For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಮಂದಿಗೆ ಅಣ್ಣನಾದ ಬಾಲಣ್ಣ: ದುನಿಯಾ ವಿಜಯ್, ಬಾಲಯ್ಯ ಚಿತ್ರದ ಟೈಟಲ್ ಏನು?

  |

  ಟಾಲಿವುಡ್ ಲೆಜೆಂಟ್ ಬಾಲಕೃಷ್ಣ ಮತ್ತೆ ತನ್ನ ಖದರ್ ತೋರಿಸುತ್ತಿದ್ದಾರೆ. 'ಅಖಂಡ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಬಾಲಕೃಷ್ಣಗೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ತಮ್ಮ 107ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನೋಡಲು ಬಾಲಯ್ಯನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  ಬಾಲಕೃಷ್ಣ ನಟಿಸಿದ 'ಅಖಂಡ' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ್ದು ಟಾಲಿವುಡ್‌ಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ. ದಿಗ್ಗಜರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾಗಿದ್ದಾಗ, ಸೋತಿದ್ದ ಬಾಲಯ್ಯನ ಸಿನಿಮಾ ನೂರು ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಇದು ಟಾಲಿವುಡ್‌ ಮಂದಿಯ ನಿದ್ದೆ ಕೆಡುವಂತೆ ಮಾಡಿತ್ತು. ಈ ಕಾರಣಕ್ಕೆ ಬಾಲಯ್ಯನ 107ನೇ ಸಿನಿಮಾ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಇದೂವರೆಗೂ ಈ ಸಿನಿಮಾ ಟೈಟಲ್ ಮಾತ್ರ ಫಿಕ್ಸ್ ಆಗಿರಲಿಲ್ಲ. ಕೊನೆಗೂ ಟೈಟಲ್ ಸಿಕ್ಕೇ ಬಿಡ್ತು ಎನ್ನುತ್ತಿದೆ ಟಾಲಿವುಡ್.

  ಬಾಲಯ್ಯ 107 ಚಿತ್ರದ ಟೈಟಲ್ ಏನು?

  ಬಾಲಯ್ಯ 107 ಚಿತ್ರದ ಟೈಟಲ್ ಏನು?

  ಲೆಜೆಂಡ್ ಬಾಲಕೃಷ್ಣ 107 ಸಿನಿಮಾಗೆ ಇಡೀ ಟೈಟಲ್ ಹುಡುಕುತ್ತಿತ್ತು. ಸಿನಿಮಾದ ಶೂಟಿಂಗ್ ಆರಂಭ ಆಗಿದ್ದರೂ, ಟೈಟಲ್ ಮಾತ್ರ ಫಿಕ್ಸ್ ಆಗಿರಲಿಲ್ಲ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿದ್ದರೂ, ಟೈಟಲ್ ಇಡದೆ ಶೂಟಿಂಗ್ ಮಾಡುತ್ತಿದ್ದ ಚಿತ್ರತಂಡಕ್ಕೆ ಕೊನೆಗೂ ಪವರ್‌ ಫುಲ್ ಶೀರ್ಷಿಕೆಯೊಂದು ಸಿಕ್ಕಿದೆಯಂತೆ. ಅಂದ್ಹಾಗೆ, ಬಾಲಕೃಷ್ಣ ನಟಿಸುತ್ತಿರುವ 107 ಸಿನಿಮಾದ ಟೈಟಲ್ 'ಅಣ್ಣಾಗಾರು' ಎನ್ನುತ್ತಿದೆ ಟಾಲಿವುಡ್.

  ಸಿನಿಯರ್ ಎನ್‌ಟಿಆರ್‌ಗಿದೆ ಸಂಬಂಧ

  ಸಿನಿಯರ್ ಎನ್‌ಟಿಆರ್‌ಗಿದೆ ಸಂಬಂಧ

  ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಅಣ್ಣಾಗರು'. ಈ ಟೈಟಲ್‌ಗೂ ಬಾಲಕೃಷ್ಣ ತಂದೆ ಟಾಲಿವುಡ್ ಲೆಜೆಂಡ್ ಸಿನಿಯರ್ ಎನ್‌ಟಿಆರ್‌ಗೂ ಸಂಬಂಧವಿದೆ. ಸಿನಿಯರ್ ಎನ್‌ಟಿಆರ್‌ಗೆ ಟಾಲವುಡ್‌ನಲ್ಲಿ 'ಅಣ್ಣಾಗಾರಿ' ಎಂಬ ಬಿರುದು ಇತ್ತು. ಈಗ ಈ ಟೈಟಲ್ ಬಾಲಕೃಷ್ಣ ಸಿನಿಮಾಗೆ ಹೇಳಿ ಮಾಡಿಸಿದ ಹಾಗಿದೆ ಎಂದು ಟಾಲಿವುಡ್‌ ಹೇಳುತ್ತಿದೆ. ಅತೀ ಶೀಘ್ರದಲ್ಲಿಯೇ ಸ್ವತ: ಬಾಲಕೃಷ್ಣ ಈ ಸಿನಿಮಾದ ಟೈಟಲ್‌ ಅನ್ನು ಅನೌನ್ಸ್ ಮಾಡಲಿದ್ದಾರೆ ಎಂಬುದು ಸುದ್ದಿ.

  ಬಾಲಯ್ಯ ಲುಕ್‌ಗೆ ತಲೆಕೆಡಿಸಿಕೊಂಡಿದ್ದ ಫ್ಯಾನ್ಸ್

  ಬಾಲಯ್ಯ ಲುಕ್‌ಗೆ ತಲೆಕೆಡಿಸಿಕೊಂಡಿದ್ದ ಫ್ಯಾನ್ಸ್

  'ಅಖಂಡ' ಸಿನಿಮಾ ಈ ಮಟ್ಟಕ್ಕೆ ಕ್ರೇಜ್ ಹುಟ್ಟಿಸುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಬಾಕ್ಸಾಫೀಸ್‌ನಲ್ಲಿ ಅಖಂಡ ಚಿಂದಿ ಉಡಾಯಿಸಿತ್ತು. ಬಾಲಯ್ಯ ಲುಕ್‌ಗೆ ಬಾಕ್ಸಾಫೀಸ್‌ ನಡುಗಿ ಹೋಗಿತ್ತು. ಕರ್ನಾಟಕದಲ್ಲೂ ಬಾಲಕೃಷ್ಣ ಸಿನಿಮಾ 18 ರಿಂದ 20 ಕೋಟಿ ಬ್ಯುಸಿನೆಸ್ ಮಾಡಿತ್ತು. ವಿಶ್ವದಾದ್ಯಂತ 130 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿ ಎಲ್ಲರಿಗೂ ದೊಡ್ಡ ಶಾಕ್ ಕೊಟ್ಟಿತ್ತು. ಇಲ್ಲಿಂದ ಬಾಲಕೃಷ್ಣ ಖದರ್ ಕೂಡ ಬದಲಾಗಿದೆ.

  ಬಾಲಯ್ಯನ ಮುಂದೆ ದುನಿಯಾ ವಿಜಯ್

  ಬಾಲಯ್ಯನ ಮುಂದೆ ದುನಿಯಾ ವಿಜಯ್

  ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್ ಕೂಡ ನಟಿಸಿದ್ದಾರೆ. ಖಳನಾಯಕನಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದು, ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಕೂಡ ಮುಗಿದಿದ್ದು, ಬಾಲಯ್ಯನಿಗೆ ದುನಿಯಾ ವಿಜಯ್ ಹೇಗೆ ಟಕ್ಕರ್ ಕೊಡುತ್ತಾರೆ ಅನ್ನೋ ಕುತೂಹಲವಿದೆ.

  English summary
  Balakrishna, Duniya Vijay Starrer New Movie Title Announced As Annagaru, Know More.
  Saturday, April 30, 2022, 20:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X