»   » 'ಮಂಡ್ಯ'ದ ದೇಸಿ ಚೆಲುವೆ ಸಿಂಧು ಲೋಕನಾಥ್ ಮಿಸ್ಸಿಂಗ್

'ಮಂಡ್ಯ'ದ ದೇಸಿ ಚೆಲುವೆ ಸಿಂಧು ಲೋಕನಾಥ್ ಮಿಸ್ಸಿಂಗ್

By: ಜೀವನರಸಿಕ
Subscribe to Filmibeat Kannada

'ಲವ್ ಇನ್ ಮಂಡ್ಯ' ಸಿನಿಮಾ 50 ದಿನ ಪೂರೈಸ್ತು, ತಕ್ಕಮಟ್ಟಿಗೆ ಯಶಸ್ವೀನೂ ಆಯ್ತು. ಸುಮ್ಮನೆ ಸಿನಿಮಾಗಳ ಲಿಸ್ಟನ್ನ ಪಟ್ಟಿಯಲ್ಲಿ ಇಟ್ಕೊಳ್ಳೋದಕ್ಕಿಂತ ಒಂದರ ನಂತರ ಮತ್ತೊಂದು ಸಿನಿಮಾ ಒಪ್ಪಿಕೊಳ್ಳೋದು ಲೇಸು ಅಂತ ಸಿಂಧು ಲೋಕನಾಥ್ ಡಿಸೈಡ್ ಮಾಡಿದ್ರು.

ಆದ್ರೆ ಈಗ ಸಿಂಧು ಲೋಕನಾಥ್ ಎಲ್ಲೂ ಕಾಣಿಸ್ತಿಲ್ಲ. ಯಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. 2012ರಲ್ಲಿ ಮುಹೂರ್ತ ಮಾಡಿಕೊಂಡ ಲೂಸ್ ಮಾದ ಯೋಗಿ ಜೊತೆಗಿನ 'ಪ್ರಚಂಡ' ಮಾತ್ರ ಸದ್ಯ ರಿಲೀಸ್ ಗೆ ಉಳಿದಿರೋ ಸಿಂಧು ಸಿನಿಮಾ. [ಲವ್ ಇನ್ ಮಂಡ್ಯ ಚಿತ್ರ ವಿಮರ್ಶೆ]

Actress Sindhu Lokanath, goes missing

ಆದ್ರೆ ಒಂದೂ ಸಿನಿಮಾ ಒಪ್ಪಿಕೊಳ್ಳದೆ ಸಿಂಧು ಲೋಕನಾಥ್ ಎಲ್ಲಿ ಹೋದ್ರು. ಗಾಂಧಿನಗರದಲ್ಲಿ ಏನಾದ್ರೂ ಎಡವಟ್ಟಾಯ್ತಾ? ಗೊತ್ತಿಲ್ಲ ಆದ್ರೆ ಸಿಂಧು ಸುದ್ದಿಯಿಲ್ಲ. ಯಾವ್ದಾದ್ರೂ ಸಿನಿಮಾ ಶೂಟಿಂಗ್ ಸದ್ದಿಲ್ಲದೇ ನಡೀತಿರಬಹುದು ಅಂತಿದ್ದಾರೆ ಸಿನಿಮಂದಿ.

ಕನ್ನಡದಲ್ಲಿ ಪ್ರಚಂಡ ಬಿಟ್ಟರೆ ತೆಲುಗಿನಲ್ಲಿ 'ಮಿಸ್ಟರ್ ಲವಂಗಂ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆಯಾಗಿ ಪರಿಚಯ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಸಿಂಧು ಲೋಕನಾಥ್ ತೆಲುಗು, ತಮಿಳು ಚಿತ್ರಗಳಲ್ಲೂ ಬಣ್ಣ ಹಚ್ಚಿದವರು.

'ಕೇಸ್ ನಂಬರ್ 18/9' ಚಿತ್ರ ಹಾಗೂ ಯೋಗರಾಜ್ ಭಟ್ಟರ 'ಡ್ರಾಮಾ' ಚಿತ್ರಗಳು ಸೈಮಾ (SIIMA) ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದವು. ತನ್ನ ಮುಗ್ಧ ಚೆಲುವಿನ ಮೂಲಕ ಸ್ಯಾಂಡಲ್ ವುಡ್ ಪ್ರೇಕ್ಷಕರ ಮನಗೆದ್ದ ಚೆಲುವೆ ಸಿಂಧು ದರ್ಶನ ಯಾವಾಗೋ ಎಂದು ನಿರೀಕ್ಷಿಸುತ್ತಿದ್ದಾರೆ ಅಭಿಮಾನಿಗಳು.

English summary
After 'Love in Mandya' sucess actress Sindhu Lokanath not accepted any movies. At present the actress have 'Prachanda' movie in hand. Is actress Sindhu goes missing in Sandalwood?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada