»   » ಇಯರ್ ಎಂಡ್ ಎಣ್ಣೆ ಏಟಲ್ಲಿ ಉಪ್ಪಿಗೆ ಹಲ್ಲೆ ಮಾಡಿದ್ರಾ?

ಇಯರ್ ಎಂಡ್ ಎಣ್ಣೆ ಏಟಲ್ಲಿ ಉಪ್ಪಿಗೆ ಹಲ್ಲೆ ಮಾಡಿದ್ರಾ?

By: ಜೀವನರಸಿಕ
Subscribe to Filmibeat Kannada

'ಹುಚ್ಚ ವೆಂಕಟ್' ಅನ್ನೋ ಸಿನಿಮಾ ಶುರುವಾಗಿರೋದು, ಶೂಟಿಂಗ್ ನಡೀತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ಸಿನಿಮಾದ ನಾಯಕ ವೆಂಕಟ್ ಈಗ ನಿಜಕ್ಕೂ ಹುಚ್ಚನಂತಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ನಡೆದ ವೆಂಕಟ್ ಸೇನೆ ಉದ್ಘಾಟನೆಯ ಪ್ರೆಸ್ ಮೀಟ್ ನಲ್ಲಿ.

ಪ್ರೆಸ್ ಮೀಟ್ ನಡೀತಾ ಇದ್ದಾಗಲೇ ವೆಂಕಟ್ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ಹಲ್ಲೆ ಮಾಡಿದ್ದಾರಂತೆ. ಇದಕ್ಕೆ ಕಾರಣವಾಗಿದ್ದು ಈಯರ್ ಎಂಡ್ ಎಣ್ಣೆ ಏಟು. ಘಟನೆ ನಡೆದಿದ್ದು ಹೀಗೆ... ವೆಂಕಟ್ ಸೇನೆಯ ಪೋಸ್ಟರ್ ಡಿಸೈನ್ ಮಾಡಿ ಹತ್ತು ಹನ್ನೆರೆಡು ಪ್ರಿಂಟ್ ಗಳನ್ನ ತರೋದಕ್ಕೆ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ವೆಂಕಟ್ ಹಣವನ್ನ ಕೊಟ್ಟಿದ್ದರು. ['ಟೋಪಿವಾಲ' ಉಪೇಂದ್ರಗೆ ಮಕ್ಮಲ್ ಟೋಪಿ]

Huchcha Venkat still

ಈಯರ್ ಎಂಡ್ ಸೆಲೆಬ್ರೇಷನನ್ನೂ ಬಿಟ್ಟು ಉಪ್ಪಿ ಬೇಗನೆ ಅಂದ್ರೆ ಮಧ್ಯರಾತ್ರಿ 1:30ಕ್ಕೆ ಕೆಲಸ ಮುಗಿಸಿ ಬೆಳಗ್ಗೆ ಪೋಸ್ಟರ್ ತರೋದಕ್ಕೆ ಯೋಚಿಸಿ ಮಲಗಿದ್ದಾರೆ. ಬೆಳಿಗ್ಗೆ ಬೇಗ ಎದ್ದು ಮಗ್ಗುಲಲ್ಲಿ ಮಲಗಿದ್ದ ಹೆಂಡತಿ ಮಕ್ಕಳಿಗೂ ಹ್ಯಾಪಿ ನ್ಯೂ ಈಯರ್ ಹೇಳದೆ ಪೋಸ್ಟರ್ ಪ್ರಿಂಟ್ ಹಾಕಿಸೋಕೆ ಹೋಗಿದ್ದಾರೆ.

ಆದರೆ ಈಯರ್ ಎಂಡ್ ಎಣ್ಣೆ ಏಟಲ್ಲಿ ಮಲಗಿದ್ದ ಪ್ರಿಂಟಿಂಗ್ ನವರು ಬೆಳಿಗ್ಗೆ ಆಫೀಸಿಗೆ ಬರೋದೇ 10 ಗಂಟೆಯಾಗಿದೆ. ಅಲ್ಲಿ ಕಾದು ಕಾದು ಪ್ರಿಂಟ್ ಹಾಕಿಸಿಕೊಂಡು ಬಂದ ಉಪ್ಪಿ ಪ್ರೆಸ್ ಮೀಟ್ ಲೊಕೇಷನ್ ತಲುಪುವಾಗ ಸಮಯ ಹನ್ನೊಂದುವರೆ.

ಸಮಯ 10:30ಕ್ಕೆ ನಿಗದಿಯಾಗಿದ್ದ ಪ್ರೆಸ್ ಮೀಟ್ ನಲ್ಲಿ ಪೋಸ್ಟರ್ ವಿನೈಲ್ ಇಲ್ಲದೆ ತಲೆಕೆಡಿಸಿಕೊಂಡಿದ್ದ ಹುಚ್ಚ ವೆಂಕಟ್ ಉಪ್ಪಿಯವರ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಇದರ ಬಗ್ಗೆ ಹೇಳಿಕೊಳ್ಳೋಕೂ ಆಗದೆ ಬಿಡೋಕೂ ಆಗದೆ ಬೇಸರಮಾಡಿಕೊಂಡು ಸುಮ್ಮನಾಗಿದ್ದಾರೆ. ಈಯರ್ ಎಂಡ್ ಎಣ್ಣೆ ಏಟು ಏನೇನೆಲ್ಲಾ ಮಾಡುತ್ತಲ್ವಾ.. ಅಬ್ಬಬ್ಬಾ..!

English summary
Kannada movie 'Huchcha Venkat' hero Venkat attacks on Uppi during New Year liquor party. Don't be misunderstand here Uppi means Poster designer Uppi not a 'Sandalwood Brahma' real star Upendra.
Please Wait while comments are loading...