For Quick Alerts
  ALLOW NOTIFICATIONS  
  For Daily Alerts

  ಭರ್ಜರಿ ಬೆಲೆಗೆ ಅನುಷ್ಕಾ ಚಿತ್ರ ಸೇಲ್: ಒಟಿಟಿಯಲ್ಲಿ ಸಿನಿಮಾ ರಿಲೀಸ್

  |

  ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಅನುಷ್ಕಾ ಶೆಟ್ಟಿ ಮತ್ತು ಆರ್ ಮಾಧವನ್ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ನಿಶ್ಯಬ್ದಂ ಚಿತ್ರ ಅಧಿಕೃತವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡು ಬಂದಿದ್ದರು.

  ಆಮೇಲೆ ಲಾಕ್‌ಡೌನ್ ಆಯ್ತು. ಈಗ ಚಿತ್ರಮಂದಿರಗಳೇ ತೆರೆದಿಲ್ಲ. ಈ ಎಲ್ಲ ಬೆಳವಣಿಗೆಗಳ ನಡುವೆ ನಿಶ್ಯಬ್ದಂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಚಿತ್ರದ ನಿರ್ದೇಶಕ ಹೇಮಂತ್ ಮಧುಕರ್ ಸ್ಪಷ್ಟನೆ ನೀಡಿದ್ದು, ಆನ್‌ಲೈನ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಆದ್ರೆ, ಸದ್ಯಕ್ಕೆ ದಿನಾಂಕವನ್ನು ಅಧಿಕೃತವಾಗಿ ಹೇಳಿಲ್ಲ. ಮುಂದೆ ಓದಿ...

  ಒಟಿಟಿ ಉತ್ತಮ ಆಯ್ಕೆ

  ಒಟಿಟಿ ಉತ್ತಮ ಆಯ್ಕೆ

  ಚಿತ್ರಮಂದಿರಗಳು ಯಾವಾಗ ತೆರೆಯಲಿದೆ ಎಂಬುದರ ಬಗ್ಗೆ ಸ್ಪಷ್ಟನೆ ಇಲ್ಲ. ಹಾಗಾಗಿ, ನಮ್ಮ ಚಿತ್ರವನ್ನು ಆನ್‌ಲೈನ್‌ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಹಾಗಾಗಿ, ಒಟಿಟಿ ಬಿಡುಗಡೆ ಒಳ್ಳೆಯ ಆಯ್ಕೆ ಹಾಗು ಪ್ರೇಕ್ಷಕರು ಸಹ ಹೊಂದಿಕೊಂಡಿದ್ದಾರೆ ಎನಿಸುತ್ತಿದೆ ಎಂದು ಹೇಮಂತ್ ಮಧುಕರ್ ಅಭಿಪ್ರಾಯ ಪಟ್ಟಿದ್ದಾರೆ.

  ಮಾತು ಬಾರದ ಮೂಕಿಯಾದ 'ಸ್ವೀಟಿ' ಅನುಷ್ಕಾ ಶೆಟ್ಟಿ

  ಗಾಂಧಿ ಜಯಂತಿಗೆ ರಿಲೀಸ್!

  ಗಾಂಧಿ ಜಯಂತಿಗೆ ರಿಲೀಸ್!

  ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್ 2 ರಂದು 'ನಿಶ್ಯಬ್ದಂ' ಸಿನಿಮಾ ಐದಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಕಾಣಲಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

  20 ಕೋಟಿಗೆ ಅಮೇಜಾನ್ ಪ್ರೈಂ ಖರೀದಿ

  20 ಕೋಟಿಗೆ ಅಮೇಜಾನ್ ಪ್ರೈಂ ಖರೀದಿ

  ನಿಶ್ಯಬ್ದಂ ಚಿತ್ರದ ಡಿಜಿಟಲ್ ಮಾರಾಟದ ಬಗ್ಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಸುಮಾರು 20 ಕೋಟಿ ಬೆಲೆಗೆ ಅಮೇಜಾನ್ ಪ್ರೈಂ ವಿಡಿಯೋ ಈ ಚಿತ್ರವನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

  ಕನ್ನಡತಿಯಾಗಿ ತೆರೆ ಮೇಲೆ ಮಿಂಚಲಿದ್ದಾರೆ ನಟಿ ಅನುಷ್ಕಾ ಶೆಟ್ಟಿ

  ಮಾತು ಬಾರದ ಪಾತ್ರದಲ್ಲಿ ಅನುಷ್ಕಾ

  ಮಾತು ಬಾರದ ಪಾತ್ರದಲ್ಲಿ ಅನುಷ್ಕಾ

  ಇದಕ್ಕೂ ಮುಂಚೆ ಏಪ್ರಿಲ್ 2 ರಂದು ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿತ್ತು. ಆದರೆ, ಲಾಕ್‌ಡೌನ್ ಕಾರಣದಿಂದ ಆಗಿರಲಿಲ್ಲ. ಇನ್ನು ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮಾತು ಬಾರದ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಶಾಲಿನಿ ಪಾಂಡೆ, ಸುಬ್ಬರಾಜು, ಅಂಜಲಿ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Anushka shetty and R madhavan starrer Nishabdham movie set to release on october 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X