮದುವೆ

  ಕೆನಡಾ ಮೂಲದ ಬಿಜಿನೆಸ್ ಮ್ಯಾನ್ ಇಂದಿರನ್ ಪದ್ಮನಾಭನ್ ಜೊತೆ ರಂಭಾ ಮದುವೆ ತಿರುಪತಿಯಲ್ಲಿ ಏ.8, 2010ರಲ್ಲಿ ಅದ್ದೂರಿಯಾಗಿ ನೆರವೇರಿತು.

  ಗಂಡನೊಂದಿಗೆ ಟೊರಂಟೋಗೆ ಹಾರಿದ ರಂಭಾ

  ಗಂಡನೊಂದಿಗೆ ಟೊರಂಟೋಗೆ ಹಾರಿದ ರಂಭಾ

  ಮದುವೆ ಬಳಿಕ ಗಂಡನೊಂದಿಗೆ ಟೊರಂಟೋಗೆ ಹಾರಿದರು ರಂಭಾ. ಇವರಿಬ್ಬರ ಅನುರೂಪ ದಾಂಪತ್ಯದ ಫಲವಾಗಿ ಜನವರಿ 2011ರಂದು ಮುದ್ದಾದ ಹೆಣ್ಣು ಮಗುವಿಗೆ ರಂಭಾ ಜನ್ಮ ನೀಡಿದ್ದರು.

  ಈ ಹಿಂದೊಮ್ಮೆ ಇದೇ ರೀತಿಯ ಸುದ್ದಿ ಇತ್ತು

  ಈ ಹಿಂದೊಮ್ಮೆ ಇದೇ ರೀತಿಯ ಸುದ್ದಿ ಇತ್ತು

  ಈ ಹಿಂದೆಯೇ ಒಮ್ಮೆ ರಂಭಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇತ್ತು. ಆಗೆಲ್ಲಾ ಸ್ವತಃ ರಂಭಾ ಅವರೇ ಸ್ಪಷ್ಟೀಕರಣ ನೀಡಿದ್ದರು.

  ಗಂಡ ಮಕ್ಕಳ ಜೊತೆ ಹಾಯಾಗಿದ್ದೇನೆ

  ಗಂಡ ಮಕ್ಕಳ ಜೊತೆ ಹಾಯಾಗಿದ್ದೇನೆ

  ತನ್ನ ಗಂಡ ಹಾಗೂ ಮಗಳ ಜೊತೆ ಟೊರೊಂಟೋದಲ್ಲಿ ಹಾಯಾಗಿದ್ದೇನೆ ಎಂದಿದ್ದರು.

  ನಮ್ಮ ಜೀವನದಲ್ಲಿ ಹುಳಿ ಹಿಂಡುವ ಪ್ರಯತ್ನವಿದು

  ನಮ್ಮ ಜೀವನದಲ್ಲಿ ಹುಳಿ ಹಿಂಡುವ ಪ್ರಯತ್ನವಿದು

  "ನಾನು ನನ್ನ ಗಂಡ ಹಾಗೂ ಮಗುವಿನ ಜೊತೆ ಹಾಯಾಗಿದ್ದೇನೆ. ನಮ್ಮ ಸಂಸಾರ ಹಾಲು ಜೇನಿನಷ್ಟೆ ಮಧುರವಾಗಿದೆ. ಅಂತರ್ಜಾಲದಲ್ಲಿ ನಮ್ಮಿಬ್ಬರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುವ ಪ್ರಯತ್ನವಿದು.

  ಈ ರೀತಿ ಸುದ್ದಿ ಹಬ್ಬಿಸುವವರ ವಿರುದ್ಧ ಸುಮ್ಮನಿರಲ್ಲ

  ಈ ರೀತಿ ಸುದ್ದಿ ಹಬ್ಬಿಸುವವರ ವಿರುದ್ಧ ಸುಮ್ಮನಿರಲ್ಲ

  ನನ್ನ ವೈವಾಹಿಕ ಜೀವನದ ಬಗ್ಗೆ ಇಲ್ಲದ ಸಲ್ಲದ ಗಾಳಿಸುದ್ದಿಗಳನ್ನು ಹಬ್ಬಿಸಿದರೆ ಸುಮ್ಮನಿರಲ್ಲ ಎಂದಿದ್ದಾರೆ ರಂಭಾ.

  ರಂಭಾ ಮೂಲ ಹೆಸರು ವಿಜಯಲಕ್ಷ್ಮಿ

  ರಂಭಾ ಮೂಲ ಹೆಸರು ವಿಜಯಲಕ್ಷ್ಮಿ

  ರಂಭಾ ಮೂಲ ಹೆಸರು ವಿಜಯಲಕ್ಷ್ಮಿ. ಬೆಳ್ಳಿತೆರೆಗೆ ಅಡಿಯಿಟ್ಟ ಬಳಿಕ ಹೆಸರು ರಂಭಾ ಎಂದಾಯಿತು.

  ಹಲವು ಭಾಷೆಗಳಲ್ಲಿ ನಟಿಸಿದ ತಾರೆ

  ಹಲವು ಭಾಷೆಗಳಲ್ಲಿ ನಟಿಸಿದ ತಾರೆ

  ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು.

  ರಂಭಾ ಅಭಿನಯದ ಕನ್ನಡ ಚಿತ್ರಗಳು

  ರಂಭಾ ಅಭಿನಯದ ಕನ್ನಡ ಚಿತ್ರಗಳು

  ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ.

  ಸುಖಾಸುಮ್ಮನೆ ರಂಭಾರನ್ನು ಎಳೆದರೆ?

  ಸುಖಾಸುಮ್ಮನೆ ರಂಭಾರನ್ನು ಎಳೆದರೆ?

  ಸದ್ಯಕ್ಕೆ ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಂಭಾ ಸುದ್ದಿಯಲ್ಲೇ ಇಲ್ಲದ ತಾರೆ. ಅವರನ್ನು ಸುಖಾಸುಮ್ಮನೆ ಎಳೆದು ತಂದಿಟ್ಟಿದ್ದಾರಷ್ಟೇ.

  English summary
  It is a mixed bag for all those Rambha's fans. The bad news is that her marriage with an NRI businessman has reportedly ended. Well, the good news is that the actress is all set to return to acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X