»   » ರಕ್ಷಿತ್ ಹುಟ್ಟುಹಬ್ಬದಂದು ನಡೆಯಲಿದೆ 'ಥಗ್ಸ್ ಆಫ್ ಮಾಲ್ಗುಡಿ' ಮುಹೂರ್ತ!

ರಕ್ಷಿತ್ ಹುಟ್ಟುಹಬ್ಬದಂದು ನಡೆಯಲಿದೆ 'ಥಗ್ಸ್ ಆಫ್ ಮಾಲ್ಗುಡಿ' ಮುಹೂರ್ತ!

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ 'ಥಗ್ಸ್ ಆಫ್ ಮಾಲ್ಗುಡಿ' ಮೂಡಿಬರಲಿದೆ ಎಂದು ಘೋಷಣೆ ಮಾಡಿ ವರ್ಷಗಳೇ ಉರುಳಿವೆ. ಆದ್ರೆ, ಚಿತ್ರ ಇನ್ನೂ ಸೆಟ್ಟೇರಿಲ್ಲ. ಕೆಲ ಚಿತ್ರಗಳ ಚಿತ್ರೀಕರಣದಲ್ಲಿ ರಕ್ಷಿತ್ ಶೆಟ್ಟಿ ಬಿಜಿಯಾಗಿರುವ ಕಾರಣ, 'ಥಗ್ಸ್ ಆಫ್ ಮಾಲ್ಗುಡಿ' ಸ್ಕ್ರಿಪ್ಟ್ ಬರೆಯುವ ಕೆಲಸ ಪೋಸ್ಟ್ ಪೋನ್ ಆಗುತ್ತಲೇ ಇತ್ತು.

''ರಕ್ಷಿತ್ ಶೆಟ್ಟಿ ಬಿಜಿಯಿದ್ದಾರೆ. ಈ ಸಿನಿಮಾ ಮಾಡುವುದು ಕಷ್ಟ ಆಗಬಹುದೇನೋ'' ಅಂತ ಸುದೀಪ್ ಟ್ವೀಟ್ ಮಾಡಿದ್ಮೇಲೆ ''ಥಗ್ಸ್ ಆಫ್ ಮಾಲ್ಗುಡಿ' ಮುಂದಕ್ಕೆ ಹೋಗಿದೆ ಅಷ್ಟೇ ಹೊರತು ಸಿನಿಮಾ ನಿಂತಿಲ್ಲ'' ಎಂದು ರಕ್ಷಿತ್ ಶೆಟ್ಟಿ ಹೇಳಿದ್ದರು.

ಇದೀಗ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದ ಸ್ಕ್ರಿಪ್ಟ್ ವರ್ಕ್ ಶುರು ಮಾಡಿರುವ ರಕ್ಷಿತ್ ಶೆಟ್ಟಿ, ಇನ್ನೆರಡು ತಿಂಗಳಲ್ಲಿ ಅಂದ್ರೆ ತಮ್ಮ ಹುಟ್ಟುಹಬ್ಬದಂದು ಚಿತ್ರದ ಮುಹೂರ್ತ ಸಮಾರಂಭ ನೆರವೇರಿಸಲು ನಿರ್ಧರಿಸಿದ್ದಾರೆ.

April Fools Day: Thugs of Malgudi muhoortha to be held on Rakshit Shettys birthday

'ಥಗ್ಸ್ ಆಫ್ ಮಾಲ್ಗುಡಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್

ಜೂನ್ 6 ರಂದು ರಕ್ಷಿತ್ ಶೆಟ್ಟಿ ಜನ್ಮದಿನ. ಅಂದೇ, ತಮ್ಮ ಕನಸಿನ ಪ್ರಾಜೆಕ್ಟ್ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನ ಶುಭಾರಂಭ ಮಾಡಲು ರಕ್ಷಿತ್ ಶೆಟ್ಟಿ ತಯಾರಿ ನಡೆಸುತ್ತಿದ್ದಾರೆ. 'ಪೈಲ್ವಾನ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆದ ಬಳಿಕ ಸುದೀಪ್ 'ಥಗ್ಸ್ ಆಫ್ ಮಾಲ್ಗುಡಿ' ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

'ಥಗ್ಸ್ ಆಫ್ ಮಾಲ್ಗುಡಿ' ತಡವಾಗಲು ನಾನೇ ಕಾರಣ ಎಂದು ಒಪ್ಪಿಕೊಂಡ ರಕ್ಷಿತ್

'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಸೆಟ್ಟೇರುವ ಸುದ್ದಿ ಓದಿದ ಎಲ್ಲರಿಗೂ Happy All Fool's Day. ತಮ್ಮ ಚಿತ್ರಗಳ ಶೂಟಿಂಗ್ ನಲ್ಲಿ ಬಿಜಿಯಾಗಿರುವ ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಸ್ಕ್ರಿಪ್ಟ್ ಇನ್ನೂ ರೆಡಿ ಮಾಡಿಲ್ಲ. ಹೀಗಾಗಿ ಸಿನಿಮಾದ ಮುಹೂರ್ತದ ಬಗ್ಗೆ ಇನ್ನೂ ಚಿಂತೆ ಮಾಡಿಲ್ಲ. ಆದಷ್ಟು ಬೇಗ, ಸ್ಕ್ರಿಪ್ಟ್ ಕೆಲಸ ಮುಗಿಸಿ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕ್ಕೆ ಚಾಲನೆ ಕೊಟ್ಟರೆ ರಕ್ಷಿತ್-ಸುದೀಪ್ ಫ್ಯಾನ್ಸ್ ಗೆ ತಾನೇ ಖುಷಿ.

English summary
Filmibeat Kannada wishes all Readers 'A Very Happy All Fool's Day'. On this occasion, here is an article about Rakshit Shetty's 'Thugs of Malgudi' muhoortha which is fictitious. Have a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X