»   »  ವಿಮಾನದಲ್ಲಿ ಅಮಿತಾಬ್ ಜೊತೆಯಲ್ಲಿ ರೇಖಾ

ವಿಮಾನದಲ್ಲಿ ಅಮಿತಾಬ್ ಜೊತೆಯಲ್ಲಿ ರೇಖಾ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಈ ರೀತಿ ಐಡಿಯಾಗಳು ಯಾರೂ ಕೊಡುತ್ತಾರೋ ಅಥವಾ ಬಿಗ್ ಬಿ ಟಾರ್ಗೆಟ್ ಮಾಡಿಕೊಂಡು ಪುಕ್ಕಟೆ ಜನಪ್ರಿಯತೆ ಗಳಿಸುತ್ತಾರೋ ಗೊತ್ತಿಲ್ಲ. ಅಮಿತಾಬ್ ಮತ್ತೆ ಸುದ್ದಿಯಲ್ಲಿದ್ದಾರೆ. ಮೋದಿ ಅವರ ಪರ ಬಿಗ್ ಬಿ ಬ್ಯಾಟಿಂಗ್ ಮಾಡಿದ್ದಾರೆ ಎಂಬ ವಿಡಿಯೋ ವಿವಾದದ ನಂತರ ಮತ್ತೊಮ್ಮೆ ಬಿಗ್ ಬಿ ಅವರು ಗಾಸಿಪ್ ಪುಟಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ, ಈ ಬಾರಿ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಚಿತ್ರ ಎಲ್ಲರ ಹುಬ್ಬೇರಿಸಿದೆ. ಹೀಗೂ ಉಂಟೆ! ಇಲ್ಲ ಬಿಡಿ ಯಾರೋ ಬೇಕಾಂತಲೇ ಈ ರೀತಿ ಮಾಡಿದ್ದಾರೆ ಎಂಬ ಹೇಳಿಕೆಗಳು, ಪ್ರತಿಕ್ರಿಯೆಗಳು ಬರುತ್ತಿವೆ.

ಹೌದು ಚಿತ್ರ ನೋಡಿದರೆ ನಿಮಗೂ ಹಾಗೆ ಅನ್ನಿಸುತ್ತದೆ. ಅಮಿತಾಬ್ ಬಚ್ಚನ್ ಜತೆ ಕೃಷ್ಣ ಸುಂದರಿ ರೇಖಾ ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂಬಂತೆ ಚಿತ್ರದಲ್ಲಿ ತೋರುತ್ತದೆ. ಗಾಸಿಪ್ ಪುಟಗಳಲ್ಲಿ ಅಗ್ರಸ್ಥಾನ ಪಡೆದಿರುವ ಈ ಚಿತ್ರ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ.

Picture: Amitabh Bachchan, Rekha Spotted Together In A Flight

ಅಮಿತಾಬ್ ಬಚ್ಚನ್ ಹಾಗೂ ರೇಖಾ ಅವರು ಒಟ್ಟಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಮಿತಾಬ್ ಅವರು ಮುಂಬದಿ ಸೀಟಿನಲ್ಲಿ ಕುಳಿತ್ತಿದ್ದರೆ ಹಿಂಬದಿ ಸೀಟಿನಲ್ಲಿ ರೇಖಾ ಸುಖ ನಿದ್ರೆಯಲ್ಲಿದ್ದಾರೆ. ಅಮಿತಾಬ್ ಪಕ್ಕದಲ್ಲಿ ವಿಮಾನದ ಪೈಲಟ್ ಕುಳಿತು ಪೋಸ್ ಕೊಟ್ಟಿದ್ದಾರೆ.

ಮೊದಲ ನೋಟಕ್ಕೆ ಎಲ್ಲರೂ ಬೆಸ್ತು ಬೀಳುವಂತಿರುವ ಈ ಚಿತ್ರ ಎರಡನೇ ನೋಟಕ್ಕೆ ತನ್ನ ಹುಳುಕನ್ನು ಹೊರಹಾಕುತ್ತದೆ. ಪೈಲಟ್ ಹಾಗೂ ಅಮಿತಾಬ್ ಜತೆಗಿನ ಚಿತ್ರ ನೈಜವಾಗಿದ್ದರೂ ಹಿಂಬದಿ ಸೀಟಿನಲ್ಲಿ ರೇಖಾ ಇರುವುದು ಬೇರೆ ಚಿತ್ರ ಎನಿಸುತ್ತದೆ.

80ರ ದಶಕದ ಅಮರ ಪ್ರೇಮ ಕಥೆಗೆ ಜೀವ ನೀಡಲು ಕೆಲವರು ಮತ್ತೊಮ್ಮೆ ಯತ್ನಿಸುತ್ತಿರುವಂತೆ ಕಾಣುತ್ತದೆ. ಅಮಿತಾಬ್ ಹಾಗೂ ರೇಖಾ ನಡುವಿನ ಆನ್ ಸ್ಕ್ರೀನ್-ಆಫ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ವಿವರಿಸಬೇಕಾಗಿಲ್ಲ. ಇಬ್ಬರು ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿರಲಿ, ಸಭೆ, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅಕಸ್ಮಾತ್ ಕಾಣಿಸಿಕೊಂಡಿದ್ದರೂ ಒಟ್ಟಿಗೆ ಎಂದಿಗೂ ಆತ್ಮೀಯವಾಗಿ ಕುಳಿತಿಲ್ಲ. ಅಷ್ಟರಮಟ್ಟಿಗೆ ಇಬ್ಬರ ನಡುವೆ ಕದಂಕ ಇರುವಾಗ ಅಡಿಗಳ ಲೆಕ್ಕದಲ್ಲಿ ಹಿಂದೆ ಮುಂದೆ ಕುಳಿತು ಪ್ರಯಾಣಿಸಿದ್ದರೆ ಎಂದರೆ ಎಲ್ಲಾ ಟಿವಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬಿಡುತ್ತಿತ್ತು.

ಹೋಗಲಿ ಇಬ್ಬರು ಮತ್ತೆ ಒಂದಾಗಿ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂಬ ಆಸೆಯೂ ಅಭಿಮಾನಿಗಳಲ್ಲಿ ಇಂಗಿ ಹೋಗಿದೆ. ದೋ ಅಂಜಾನೆ ಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಇಬ್ಬರು ಈಗ ಅನಾಮಿಕರಾಗೆ ಉಳಿದಿದ್ದಾರೆ.

ಖೂನ್ ಪಸೀನಾ, ಸುಹಾಗ್, ಮುಖಾದ್ದರ್ ಕಾ ಸಿಕಂದರ್, ಮಿ. ನಟವರಲಾಲ್ ಜತೆಗೆ ಯಶ್ ಚೋಪ್ರಾ ಅವರ 94ರ ಹಿಟ್ ಚಿತ್ರ ಸಿಲ್ ಸಿಲಾದಲ್ಲಿ ಜಯಬಾಧುರಿ, ಅಮಿತಾಬ್ ಹಾಗೂ ರೇಖಾ ಅಭಿನಯಿಸಿದ್ದು ರೀಲೋ ರಿಯಲ್ ಸ್ಟೋರಿಯೋ ಎಂಬಂತೆ ಭಾಸವಾಗಿತ್ತು.

ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ರೇಖಾ ಅವರ ಜತೆ ನಟಿಸಲು ನಾನೇನೋ ರೆಡಿ ಎಂದು ಅಮಿತಾಬ್ ಬಚ್ಚನ್ ಬಹಿರಂಗವಾಗಿ ತಮ್ಮ ಮನದಾಳದ ಮಾತು ಹೇಳಿದ್ದಾರೆ. ಆದರೆ, ರೇಖಾ ಮಾತ್ರ ತಮ್ಮ ಇಂಗಿತ ವ್ಯಕ್ತಪಡಿಸಿಲ್ಲ. ಇಬ್ಬರೂ ಒಟ್ಟಿಗೆ ನಟಿಸುವ ಕಾಲ ಬರುವ ತನಕ ಈ ರೀತಿ ಕೂಡಿಸಿದ ಚಿತ್ರಗಳನ್ನು ನೋಡಿ ನಕ್ಕುಬಿಡಿ.

English summary
Amitabh Bachchan and Rekha were recently spotted in a flight together and the picture is doing the rounds in the internet. While Amitabh Bachchan was sitting in the front, Rekha was spotted sitting and relaxing right behind. The two haven't been spotted together for a long time.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada