For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ತಂಡಕ್ಕೆ ದುಬಾರಿ ಉಡುಗೊರೆ ಕೊಟ್ಟ ಅಲ್ಲು ಅರ್ಜುನ್: ಕಾರಣ?

  |

  ಸ್ಟಾರ್ ನಟರು ಬಹಳ ದುಬಾರಿ ಆಗಿಬಿಟ್ಟಿದ್ದಾರೆ. ಸಿನಿಮಾ ಬಜೆಟ್ ಹೆಚ್ಚಲು ಸ್ಟಾರ್ ನಟರೇ ಕಾರಣ ಎಂಬುದು ನಿರ್ಮಾಪಕರ ಸಾಮಾನ್ಯ ಅಳಲು.

  ಆರೋಪಕ್ಕೆ ತಕ್ಕಂತೆಯೇ ಸ್ಟಾರ್ ನಟರೂ ಸಹ ಇದ್ದಾರೆ. ನಟಿಸುತ್ತಾರೆ, ದೊಡ್ಡ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಹಿಟ್ ಆಯಿತೆಂದರೆ ಆಡಿಯೋ ಹಕ್ಕು, ಡಬ್ಬಿಂಗ್ ಹಕ್ಕು, ಓವರ್‌ ಸೀಸ್ ಬಿಡುಗಡೆ ಹಕ್ಕಿಗಾಗಿ ನಿರ್ಮಾಪಕರಲ್ಲಿ ಬೇಡಿಕೆ ಇಟ್ಟು ಅದರಿಂದಲೂ ಹಣ ಸಂಪಾದನೆ ಮಾಡುತ್ತಾರೆ.

  ಇಂಥಹಾ ಸ್ಟಾರ್ ನಟರ ನಡುವೆ ಅಲ್ಲು ಅರ್ಜುನ್ ಭಿನ್ನವಾಗಿ ನಿಂತಿದ್ದಾರೆ. ತಾವು ನಟಿಸಿದ ಸಿನಿಮಾದ ಇಡೀ ಚಿತ್ರತಂಡಕ್ಕೆ ಭಾರಿ ದುಬಾರಿ ಉಡುಗೊರೆಯನ್ನು ಅಲ್ಲು ಅರ್ಜುನ್ ಕೊಟ್ಟಿದ್ದಾರೆ. ತಮ್ಮದೇ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣವಾದ ಸಿನಿಮಾವಾದರೆ ಹೀಗೆ ಉಡುಗೊರೆ ಕೊಡುವುದು ಸಾಮಾನ್ಯ ಎನ್ನಬಹುದಿತ್ತು, ಆದರೆ ಬೇರೆಯವರು ನಿರ್ಮಿಸಿರುವ ಸಿನಿಮಾದಲ್ಲಿಯೂ ಈ ಔದಾರ್ಯ ಮೆರೆದಿದ್ದಾರೆ ಅಲ್ಲು ಅರ್ಜುನ್.

  ಡಿಸೆಂಬರ್ 17 ರಂದು ತೆರೆಗೆ

  ಡಿಸೆಂಬರ್ 17 ರಂದು ತೆರೆಗೆ

  ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಡಿಸೆಂಬರ್ 17 ರಂದು ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ ಮೇಲೆ ಅಲ್ಲು ಅರ್ಜುನ್ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಈ ನಿರೀಕ್ಷೆ ಇಡಲು ಕಾರಣ ಸಿನಿಮಾ ಮೂಡಿ ಬಂದಿರುವ ರೀತಿ. ಸಿನಿಮಾ ಒಟ್ಟಾರೆಯಾಗಿ ಮೂಡಿ ಬಂದಿರುವ ರೀತಿ ಅಲ್ಲು ಅರ್ಜುನ್‌ಗೆ ಬಹಳ ಇಷ್ಟವಾಗಿದೆಯಂತೆ ಹಾಗಾಗಿಯೇ ಇದಕ್ಕಾಗಿ ಶ್ರಮಿಸಿದ ಚಿತ್ರತಂಡಕ್ಕೆ ಅಲ್ಲು ಅರ್ಜುನ್ ಉಡುಗೊರೆ ನೀಡಿದ್ದಾರೆ.

  ಉಡುಗೊರೆ ನೀಡಿದ ಅಲ್ಲು ಅರ್ಜುನ್

  ಉಡುಗೊರೆ ನೀಡಿದ ಅಲ್ಲು ಅರ್ಜುನ್

  'ಪುಷ್ಪ' ಚಿತ್ರತಂಡಕ್ಕೆ 40 ಚಿನ್ನದ ಕಾಯಿನ್‌ಗಳು ಜೊತೆಗೆ 10 ಲಕ್ಷ ಹಣವನ್ನು ಉಡುಗೊರೆ ರೂಪದಲ್ಲಿ ಅಲ್ಲು ಅರ್ಜುನ್ ನೀಡಿದ್ದಾರೆ. ಈ ಉಡುಗೊರೆಗಳು ಮುಖ್ಯ ತಂತ್ರಜ್ಞರು, ನಟರಿಗಲ್ಲ ಬದಲಿಗೆ ಸಹಾಯಕ ಸಿಬ್ಬಂದಿ, ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆಂದು ಅಲ್ಲು ಅರ್ಜುನ್ ನೀಡಿದ್ದಾರಂತೆ. ಅಲ್ಲು ಅರ್ಜುನ್‌ ನೀಡಿದ ಉಡುಗೊರೆಯಿಂದ ಚಿತ್ರತಂಡ ಬಹಳ ಖುಷಿಯಾಗಿದೆ. ಅಲ್ಲು ಅರ್ಜುನ್ ಉಡುಗೊರೆ ನೀಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನನ್ನು ಬಹುವಾಗಿ ಹೊಗಳುತ್ತಿದ್ದಾರೆ.

  ಕಠಿಣ ಪರಿಸ್ಥಿತಿಗಳಲ್ಲಿ ಚಿತ್ರೀಕರಣ

  ಕಠಿಣ ಪರಿಸ್ಥಿತಿಗಳಲ್ಲಿ ಚಿತ್ರೀಕರಣ

  'ಪುಷ್ಪ' ಸಿನಿಮಾದ ಚಿತ್ರೀಕರಣ ಬಹಳ ಕಠಿಣ ಪರಿಸ್ಥಿತಿಗಳಲ್ಲಿ ಮಾಡಲಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಅರಣ್ಯ, ಕುಗ್ರಾಮಗಳಲ್ಲಿಯೇ ಆಗಿದೆ. ಅರಣ್ಯದಲ್ಲಿ ಚಿತ್ರೀಕರಣ ಮಾಡುವಾಗ ನಿರ್ದೇಶಕ ಸುಕುಮಾರ್‌ಗೆ ಸೇರಿದಂತೆ ಚಿತ್ರತಂಡದ ಹಲವರಿಗೆ ಡೆಂಗ್ಯೂ ಆಗಿತ್ತು. ಅದು ಮಾತ್ರವೇ ಅಲ್ಲದೆ, ಪ್ರಾರಂಭ ಮಾಡಿದಾಗ ಒಂದು ಸಿನಿಮಾ ಎಂದಾಗಿತ್ತು, ಆದರೆ ಚಿತ್ರೀಕರಣದ ಸಮಯದಲ್ಲಿ ಎರಡನೇ ಭಾಗ ನಿರ್ಮಿಸುವ ಯೋಜನೆ ರೂಪಿಸಿದ ಕಾರಣ ಕೆಲಸ ಇನ್ನಷ್ಟು ಹೆಚ್ಚಾಗಿತ್ತು. ಎಲ್ಲ ಕಷ್ಟದ ನಡುವೆ ಚಿತ್ರತಂಡ ಕೆಲಸ ಮಾಡಿ ಒಳ್ಳೆಯ ಫಲಿತಾಂಶವನ್ನು ನೀಡಿದೆ ಹಾಗಾಗಿ ಅಲ್ಲು ಅರ್ಜುನ್ ಖುಷಿಯಾಗಿ ಉಡುಗೊರೆ ನೀಡಿದ್ದಾರೆ.

  ರಕ್ತ ಚಂದನ ಕಳ್ಳ ಸಾಗಣೆ ಕುರಿತ ಕತೆ

  ರಕ್ತ ಚಂದನ ಕಳ್ಳ ಸಾಗಣೆ ಕುರಿತ ಕತೆ

  'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆ ಬಗ್ಗೆ ನಿರ್ಮಿಸಲಾಗಿರುವ ಸಿನಿಮಾ ಆಗಿದ್ದು, ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರತಿಭಾವಂತ ನಟರ ದಂಡೇ ಇದೆ. ಕನ್ನಡದ ಡಾಲಿ ಧನಂಜಯ್ ಜಾಲಿ ರೆಡ್ಡಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯನಟ ಸುನಿಲ್, ಕಳ್ಳ ಸಾಗಣೆದಾರರ ಬಾಸ್ ಪಾತ್ರದಲ್ಲಿ ನಟಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾದ ಐದು ಹಾಡುಗಳು ಯೂಟ್ಯೂಬ್‌ನಲ್ಲಿ ಬಿಡಗುಡೆ ಆಗಿದ್ದು ಎಲ್ಲ ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಟಿ ಸಮಂತಾ ಐಟಂ ಹಾಡಿಗೆ ನರ್ತಿಸಿದ್ದಾರೆ. ಸಿನಿಮಾವು ಇದೇ ಡಿಸೆಂಬರ್ 17 ಕ್ಕೆ ಬಿಡುಗಡೆ ಆಗಲಿದೆ.

  English summary
  Allu Arjun gave costly gift to Pushpa Telugu movie team. He gave 40 gold coins and 10 lakh rs money.
  Saturday, December 11, 2021, 17:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X