»   » ರಾಜಕೀಯಕ್ಕೆ ಧುಮುಕಿದ ಹುಚ್ಚ ವೆಂಕಟ್: ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ!

ರಾಜಕೀಯಕ್ಕೆ ಧುಮುಕಿದ ಹುಚ್ಚ ವೆಂಕಟ್: ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ!

Posted By:
Subscribe to Filmibeat Kannada

ಕಳೆದ ವಾರವಷ್ಟೇ 'ಬ್ಯಾನ್ ಸ್ಟಾರ್' ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದರು. ಬೆಂಗಳೂರಿನ ರಾಜರಾಜೇಶ್ವರಿನಗರದ ಶಾಸಕ, ನಿರ್ಮಾಪಕ ಮುನಿರತ್ನ ವಿರುದ್ಧ 'ಫೈರಿಂಗ್ ಸ್ಟಾರ್' ಬೆಂಕಿಯುಂಡೆಗಳನ್ನುಗುಳಿದ್ದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮತದಾರರನ್ನು ಸೆಳೆಯಲು ಕುಕ್ಕರ್, ಸ್ಟೌವ್, ನೀರಿನ ಕ್ಯಾನ್ ಹಂಚಿದ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಗರಂ ಆಗಿದ್ದರು. ''ಇದು ನಾಚಿಕೆಗೇಡಿನ ಸಂಗತಿ. ಇಂತಹ ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು'' ಎಂದು ಹುಚ್ಚ ವೆಂಕಟ್ ಪತ್ರಿಕಾಗೋಷ್ಟಿ ಕೂಡ ನಡೆಸಿದ್ದರು.

ಸುದ್ದಿ ವಾಹಿನಿಯಲ್ಲಿ ಹುಚ್ಚ ವೆಂಕಟ್ ಹಾಗೂ ಮುನಿರತ್ನ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಇಷ್ಟೆಲ್ಲ ಆದ್ಮೇಲೆ, 'ರೌದ್ರಾವತಾರಿ' ಹುಚ್ಚ ವೆಂಕಟ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಬಡವರ ಕಣ್ಣೀರು ಒರೆಸಲು ತಕ್ಷಣವೇ ರಾಜಕೀಯಕ್ಕೆ ಧುಮುಕಲು ಹುಚ್ಚ ವೆಂಕಟ್ ತೀರ್ಮಾನ ಮಾಡಿದ್ದಾರೆ. ಮುಂದೆ ಓದಿರಿ...

ರಾಜಕೀಯಕ್ಕೆ ಧುಮುಕಿದ ಹುಚ್ಚ ವೆಂಕಟ್

ಹದಗೆಟ್ಟಿರುವ ರಾಜಕೀಯ ಸ್ಥಿತಿಯನ್ನು ಹತೋಟಿಗೆ ತರಲು, ಪಾಲಿಟಿಕ್ಸ್ ಗೆ ಎಂಟ್ರಿಕೊಡುತ್ತಿದ್ದಾರೆ ಹುಚ್ಚ ವೆಂಕಟ್. ಕುಕ್ಕರ್, ನೀರಿನ ಕ್ಯಾನ್ ಹಂಚಿ ಮತದಾರರನ್ನು ಸೆಳೆಯುತ್ತಿರುವ ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ತೊಡೆ ತಟ್ಟಿ ನಿಲ್ಲಲು ಹುಚ್ಚ ವೆಂಕಟ್ ನಿರ್ಧರಿಸಿದ್ದಾರೆ.

ಶಾಸಕ ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್

ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸ್ಪರ್ಧೆ

ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುಚ್ಚ ವೆಂಕಟ್ ಮನಸ್ಸು ಮಾಡಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮುನಿರತ್ನ ವಿರುದ್ಧ ಕೆಂಡಕಾರಿದ್ದ ಹುಚ್ಚ ವೆಂಕಟ್, ಇದೀಗ ಚುನಾವಣೆ ಮೂಲಕವೇ ಮುನಿರತ್ನ ಅವರಿಗೆ ತಕ್ಕ ಪಾಠ ಕಲಿಸಲು ಹುಚ್ಚ ವೆಂಕಟ್ ಮುಂದಾಗಿದ್ದಾರೆ.

ಹೊಸ ಪಕ್ಷ ಕಟ್ಟಲು ಮುಂದಾದ ಹುಚ್ಚ ವೆಂಕಟ್

ಯಾವುದೇ ರಾಜಕೀಯ ಪಕ್ಷದ ಪರವಾಗಿ ಚುನಾವಣೆ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಸ್ಪರ್ಧಿಸುತ್ತಿಲ್ಲ. ಬದಲಾಗಿ, ತಮ್ಮದೇ ಹೊಸ ಪಕ್ಷ ಕಟ್ಟುವ ಚಿಂತನೆ ನಡೆಸಿದ್ದಾರೆ ಹುಚ್ಚ ವೆಂಕಟ್. ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ, ತಕ್ಷಣಕ್ಕೆ ಹೊಸ ಪಕ್ಷ ಸ್ಥಾಪನೆ ಮಾಡುವಷ್ಟು ಸಮಯಾವಕಾಶ ಇಲ್ಲ. ಹೀಗಾಗಿ, ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಂತೆ ಹುಚ್ಚ ವೆಂಕಟ್.

Happy All Fool's Day

ಹುಚ್ಚ ವೆಂಕಟ್ ರಾಜಕೀಯಕ್ಕೆ ಧುಮುಕುವ ಸುದ್ದಿ ಓದಿದ ಎಲ್ಲರಿಗೂ Happy All Fool's Day. ಕುಕ್ಕರ್ ಹಂಚಿದ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸಿಡಿದೆದ್ದಿದ್ದು ನಿಜ. ಆದ್ರೆ, ಮುನಿರತ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಚಿಂತನೆ ಅವರಿಗಿಲ್ಲ. ಮುಂದೊಂದು ದಿನ ಬಂದರೂ ಅಚ್ಚರಿ ಇಲ್ಲ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about Huccha Venkat contesting in upcoming election against Muniratna which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X