For Quick Alerts
  ALLOW NOTIFICATIONS  
  For Daily Alerts

  ನಾಲ್ಕನೇ ಮದುವೆಯಾಗಲು ಸಜ್ಜಾದ ದಕ್ಷಿಣ ಭಾರತದ ನಟಿ

  |

  ತಮಿಳು ನಟಿ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್ ಮೂರನೇ ಮದುವೆ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದರು. ಖ್ಯಾತ ತಂತ್ರಜ್ಞ ಪೀಟರ್ ಪೌಲ್ ಜೊತೆ ಲಂಡನ್‌ನಲ್ಲಿ ವಿವಾಹವಾಗಿದ್ದ ನಟಿ ನಂತರ ಈ ಮದುವೆಯನ್ನು ಮುರಿದುಕೊಂಡಿದ್ದರು.

  ಈ ಬ್ರೇಕ್ ಅಪ್ ಬಗ್ಗೆ ಇನ್ನು ಸ್ಪಷ್ಟನೆ ಸಿಗದೇ ಗೊಂದಲದಲ್ಲಿದ್ದ ಜನರಿಗೆ ವನಿತಾ ವಿಜಯ್ ಕುಮಾರ್ ಅಚ್ಚರಿ ಮೂಡಿಸಿದ್ದಾರೆ. ಹೌದು, ನಟಿ ವನಿತಾ ನಾಲ್ಕನೇ ಮದುವೆಯಾಗಲು ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

  ಮೂರನೇ ಪತಿ ಜೊತೆ ವನಿತಾ ವಿಜಯಕುಮಾರ್ ಮತ್ತೆ ಒಂದಾಗುವ ಯತ್ನ!

  ಎರಡು ಮದುವೆ ಮುರಿದುಕೊಂಡು ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದ ನಟಿ, ಈಗ ಆ ಸಂಬಂಧಕ್ಕೂ ಎಳ್ಳು ನೀರು ಬಿಟ್ಟಿದ್ದಾರೆ. ಸದ್ಯ ಪೀಟರ್ ಪೌಲ್‌ನಿಂದ ದೂರವಾಗಿರುವ ವನಿತಾ, ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

  ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ವನಿತಾ ವಿಜಯ್ ಕುಮಾರ್ ''ನಾನು ಮತ್ತೆ ಲವ್ವಲ್ಲಿ ಬಿದ್ದಿದ್ದೇನೆ, ನೀನು ಈಗ ಸಂತೋಷವಾಗಿದ್ದೀಯಾ?'' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ರಿಯಾಜ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ವನಿತಾ ಮತ್ತೆ ಮದುವೆಯಾಗಲು ಮುಂದಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  ಈ ಪೋಸ್ಟ್‌ಗೆ ಅತಿಯಾದ ಕಾಮೆಂಟ್‌ಗಳು ಬಂದ ಕಾರಣ ಕಾಮೆಂಟ್‌ ಬಾಕ್ಸ್‌ ಬ್ಲಾಕ್ ಮಾಡಿದ್ದಾರೆ. ಈ ಪೋಸ್ಟ್‌ನಿಂದ ವನಿತಾ ವೈಯಕ್ತಿಕ ಜೀವನ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ. ವನಿತಾ ನಿಜಕ್ಕೂ ಪ್ರೀತಿಯಲ್ಲಿ ಬಿದ್ದರಾ? ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ನಟಿಯೇ ಉತ್ತರಿಸಬೇಕಾಗಿದೆ.

  English summary
  Actress Vanitha Vijayakumar getting ready to marry again. it may be fourth wedding?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X