For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಜೊತೆ ಹೆಜ್ಜೆ ಹಾಕಲು ಮತ್ತೆ ಕನ್ನಡಕ್ಕೆ ಬರ್ತಿದ್ದಾರಂತೆ ಸನ್ನಿ ಲಿಯೋನ್

  |

  ಮಾಜಿ ನೀಲಿ ತಾರೆ ಮತ್ತು ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಭಿನಯಕ್ಕಿಂತ ಹೆಚ್ಚಾಗಿ ಐಟಂ ಹಾಡುಗಳ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿರುವ ಸನ್ನಿ ಲಿಯೋನ್, ಮತ್ತೆ ಕನ್ನಡ ಪ್ರೇಕ್ಷಕರ ಹಾರ್ಟ್ ಬೀಟ್ ಹೆಚ್ಚಿಸಲು ಬರ್ತಿದ್ದಾರಂತೆ.

  ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಸನ್ನಿ ಲಿಯೋನ್ ಕನ್ನಡ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಿಕೆ ಮತ್ತು ಲವ್ ಯು ಆಲಿಯಾ ಸಿನಿಮಾಗಳಲ್ಲಿ ಜಬರ್ದಸ್ತ್ ಹೆಜ್ಜೆ ಹಾಕುವ ಮೂಲಕ ಸನ್ನಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  'ಫ್ಯಾಂಟಮ್' ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಪನ್ನಾ ಯಾರು?'ಫ್ಯಾಂಟಮ್' ಲೋಕಕ್ಕೆ ಎಂಟ್ರಿ ಕೊಡುತ್ತಿರುವ ಪನ್ನಾ ಯಾರು?

  ಅಂದ್ಹಾಗೆ ಸನ್ನಿ ಈ ಬಾರಿ ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಲಿದ್ದಾರಂತೆ. ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ವಿಶೇಷ ಹಾಡಿನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಿನಿಮಾತಂಡ ಎಲ್ಲಿಯೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸನ್ನಿಲಿಯೋನ್ ಬರ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಒಂದುವೇಳೆ ಈ ಸುದ್ದಿ ನಿಜವೇ ಆದರೆ ಕನ್ನಡ ಚಿತ್ರ ಪ್ರೇಕ್ಷಕರಿಗೆ ದೊಡ್ಡ ಹಬ್ಬವಾಗಲಿದೆ. ಕಿಚ್ಚ ಮತ್ತು ಸನ್ನಿ ಲಿಯೋನ್ ಡ್ಯಾನ್ಸ್ ನೋಡಲು ಅಭಿಮಾನಿಗಳು ಈಗಾಗಲೆ ಕಾತರರಾಗಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಹಾಡುಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ. ಅಂದ್ಹಾಗೆ ಸಿನಿಮಾದಲ್ಲಿ ಸುದೀಪ್ ಗೆ ಜೋಡಿಯಾಗಿ ಮಡೊನ್ನಾ ಸೆಬಾಸ್ಟಿಯನ್ ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ಸೇರಿದ್ದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ.

  English summary
  Actress Sunny Leone will shake a leg with Sudeep in Kotiobba-3 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X