Just In
Don't Miss!
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- News
ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇಪ್ಪತ್ತೆಂಟರ ಪ್ರಾಯದ ಯುವಕನ ಕೈಹಿಡಿದರೇ ಶಕೀಲಾ?
ಒಂದು ಕಾಲದ ಸೆಕ್ಸಿ ತಾರೆ ಶಕೀಲಾ ಅವರು ಸದ್ದುಗದ್ದಲವಿಲ್ಲದಂತೆ ಮದುವೆಯಾದರೇ? ಈ ಬಗ್ಗೆ ಅಂತರ್ಜಾಲ, ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಒಂದೇ ಸಮನೆ ಸುದ್ದಿಗಳು ಹರಿದಾಡುತ್ತಿವೆ. ಯಾವುದೇ ಭಾಷೆಯ ಚೌಕಟ್ಟಿಲ್ಲದೆ ಎಲ್ಲಾ ಸಿನಿ ಪ್ರೇಮಿಗಳನ್ನು ತಮ್ಮ ಅಂಗಸೌಷ್ಠವದಿಂದ ಸಂತೃಪ್ತಗೊಳಿಸಿದ ತಾರೆ ಶಕೀಲಾ.
ಬೆಳ್ಳಿಪರದೆಯ ಸೆಕ್ಸ್ ಬಾಂಬ್ ಎಂದು ಗುರುತಿಸಿಕೊಂಡಿದ್ದ ಶಕೀಲಾ ಸದ್ಯಕ್ಕೆ ಪೋಷಕ ನಟಿಯಾಗಿ ಚಲಾವಣೆಯಲ್ಲಿದ್ದಾರೆ. ಇಷ್ಟಕ್ಕೂ ಶಕೀಲಾ ಅವರು ಮದುವೆಯಾಗಿರುವುದು ತನಗಿಂಗಲೂ ವಯಸ್ಸಿನಲ್ಲಿ ಕಿರಿಯನನ್ನು. [ಬಿಗ್ ಬಾಸ್ ನಿಂದ ಹೊರಬಿದ್ದ ಬಳಿಕ ಶಕೀಲಾ ಹೇಳಿದ್ದೇನು?]
ಶಕೀಲಾ ಕೈಹಿಡಿದಿರುವ ಹುಡುಗನ ವಯಸ್ಸು ಇನ್ನೂ 28ರ ಪ್ರಾಯ ಎಂಬುದು ವಿಶೇಷ. ಆದರೆ ಶಕೀಲಾ ವಯಸ್ಸು ಮಾತ್ರ 38ರ ಆಜುಬಾಬಿನಲ್ಲಿದೆ. ಇಬ್ಬರಿಗೂ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ಈ ಗ್ಯಾಪಲ್ಲಿ ಇದೆಲ್ಲಾ ಬೇಕಾ ಅನ್ನುವ ಮುನ್ನ ಸ್ಲೈಡ್ ಗಳ ಮೇಲೊಮ್ಮೆ ಕಣ್ಣಾಕಿ.

ಶಕೀಲಾ ನಿಜಕ್ಕೂ ಮದುವೆಯಾಗಿದ್ದಾರಾ?
ಶಕೀಲಾ ಮದುವೆಯಾಗಿರುವ ಫೋಟೋ ಮಾತ್ರ ಅಂತರ್ಜಾಲದಲ್ಲಿ ಸರಿದಾಡುತ್ತಿದೆ. ಆದರೆ ಶಕೀಲಾ ನಿಜಕ್ಕೂ ಮದುವೆಯಾಗಿದ್ದಾರಾ? ಇಲ್ಲವೇ ಎಂಬ ಬಗ್ಗೆ ಸ್ವತಃ ಅವರೇ ಮಾತನಾಡುತ್ತಾ, ತನ್ನ ಮದುವೆ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಈ ವಯಸ್ಸಲ್ಲಿ ಮದುವೆಯಾಗುವ ಅವಶ್ಯಕತೆ ಇಲ್ಲ
ಈ ಫೋಟೋದಲ್ಲಿರುವ ಯುವಕ ತಾನು ಅಭಿನಯಿಸುತ್ತಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ. ಆತನ ವಯಸ್ಸು ಇನ್ನೂ 28, ತನ್ನ ವಯಸ್ಸು 38 ವರ್ಷ. ನನಗೆ ಸಹೋದರನ ಸಮಾನ. ನನಗೆ ಈ ವಯಸ್ಸಲ್ಲಿ ಮದುವೆಯಾಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ತಾನೀಗ ಮಕ್ಕಳನ್ನು ಹೆತ್ತು ಭೂಮಿಗೆ ಭಾರ ಮಾಡಬೇಕೆ?
ಹೋಗಲಿ ಮಕ್ಕಳನ್ನು ಹೆರಲು ಮದುವೆಯಾಗಬಹುದಲ್ಲವೇ ಎಂದು ಕೆಲವರು ಕೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಕೀಲಾ, "ತಾನೀಗ ಮಕ್ಕಳನ್ನು ಹೆತ್ತು ಭೂಮಿಗೆ ಭಾರ ಮಾಡಬೇಕೆ. ಮದುವೆ, ಮಕ್ಕಳ ಬಗ್ಗೆ ಅಂತಹ ಆಸೆಗಳೇನು ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಅನಾಥ ಮಕ್ಕಳ ಮಾತೃಪ್ರೇಮ ನನಗೆ ಸಾಕಲ್ಲವೇ
ಪ್ರತಿ ತಿಂಗಳು ತಾನು ಒಂದಷ್ಟು ಅನಾಥ ಮಕ್ಕಳಿಗೆ ಸಹಾಯ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇನ್ನು ತನಗೆ ಮಕ್ಕಳೇಕೆ ಬೇಕು. ಅಷ್ಟೆಲ್ಲಾ ಅನಾಥ ಮಕ್ಕಳ ಮಾತೃಪ್ರೇಮ ನನಗೆ ಸಾಕಲ್ಲವೇ ಎನ್ನುತ್ತಾರೆ.

ಬಿಜಿನೆಸ್ ಮ್ಯಾನ್ ಪ್ರೇಮದಲ್ಲಿ ಬಿದ್ದಿದ್ದ ಶಕೀಲಾ
ಇಸವಿ 2010ರಲ್ಲಿ ಶಕೀಲಾ ಅವರು ಒಬ್ಬ ಬಿಜಿನೆಸ್ ಮ್ಯಾನ್ ಪ್ರೇಮದಲ್ಲಿ ಬಿದ್ದಿದ್ದರು. ಚೆನ್ನೈ ಮೂಲಕ ಉದ್ಯಮಿ ಹಾಗೂ ಚಿರಕಾಲದ ಪ್ರೇಮಿಯನ್ನು ವರಿಸುವುದಾಗಿ ಶಕೀಲಾ ತಿಳಿಸಿದ್ದರು.

ಒಂಟಿತನದ ಜೊತೆಗೆ ಅಭದ್ರತೆ ಕಾಡುತ್ತಿದೆ
ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ನಟಿಸಿರುವ ಚಿತ್ರಗಳ ಸಂಖ್ಯೆ 200ರ ಗಡಿದಾಟಿದೆ. ತೀರಾ ಇತ್ತೀಚೆಗಷ್ಟೆ ನಾನು ತಾಯಿಯನ್ನು ಕಳೆದುಕೊಂಡೆ. ನಮ್ಮ ತಾಯಿಯವರೇ ಕೆಲ ವರ್ಷಗಳ ತನಕ ನನಗೆ ಆಸರೆಯಾಗಿದ್ದರು. ಅವರಿಲ್ಲದ ಕಾರಣ ಒಂಟಿತನದ ಜೊತೆಗೆ ಅಭದ್ರತೆ ಕಾಡುತ್ತಿದೆ '' ಎಂದು ಶಕೀಲಾ ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ನಟಿ ಶಕೀಲಾ ಮದುವೆ ವಿಷ್ಯ ಏನಾಯ್ತು?
ಈ ಎಲ್ಲಾ ಕಾರಣಗಳಿಗಾಗಿ ತನ್ನ ಹಳೆಯ ಪ್ರಿಯತಮನನ್ನು ವರಿಸುತ್ತಿದ್ದೇನೆ. ಚೆನ್ನೈ ನಗರದಲ್ಲಿ ಅವರು ದೊಡ್ಡ ಉದ್ಯಮಿ. ನಮ್ಮಿಬ್ಬರ ನಡುವಿನ ಸಂಬಂಧ ಸದೃಢವಾಗಿದೆ. ಬರುವ ಜೂನ್ 2010ಕ್ಕೆ ಮದುವೆಯಾಗುತ್ತಿದ್ದೇವೆ. ತಮ್ಮ ಭಾವಿ ಪತಿಯ ಒಪ್ಪ್ಪಿಗೆ ಪಡೆದ ನಂತರ ಮತ್ತಷ್ಟು ವಿವರಗಳನ್ನು ಶೀಘ್ರದಲ್ಲೇ ನೀಡುತ್ತೇನೆ ಎಂದು ಹೇಳಿಕೊಂಡಿದ್ದರು ಶಕೀಲಾ.