»   » ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ!

ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ದುನಿಯಾ' ಸೂರಿ ನಿರ್ದೇಶನದ 'ಟಗರು' ಚಿತ್ರವನ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನೋಡಿ ಯರ್ರಾಬಿರ್ರಿ ಹೊಗಳಿದ್ದು ನಿಮಗೆ ಗೊತ್ತಿರಲೇಬೇಕು.

''ನನ್ನ ಕೆರಿಯರ್ ನಲ್ಲೇ ಈ ರೀತಿಯ ಸ್ಕ್ರೀನ್ ಪ್ಲೇ ನೋಡಿಲ್ಲ'' ಅಂತೆಲ್ಲ ಸೂರಿ ನಿರ್ದೇಶನದ ಬಗ್ಗೆ ಬಾಯ್ತುಂಬ ಬಹುಪರಾಕ್ ಹೇಳಿದ್ದ ರಾಮ್ ಗೋಪಾಲ್ ವರ್ಮಾ, 'ಟಗರು' ಪುಟ್ಟಿ ಮಾನ್ವಿತಾ ಹರೀಶ್ ಅಭಿನಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು.

'ಮೇ ಮೆಂಟಲ್ ಹೋ ಜಾವಾ' ಅಂತ ಹಾಡಿ ಕುಣಿದಿರುವ ಮಾನ್ವಿತಾ ಹರೀಶ್ ಪ್ರತಿಭೆಗೆ ಫಿದಾ ಆದ ರಾಮ್ ಗೋಪಾಲ್ ವರ್ಮಾ, ಕೂಡಲೆ ತಮ್ಮ ಜೇಬಲ್ಲಿದ್ದ ಎರಡು ಸಾವಿರ ರೂಪಾಯಿ ನೋಟು ತೆಗೆದು, ಅದನ್ನ ಮಾನ್ವಿತಾ ಕೈಯಲ್ಲಿಟ್ಟು 'ನನ್ನ ಮುಂದಿನ ಸಿನಿಮಾಗೆ ಇದೇ ನಿಮಗೆ ಟೋಕನ್ ಅಡ್ವಾನ್ಸ್' ಅಂತ ಹೇಳಿದ್ದರು.

ಅಲ್ಲಿಗೆ, ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುವ ಚಿತ್ರದಲ್ಲಿ ಮಾನ್ವಿತಾ ಹರೀಶ್ ಅಭಿನಯಿಸುವುದು ಕನ್ಫರ್ಮ್ ಅಂತಲೇ ಭಾವಿಸಲಾಗಿತ್ತು. ಆದ್ರೆ, ಯಾವ ಸಿನಿಮಾದಲ್ಲಿ ಅನ್ನೋದು ಮಾತ್ರ ಇಲ್ಲಿಯವರೆಗೂ ಗುಟ್ಟಾಗಿತ್ತು. ಈಗ ಅದು ರಟ್ಟಾಗಿದೆ. ಸಂಪೂರ್ಣ ವರದಿ ಇಲ್ಲಿದೆ ಓದಿರಿ...

ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮಾನ್ವಿತಾ ಹರೀಶ್

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಹೊಸ ಚಿತ್ರಕ್ಕೆ ಕನ್ನಡತಿ ಮಾನ್ವಿತಾ ಹರೀಶ್ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದಲ್ಲಿ ಈ ಚಿತ್ರ ಏಕಕಾಲಕ್ಕೆ ಸಿದ್ಧವಾಗಲಿದ್ದು, ಈ ಮೂಲಕ ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಗೂ ಮಾನ್ವಿತಾ ಹರೀಶ್ ಪದಾರ್ಪಣೆ ಮಾಡಲಿದ್ದಾರೆ.

'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

ಚತುರ್ಭಾಷಾ ತಾರೆ ಪಟ್ಟಕ್ಕೇರಿದ ಮಾನ್ವಿತಾ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರದ ಮೂಲಕ ನಾಲ್ಕು ಭಾಷೆಗಳಲ್ಲಿ ಮಾನ್ವಿತಾ ಹರೀಶ್ ಮಿನುಗಲಿದ್ದಾರೆ. ಹೀಗಾಗಿ, ಇನ್ಮೇಲೆ ಮಾನ್ವಿತಾ ಹರೀಶ್ ಬರೀ ಕನ್ನಡ ನಟಿ ಅಲ್ಲ 'ಚತುರ್ಭಾಷಾ ತಾರೆ'!

ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್

ಸಂಭಾವನೆ ಕೇಳಿದ್ರೆ ಸುಸ್ತಾಗ್ತೀರಾ.!

''ಮಾನ್ವಿತಾ ಹರೀಶ್ ಡಿಮ್ಯಾಂಡ್ ಮಾಡುವ ಸಂಭಾವನೆಗಿಂತ ಹತ್ತು ಲಕ್ಷ ಜಾಸ್ತಿ ಕೊಡುವೆ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು ನಿಮಗೆ ನೆನಪಿದ್ಯಾ.? ಈಗ ನಾಲ್ಕು ಭಾಷೆಗಳಲ್ಲಿ ಸಿದ್ಧವಾಗುವ ತಮ್ಮ ಚಿತ್ರದಲ್ಲಿ ನಟಿಸುವ ಮಾನ್ವಿತಾ ಹರೀಶ್ ಗೆ ಆರ್.ಜಿ.ವಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆಯನ್ನ ಫಿಕ್ಸ್ ಮಾಡಿದ್ದಾರಂತೆ.! ಕನ್ನಡ ನಟಿಯರ ಪೈಕಿ ಇಷ್ಟೊಂದು ಸಂಭಾವನೆ ಪಡೆಯುತ್ತಿರುವ ಮೊಟ್ಟ ಮೊದಲ ನಟಿ ಮಾನ್ವಿತಾ ಹರೀಶ್.

ಮಹಿಳಾ ಪ್ರಧಾನ ಸಿನಿಮಾ

ಮಾನ್ವಿತಾ ಹರೀಶ್ ಅಭಿನಯಿಸುವ, ಆರ್.ಜಿ.ವಿ ಆಕ್ಷನ್ ಕಟ್ ಹೇಳುವ ಚಿತ್ರ ಮಹಿಳಾ ಪ್ರಧಾನ ಕಥೆಯಾಧರಿಸಿದೆ. ಹೀಗಾಗಿ, ಚಿತ್ರದಲ್ಲಿ ಹೀರೋ ಇಲ್ಲ. ಆದ್ರೆ, ನಾಲ್ಕು ಭಾಷೆಯ ಸ್ಟಾರ್ ಹೀರೋಗಳು ಸಿನಿಮಾದಲ್ಲಿ ಇರಲಿದ್ದಾರೆ. ಡೇಟ್ಸ್ ಕನ್ಫರ್ಮ್ ಆದ್ಮೇಲೆ ಅಧಿಕೃತ ಘೋಷಣೆ ಆಗಲಿದೆ.

Happy All Fool's Day

ಮಾನ್ವಿತಾ ಹರೀಶ್ ಗೆ ರಾಮ್ ಗೋಪಾಲ್ ವರ್ಮಾ ಫಿಕ್ಸ್ ಮಾಡಿರುವ ಸಂಭಾವನೆಯ ಸುದ್ದಿ ಓದಿದ ಎಲ್ಲರಿಗೂ Happy All Fool's Day. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರದಲ್ಲಿ ಮಾನ್ವಿತಾ ಹರೀಶ್ ಅಭಿನಯಿಸುವುದು ಪಕ್ಕಾ. ಆದ್ರೆ, ಅದು ಯಾವ ಸಿನಿಮಾ ಅನ್ನೋದಿನ್ನೂ ಕನ್ಫರ್ಮ್ ಆಗಿಲ್ಲ. ಹಾಗೇ, ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರು ಮಾಡುವ ಬಗ್ಗೆ ಆರ್.ಜಿ.ವಿ ಇನ್ನೂ ಪ್ಲಾನ್ ಮಾಡಿಲ್ಲ. ಹಾಗೇ, ಮಾನ್ವಿತಾ ಸಂಭಾವನೆ ಕೂಡ ಇನ್ನೂ ಫಿಕ್ಸ್ ಆಗಿಲ್ಲ. ಆದ್ರೆ, ನಟ-ನಟಿಯರ ಮಧ್ಯೆ ಸಂಭಾವನೆ ತಾರತಮ್ಯ ಇರುವ ಈಗಿನ ಕಾಲದಲ್ಲಿ ಮಾನ್ವಿತಾ ಪ್ರತಿಭೆಯನ್ನ ಮೆಚ್ಚಿರುವ ಆರ್.ಜಿ.ವಿ ನಾಲ್ಕು ಭಾಷೆಗಳಲ್ಲಿ ಮಹಿಳಾ ಪ್ರಧಾನ ಚಿತ್ರ ಮಾಡಲಿ, ಮಾನ್ವಿತಾ ಅಂತಹ ಕನ್ನಡ ನಾಯಕಿಯರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ಕಾಲ ಬೇಗ ಬರಲಿ ಅನ್ನೋದು ಅಭಿಮಾನಿಗಳ ಆಶಯ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about Manvitha Harish's upcoming film which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X