»   » ಶುಭಾ ಪೂಂಜಾ ಮದುವೆ; ಡ್ರೀಮ್ ಬಾಯ್ ದುನಿಯಾ

ಶುಭಾ ಪೂಂಜಾ ಮದುವೆ; ಡ್ರೀಮ್ ಬಾಯ್ ದುನಿಯಾ

Posted By:
Subscribe to Filmibeat Kannada
Shubha Poonja
ನಟಿ ಶುಭಾ ಪೂಂಜಾ ಮದುವೆಯಾಗಲಿದ್ದಾರೆ. ಅವರು ತಮ್ಮ ಕನಸಿನ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಮೊನ್ನೆ, ಆಗಸ್ಟ್ 4 ರಂದು ತಮ್ಮ ಹುಟ್ಟುಹಬ್ಬವನ್ನು (ಶುಭಾ ಪೂಂಜಾ ಹುಟ್ಟಿದ ದಿನ: ಆಗಸ್ಟ್ 05) ಒಂದು ದಿನ ಮೊದಲೇ ಆಚರಿಸಿಕೊಂಡ ಶುಭಾ ಪೂಂಜಾ, ಈ ಬಗ್ಗೆ ಮಾಧ್ಯಮದ ಪ್ರತಿನಿಧಿಗಳ ಜೊತೆ ಹರಟಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ಶುಭಾ, ಇನ್ನೂ ಹೆಸರಿಡದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಹೌದು, ಶುಭಾ ಪೂಂಜಾ ಮದುವೆಯಾಗುತ್ತಿದ್ದಾರೆ. ಅವರೇ ಮದುವೆಯಾಗುತ್ತೇನೆ ಎಂದಿದ್ದಾರೆ. ಆದರೆ ಈಗಲ್ಲ, ಇನ್ನೂ ಮೂರು ವರ್ಷಗಳ ನಂತರವಂತೆ. ಆದರೆ ತಾವು ಇಷ್ಟಪಡುವ ಗುಣಗಳಿರುವ ಹುಡುಗನಿಗಾಗಿ ಈಗಲೇ ಶೋಧಕಾರ್ಯ ಪ್ರಾರಂಭಿಸಿದ್ದಾರಂತೆ. "ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ. ಚಿತ್ರರಂಗದಲ್ಲಿ ಇನ್ನೂ ಬಹಳಷ್ಟು ಎತ್ತರಕ್ಕೆ ಬೆಳೆಯಬೇಕಿದೆ. ಹೆಸರು ಸಂಪಾದಿಸಬೇಕಿದೆ.

ಆದರೆ ನನ್ನ ತಲೆಯಲ್ಲಿ ಈಗಲೇ ನಾನು ಮದುವೆಯಾಗಲಿರುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯವಿದೆ. ನನಗಿಂತ ಸ್ವಲ್ಪ ಎತ್ತರ ಇರಬೇಕು. ನಾನು ಜಾಸ್ತಿ ಓದಿಲ್ಲವಾದ್ದರಿಂದ ತುಂಬಾ ಓದಿರುವ ಹುಡುಗ ಬೇಡ. ಆದರೆ ಯಾವಾಗ್ಲು ಆಕ್ವಿವ್ ಆಗಿರೋ ಹುಡುಗನಾಗಿರಬೇಕು. ಏನಾದರೊಂದು ಮಾಡುತ್ತಿರಬೇಕು.

ನನ್ನ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವಂತಹ ಹುಡುಗ ಬೇಡವೇ ಬೇಡ. ನನ್ನಷ್ಟೇ ಕಲರ್ ಇರುವ ಹುಡುಗ ಓಕೆ, ತುಂಬಾ ಬೆಳ್ಳಗಿರೋ ಹುಡುಗ ಬೇಡ. ಇಷ್ಟನ್ನು ಹೇಳಿದ ನಂತರ ಶುಭಾ ಈ ಪಟ್ಟಿಗೆ ಇನ್ನೊಂದನ್ನು ಸೇರಿಸಿದರು. ಅದು, ಹುಡುಗ ಎಸ್ಟೇಟ್ ಓನರ್ ಆಗಿದ್ದರೆ ತುಂಬಾ ಒಳ್ಳೆಯದು. ಸದ್ಯ, ಇಷ್ಟಕ್ಕೆ ಶುಭಾ ಪೂಂಜಾರ ಕನಸಿನ ಹುಡುಗಡ ಕ್ವಾಲಿಫಿಕೇಶನ್ ಕಥೆ ಮುಗಿದಿದೆ.

ಇಷ್ಟೆಲ್ಲಾ ಕ್ವಾಲಿಟಿಗಳಿರುವ ಹುಡುಗ ಶುಭಾಗೆ ಸಿಗುತ್ತಾರಾ ಎಂದು ಯೋಚಿಸಬೇಕಿಲ್ಲ. ಶುಭಾ ಹುಡುಕಿದರೆ ಸಿಗುವುದು ಕಷ್ಟವೇನಲ್ಲ. ಅಷ್ಟಕ್ಕೂ ಇಷ್ಟಪಡುವುದು ಕನಸು ಕಾಣುವುದು ಕಷ್ಷವಲ್ಲ, ತಪ್ಪೂ ಅಲ್ಲ. ಕನಸು ನನಸಾಗುತ್ತೆ ಎಂಬ ನಿಯಮವೂ ಇಲ್ಲ. ಶುಭಾ ಕನಸಿನ ಹುಡುಗ ಸಿಗಬಹುದು ಅಥವಾ ಸಿಕ್ಕ ಹುಡುಗನಲ್ಲೇ ಅದನ್ನು ಶುಭಾ ಕಲ್ಪಿಸಿಕೊಳ್ಳಬಹುದು ಬಿಡಿ, ನಮಗ್ಯಾಕೆ? (ಒನ್ ಇಂಡಿಯಾ ಕನ್ನಡ)

English summary
Kannada Actress Shubha Poonja celebrated her birthday before one day on 04 August 2012. She told she will marry but not soon, after 3 years. But now itself she is searching for her dream boy. she listed the qualities also. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada